More

    ಈತ ಕ್ರೀಸ್​ಗೆ ಬಂದ್ರೆ ಬೌಲರ್​ಗಳೇ ಬೆವರುತ್ತಾರೆ! ಅಜಯ್​ ಜಡೇಜಾ ಹೆಸರಿಸಿದ ಸ್ಟಾರ್​ ಬ್ಯಾಟ್ಸ್​ಮನ್ ಇವರೇ

    ಪ್ರಸ್ತುತ ಐಪಿಎಲ್ 17ನೇ ಆವೃತ್ತಿಯಲ್ಲಿ 10 ಬಲಿಷ್ಠ ತಂಡಗಳು ಭರ್ಜರಿ ಪ್ರದರ್ಶನ ನೀಡುತ್ತಿದ್ದು, ಒಬ್ಬರಿಗಿಂತ ಒಬ್ಬರು ಸ್ಪೋಟಕ ಪ್ರದರ್ಶನ ನೀಡುವಲ್ಲಿ ಮುಂಚೂಣಿಯಲ್ಲಿದ್ದಾರೆ. ಪ್ರತಿಯೊಂದು ಪಂದ್ಯವು ರೋಚಕವಾಗಿ ಮೂಡಿಬರುತ್ತಿದ್ದು, ಒಂದೊಂದು ಮ್ಯಾಚ್​ನಲ್ಲಿಯೂ ಹಲವಾರು ಯುವ ಪ್ರತಿಭೆಗಳು ಉತ್ತಮ ರೀತಿಯಲ್ಲಿ ಹೊರಹೊಮ್ಮುತ್ತಿದ್ದಾರೆ. ಈ ಸಂಗತಿ ಕ್ರಿಕೆಟ್ ಅಭಿಮಾನಿಗಳಲ್ಲಿ ಸಹ ಅತೀವ ಸಂತಸ ಮೂಡಿಸಿದ್ದು, ತಮ್ಮ ನೆಚ್ಚಿನ ಸ್ಟಾರ್ ಆಟಗಾರರಿಗೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

    ಇದನ್ನೂ ಓದಿ: ಮದುವೆಯಾವುದಾಗಿ ನಂಬಿಸಿ ಯುವತಿಗೆ ಮೋಸ; ಐವರ ವಿರುದ್ಧ ಎಫ್‌ಐಆರ್

    ಈ ಮಧ್ಯೆ 17ನೇ ಆವೃತ್ತಿಯ ಮೊದಲ ಪಂದ್ಯದಲ್ಲೇ ಶುಭಾರಂಭ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್​ ಸದ್ಯ 10 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಐದು ಗೆದ್ದು, ಉಳಿದ ಐದು ಮ್ಯಾಚ್​ಗಳಲ್ಲಿ ಸೋಲು ಅನುಭವಿಸಿ ಸದ್ಯ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಅಲಂಕರಿಸಿದೆ. ಈ ಮೂಲಕ ತಮ್ಮ ಪ್ಲೇ-ಆಫ್ ಕನಸನ್ನು ಇನ್ನೂ ಜೀವಂತವಾಗಿರಿಸಿದೆ. ಇದೆಲ್ಲವೂ ಒಂದೆಡೆಯಾದರೆ, ಮತ್ತೊಂದೆಡೆ ಕ್ರಿಕೆಟ್ ಅಭಿಮಾನಿಗಳ ನೆಚ್ಚಿನ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ತಮ್ಮ 43ನೇ ವಯಸ್ಸಿನಲ್ಲಿಯೂ ಕಣಕ್ಕಿಳಿಯುತ್ತಿರುವುದು ನೋಡುಗರ ಹುಬ್ಬೇರುಸುತ್ತಿದೆ.

    ಇನ್ನೂ ನಿನ್ನೆಯ (ಮೇ.01) ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಧೋನಿ ಕಡೆಯ ಎರಡು ಓವರ್​ನಲ್ಲಿ ಬ್ಯಾಟಿಂಗ್ ಮಾಡಲು ಬಂದದ್ದು, ನೋಡುಗರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿತು. ಇನ್ನು ಧೋನಿಗೆ ಬೌಲ್ ಮಾಡಲು ಪಂಜಾಬ್​ನ ಅರ್ಷ್​​ದೀಪ್ ಸಿಂಗ್​ ಅಖಾಡಕ್ಕೆ ಇಳಿದಾಗ, ಬಹುಶಃ ಈಗ ಎಂ.ಎಸ್​. ಧೋನಿ ಅವರ ವಿಕೆಟ್ ಪತನವಾಗಬಹುದು ಎಂದೇ ಅನೇಕರು ನಿರೀಕ್ಷಿಸಿದ್ದರು. ಆದರೆ, ಅಲ್ಲಿ ಆಗಿದ್ದು ಮಾತ್ರ ಉಲ್ಟಾ! ಒತ್ತಡಕ್ಕೆ ಒಳಗಾದ ಅರ್ಷ್​​ದೀಪ್, ಸತತವಾಗಿ ವೈಡ್​ಗಳನ್ನು ಹಾಕುವ ಮೂಲಕ ಸಿಎಸ್​ಕೆಗೆ ಹೆಚ್ಚುವರಿ ರನ್ ಪುಕ್ಕಟೆಯಾಗಿ ಕೊಟ್ಟರು.

    ಇದನ್ನೂ ಓದಿ: ಹೊಳೆಗಳ ಒಡಲಲ್ಲಿ, ಸುತ್ತಮುತ್ತಲ ಪರಿಸರಗಳಲ್ಲಿ ಗೋಚರಿಸುತ್ತಿದೆ ಕಸದ ರಾಶಿ

    ಇದನ್ನು ಗಮನಿಸಿದ ಟೀಂ ಇಂಡಿಯಾದ ಮಾಜಿ ಆಟಗಾರ ಅಜಯ್ ಜಡೇಜಾ ಮಾತನಾಡಿ, “ಎಂ.ಎಸ್​. ಧೋನಿ ಡ್ರೆಸ್ಸಿಂಗ್ ರೂಮ್​ನಿಂದ ಕ್ರೀಸ್​ಗೆ ಹೊರಬರುತ್ತಿದ್ದರೆ ಸಾಕು, ವೇಗಿಗಳು ಬೆವರಲು ಪ್ರಾರಂಭಿಸುತ್ತಾರೆ. ಯಾಕಂದ್ರೆ, ಧೋನಿ ಅಖಾಡಕ್ಕೆ ಬಂದರೆ ಬೌಲರ್​ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಅದನ್ನು ಈ ಹಿಂದೆಯೇ ನಾವೆಲ್ಲಾ ನೋಡಿದ್ದೇವೆ. ಅದಕ್ಕೆ ಹಲವಾರು ನಿದರ್ಶನಗಳು ಸಹ ಇವೆ”  ಎಂದಿದ್ದಾರೆ. ಸದ್ಯ ಅಜಯ್ ಹೇಳಿಕೆಗೆ ಧೋನಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).

    ಡರೈಲ್​ ಮಿಚೆಲ್​ಗೆ ಕ್ರೀಸ್​ ಕೊಡಲಿಲ್ಲ ಅನ್ನೋದಕ್ಕೆ ಕಾರಣವಿದೆ! ಧೋನಿ ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ

    ಟೀಂ ಇಂಡಿಯಾದಲ್ಲಿ ಧೋನಿ ಸ್ಥಾನವನ್ನು ಈತ ತುಂಬಲಿದ್ದಾನೆ: ಯುವ ಸ್ಟಾರ್​​ ಆಟಗಾರನ ಮೇಲೆ ಸಿದ್ದು ಭರವಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts