More

    5 ರೂ. ಪಾರ್ಲೆ-ಜಿ ಬಿಸ್ಕತ್​ ಬೆಲೆ ದುಬೈ, ಪಾಕಿಸ್ತಾನ ರಾಷ್ಟ್ರಗಳಲ್ಲಿ ಎಷ್ಟಿದೆ ಗೊತ್ತಾ? ಕೇಳಿದ್ರೆ ದಂಗಾಗ್ತೀರಾ!

    80ರ ದಶಕದಿಂದ ಹೆಚ್ಚು ಚಾಲ್ತಿಯಲ್ಲಿರುವ ಬಿಸ್ಕತ್​ ಸಂಸ್ಥೆ ಎಂದರೆ ಅದು ಪಾರ್ಲೆ-ಜಿ. 1980ಕ್ಕೂ ಹಿಂದೆ ಇದನ್ನು ‘ಪಾರ್ಲೆ-ಗ್ಲುಕೋ ಬಿಸ್ಕತ್’​ ಎಂದು ಕರೆಯಲಾಗುತ್ತಿತ್ತು. ಅದಾದ ನಂತರ ಈಗ ‘ಪಾರ್ಲೆ-ಜಿ’ ಎಂದು ಹೆಸರಿಸಲಾಗಿದೆ. 90ರ ದಶಕದಲ್ಲಿ ಬಹುತೇಕರ ಮನೆಗಳಲ್ಲಿ ಇರುತ್ತಿದ್ದ ಪಾರ್ಲೆ-ಜಿ, ಅತೀ ಹೆಚ್ಚಾಗಿ ಮಾರಾಟವಾಗುತ್ತಿದ್ದ ಬಿಸ್ಕತ್​ ಬ್ರಾಂಡ್​. ಇದರ ಹೆಸರು ಕೇಳದವರೇ ಇಲ್ಲ ಎಂದರೆ ಖಂಡಿತ ತಪ್ಪಾಗಲಾರದು. ಇಂದಿಗೂ ಮಾರುಕಟ್ಟೆಯಲ್ಲಿ ತನ್ನದೇ ಹೆಸರು ಸ್ಥಾಪಿಸಿರುವ ಈ ಬಿಸ್ಕತ್​, ತನ್ನ ಗ್ರಾಹಕರಿಗೆ ಅದೇ ಗುಣಮಟ್ಟವನ್ನು ನೀಡುತ್ತ ಬಂದಿದೆ.

    ಇದನ್ನೂ ಓದಿ: ದೇಶದ ಅಭಿವೃದ್ಧಿಗೆ ಚಾರ್ಟರ್ಡ್ ಅಕೌಂಟೆಂಟ್ ಪಾತ್ರ ಬಹಳ ಮುಖ್ಯ: ಜಗದೀಶ್ ಶೆಟ್ಟರ್

    ಈ ಬಿಸ್ಕತ್​ ಸವಿಯದವರೇ ಇಲ್ಲ ಬಿಡಿ. ಅಷ್ಟು ಫೇಮಸ್​ ಈ ಪಾರ್ಲೆ-ಜಿ. ಇಂದಿಗೂ ಈ ಬಿಸ್ಕತ್​ಗೆ ಎಲ್ಲಿಲ್ಲದ ಬೇಡಿಕೆ ಎಂದರೆ ನಂಬ್ತೀರಾ? ಖಂಡಿತ ನಂಬಲೇಬೇಕು. ಯಾಕಂದ್ರೆ ಅಷ್ಟರ ಮಟ್ಟಿಗೆ ಬೆಳೆದು ನಿಂತಿದೆ ಇದರ ಮಾರುಕಟ್ಟೆ. ಕೇವಲ ಭಾರತ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿ ಪಾರ್ಲೆ-ಜಿ ತನ್ನ ವ್ಯವಹಾರವನ್ನು ವಿಸ್ತರಿಸಿಕೊಂಡಿದೆ. ಹಳ್ಳಿಯಿಂದ ಹಿಡಿದು ನಗರದ ನಿವಾಸಿಗಳ ಮನೆಗಳಲ್ಲಿ ಈ ಪಾರ್ಲೆ-ಜಿ ಬಿಸ್ಕತ್​ ಇರುವುದು ಕಂಡುಬಂದಿದೆ. ಕೆಲವರ ದಿನಚರಿಯಲ್ಲಿ ಟೀ ಎಷ್ಟು ಮುಖ್ಯವೋ, ಟೀ ಜತೆಗೆ ಈ ಬಿಸ್ಕತ್ ಇರುವುದು ಕೂಡ ಅಷ್ಟೇ ಮುಖ್ಯ.

    ಭಾರತದಲ್ಲಿ 2ರೂ.ನಿಂದ 5, 10, 50ರೂ. ಪ್ಯಾಕೆಟ್​ನಲ್ಲಿ ಲಭಿಸುವ ಪಾರ್ಲೆ-ಜಿ ಬಿಸ್ಕತ್​, ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಸಿಗುತ್ತದೆ. ಆದರೆ, ಇದೇ ಬಿಸ್ಕತ್​ ಹೊರದೇಶಗಳಾದ ಅಮೆರಿಕಾ, ಪಾಕಿಸ್ತಾನಗಳಲ್ಲಿ ಎಷ್ಟರ ರೂ.ಗೆ ಸಿಗುತ್ತಿದೆ? ಭಾರತಕ್ಕಿಂತ ದುಬಾರಿ ಹಣಕ್ಕೆ ಮಾರಾಟವಾಗುತ್ತಿದೆಯೋ ಅಥವಾ ಇನ್ನೂ ಕಡಿಮೆ ದರದಲ್ಲಿ ಲಭಿಸುತ್ತಿದೆಯೋ ಎಂಬುದರ ಮಾಹಿತಿ ಈ ಕೆಳಕಂಡಂತಿದೆ ಗಮನಿಸಿ.

    ಇದನ್ನೂ ಓದಿ: ಆ ರೀತಿಯ ಆರೋಪಗಳಿಲ್ಲ ಎಂದು ಎಸ್​ಐಟಿ ಹೇಳಿಕೆ: ನಿರೀಕ್ಷಣಾ ಜಾಮೀನು ಅರ್ಜಿ ಹಿಂಪಡೆದ ಎಚ್​.ಡಿ. ರೇವಣ್ಣ

    ಭಾರತದಲ್ಲಿ 65 ಗ್ರಾಂ ಪಾರ್ಲೆ-ಜಿ ಬಿಸ್ಕತ್​ ಪ್ಯಾಕೆಟ್​ಗೆ ಐದು ರೂ. ನಿಗದಿಪಡಿಸಲಾಗಿದೆ. ಆದರೆ, ಇದೇ ಬಿಸ್ಕತ್​ ಅಮೆರಿಕಾ ದೇಶದಲ್ಲಿ 1 ಡಾಲರ್​ಗೆ 56.5 ಗ್ರಾಂ. ಇರುವ 8 ಪ್ಯಾಕೆಟ್​ ಬಿಸ್ಕತ್​ ಲಭಿಸುತ್ತದೆ ಎಂದು ವರದಿ ತಿಳಿಸುತ್ತದೆ. ಅಂದರೆ, ಒಂದು ಪ್ಯಾಕೆಟ್​ಗೆ 10 ರೂ. ಎಂದು ಹೇಳಲಾಗಿದೆ. ಇದೇ ಪಾಕಿಸ್ತಾನದಲ್ಲಿ ಎಷ್ಟಿದೆ ಎಂದು ನೋಡುವುದಾದರೆ, 79 ಗ್ರಾಂ. ಪಾರ್ಲೆ-ಜಿ ಬಿಸ್ಕತ್​ಗೆ 20 ರೂ. ದರವಿದೆ. ಇದನ್ನೆಲ್ಲಾ ಗಮನಿಸಿ ಹೇಳುವುದಾದರೆ, ನಮ್ಮ ದೇಶಕ್ಕಿಂತ ಹೊರರಾಷ್ಟ್ರಗಳಲ್ಲಿಯೇ ಈ ಬಿಸ್ಕತ್​ ಬೆಲೆ ದುಬಾರಿ ಇದೆ ಎಂಬುದು ಈ ವರದಿಯಿಂದ ಸ್ಪಷ್ಟವಾಗಿದೆ,(ಏಜೆನ್ಸೀಸ್).

    ಈತ ಕ್ರೀಸ್​ಗೆ ಬಂದ್ರೆ ಬೌಲರ್​ಗಳೇ ಬೆವರುತ್ತಾರೆ! ಅಜಯ್​ ಜಡೇಜಾ ಹೆಸರಿಸಿದ ಸ್ಟಾರ್​ ಬ್ಯಾಟ್ಸ್​ಮನ್ ಇವರೇ

    ಡೆಲ್ಲಿ ವಿರುದ್ಧದ ಸೋಲಿಗೆ ತಿಲಕ್ ವರ್ಮ ಕಾರಣ ಎಂದ ಹಾರ್ದಿಕ್ ಪಾಂಡ್ಯ! ನೀನೆಂಥ ಕ್ಯಾಪ್ಟನ್​? ಫ್ಯಾನ್ಸ್​ ಕಿಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts