More

    ಕಂಕುಳಿನ ದುರ್ವಾಸನೆಯಿಂದ ಬೇಕಾ ಮುಕ್ತಿ? ಹಾಗಾದ್ರೆ ಈ ಸಿಂಪಲ್ ಟಿಪ್​ ಅನುಸರಿಸಿ, ಆಮೇಲೆ ನೋಡಿ ಚಮತ್ಕಾರ!

    ಇದೀಗ ಬೇಸಿಗೆಗಾಲ! ಅಂದಮೇಲೆ ವಿಪರೀತ ಬೆವರಿನ ಸಮಸ್ಯೆ ಇದ್ದೇ ಇರುತ್ತದೆ. ಇದು ಅನೇಕರ ಸಮಸ್ಯೆಯೂ ಹೌದು. ಪ್ರತಿಯೊಬ್ಬರು ಬೆವರುತ್ತಾರೆ. ಆದರೆ, ಎಲ್ಲರೂ ಬೆವರುವ ಮೂಲಕ ದುರ್ವಾಸನೆ ಬೀರುವುದಿಲ್ಲ. ಕೆಲವರಿಗೆ ಕಂಕುಳಿಂದ ಹೊರಹೊಮ್ಮುವ ವಾಸನೆಯಿಂದ ಒಂದು ನಿಮಿಷ ತಲೆತಿರುಗುವಂತೆ ಆಗುತ್ತದೆ. ಇದು ಇತರರಿಗೂ ಎಷ್ಟು ಕಿರಿಕಿರಿ ಉಂಟುಮಾಡುತ್ತದೆ ಎಂಬುದು ಸಹ ಅವರ ಅರಿವಿಗೆ ಬಂದಿರುತ್ತದೆ. ಆದ್ರೆ, ಇದರಿಂದ ಹೇಗೆ ಮುಕ್ತಿ ಪಡೆಯುವುದು ಎಂಬುದು ಮಾತ್ರ ಗೊತ್ತಿರುವುದಿಲ್ಲ. ಅದಕ್ಕಾಗಿ ಸುಗಂಧ ದ್ರವ್ಯಗಳನ್ನು ಬಳಸಿ, ತಾತ್ಕಾಲಿಕ ತಡೆಗೆ ಮುಂದಾಗುತ್ತಾರೆ. ಇದು ಮತ್ತಷ್ಟು ಮಾರಕ!

    ಇದನ್ನೂ ಓದಿ: ವಿಚಾರಣೆ ವೇಳೆಯೂ 3 ನಿಂಬೆಹಣ್ಣು ಕೈಬಿಡದ ರೇವಣ್ಣ! ತಪ್ಪದ ಸಂಕಷ್ಟಕ್ಕೆ ಇದು ಪರಿಹಾರವೇ?

    ಕೆಲವರಿಗೆ ಮಾತ್ರವಲ್ಲ ಹಲವರಿಗೆ ಈ ಸಮಸ್ಯೆ ಕಾಡುತ್ತದೆ. ತಮ್ಮ ದಿನಚರಿಯಲ್ಲಿ ಕೆಲಸ ಮಾಡದೆ, ಬೆವರದೆ ಇದ್ದರೂ ಈ ಸಮಸ್ಯೆ ತಪ್ಪುವುದಿಲ್ಲ. ಕಂಕುಳಿಂದ ಹೊರಡುವ ದುರ್ವಾಸನೆ ಆ ವ್ಯಕ್ತಿಗೂ ಬಹಳ ಕಿರಿಕಿರಿ ಉಂಟುಮಾಡುವುದರ ಜತೆಗೆ ತಮ್ಮ ಅಕ್ಕ-ಪಕ್ಕದಲ್ಲಿರುವವರಿಗೂ ಸಹ ಭಾರೀ ಹಿಂಸೆ ಕೊಡುತ್ತದೆ. ಕೆಲವೊಮ್ಮೆ ಇದು ತೀವ್ರ ಮುಜುಗರಕ್ಕೂ ಕಾರಣವಾಗುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಸುಗಂಧ ದ್ರವ್ಯ ಬಳಸುವ ಬದಲಿಗೆ ಮನೆಯಲ್ಲೇ ಸಿಗುವ ನಿಂಬೆಹಣ್ಣಿನ ಮೂಲಕ ಕಂಕುಳಿನ ದುರ್ವಾಸನೆಯನ್ನು ಸಂಪೂರ್ಣವಾಗಿ ತೊಲಗಿಸಬಹುದು. ಅದಕ್ಕೆ ಈ ಸರಳ ವಿಧಾನವನ್ನು ಅನುಸರಿಸಿ.

    ಮನೆಯಲ್ಲೇ ಸಿಗುವ ಈ ನಿಂಬೆಹಣ್ಣನ್ನು ಕತ್ತರಿಸಿ ಎರಡು ಹೋಳುಗಳನ್ನಾಗಿ ಮಾಡಿ. ನಿಮ್ಮ ಕಂಕುಳಿನ ಭಾಗದಲ್ಲಿ ಕೆಲ ನಿಮಿಷ ಮಸಾಜ್ ಮಾಡಿಕೊಳ್ಳಿ. ಇದನ್ನು ಸ್ನಾನ ಮಾಡಿದ ಬಳಿಕ ಮಾಡುವುದು ಉತ್ತಮ. ಜಳಕ ಮಾಡಿಬಂದ ನಂತರ ನಿಂಬೆಹಣ್ಣಿನಿಂದ ದುರ್ವಾಸನೆಯ ಭಾಗದಲ್ಲಿ ಉಜ್ಜಿಕೊಳ್ಳುವುದು ಒಳಿತು. ಲೆಮನ್​ ನಾನ್​-ಟಾಕ್ಸಿಕ್ ಆದ ಕಾರಣ, ಇದು ದುರ್ವಾಸನೆಯನ್ನು ತಡೆಗಟ್ಟುವಲ್ಲಿ ಸಹಕಾರಿ ಹಾಗೂ ಉತ್ತಮ ಫಲಿತಾಂಶವನ್ನು ಸಹ ಕೊಡುತ್ತದೆ.

    ಇದನ್ನೂ ಓದಿ: ಹಾಲಿ ಚಾಂಪಿಯನ್ಸ್‌ಗೆ ಹಿನ್ನಡೆ, ಲಂಕೆಗೆ ವಾಪಸ್ ಆದ ಪಥಿರಣ: ಪಂಜಾಬ್ ವಿರುದ್ಧ ವಿಶಿಷ್ಠ ದಾಖಲೆ ಬರೆದ ಧೋನಿ

    ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

    5 ರೂ. ಪಾರ್ಲೆ-ಜಿ ಬಿಸ್ಕತ್​ ಬೆಲೆ ದುಬೈ, ಪಾಕಿಸ್ತಾನ ರಾಷ್ಟ್ರಗಳಲ್ಲಿ ಎಷ್ಟಿದೆ ಗೊತ್ತಾ? ಕೇಳಿದ್ರೆ ದಂಗಾಗ್ತೀರಾ!

    ಈತ ಕ್ರೀಸ್​ಗೆ ಬಂದ್ರೆ ಬೌಲರ್​ಗಳೇ ಬೆವರುತ್ತಾರೆ! ಅಜಯ್​ ಜಡೇಜಾ ಹೆಸರಿಸಿದ ಸ್ಟಾರ್​ ಬ್ಯಾಟ್ಸ್​ಮನ್ ಇವರೇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts