More

    ಡರೈಲ್​ ಮಿಚೆಲ್​ಗೆ ಕ್ರೀಸ್​ ಕೊಡಲಿಲ್ಲ ಅನ್ನೋದಕ್ಕೆ ಕಾರಣವಿದೆ! ಧೋನಿ ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ

    ಚೆನ್ನೈ: ನಿನ್ನೆ (ಮೇ 01) ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂಜಾಬ್​ ಕಿಂಗ್ಸ್​ ಮತ್ತು ಚೆನ್ನೈ ಸೂಪರ್ ಕಿಂಗ್ಸ್​ ನಡುವಿನ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ಪಂಜಾಬ್ ಏಳು ವಿಕೆಟ್​ಗಳ ಅಂತರದಿಂದ ಗೆದ್ದು ಬೀಗಿತು. ಈ ಮ್ಯಾಚ್​ನಲ್ಲಿ 17.4ನೇ ಓವರ್​ನಲ್ಲಿ ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್ ವಿಕೆಟ್ ಕಳೆದುಕೊಂಡ ಸಿಎಸ್​ಕೆ ಹೆಚ್ಚು ರನ್​ ಕಲೆಹಾಕುವಲ್ಲಿ ಹಿಂದುಳಿಯಿತು. ರುತುರಾಜ್ ಪೆವಿಲಿಯನ್​ ಕಡೆ ಹೋಗುತ್ತಿದ್ದಂತೆ ಕ್ರೀಸ್​ಗೆ ಬಂದ ಮಹೇಂದ್ರ ಸಿಂಗ್ ಧೋನಿ ಮೇಲೆ ಹೆಚ್ಚಿನ ಭರವಸೆ ಮೂಡಿತು. ಆದರೆ ಈ ಮಧ್ಯೆ ನಡೆದ ಒಂದು ಘಟನೆ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

    ಇದನ್ನೂ ಓದಿ: ನಾನು ಹೇಳಲು ತುಂಬಾ ಇದೆ, ಆದ್ರೆ ಮೌನವಾಗಿದ್ದೇನೆ; ಪಾಕ್​ ಕ್ರಿಕೆಟಿಗನಿಂದ ದೂರವಾದ ಸಾನಿಯಾ

    ಪಂದ್ಯದ ವೇಳೆ ಎಂ.ಎಸ್​. ಧೋನಿ ಅವರ ನಡೆ ಇದೀಗ ಭಾರೀ ಟೀಕೆಗೆ ಗುರಿಯಾಗಿದೆ. ಕಡೆಯ ಓವರ್​ನಲ್ಲಿ ಸ್ಫೋಟಕ ಆಟಗಾರ ಡರೈಲ್​ ಮಿಚೆಲ್​ಗೆ ಧೋನಿ ಕ್ರೀಸ್​ ಕೊಡದೆ ವಾಪಸ್​ ನಾನ್​ ಸ್ಟ್ರೈಕರ್​ ವಿಭಾಗಕ್ಕೆ ಓಡಿಸಿದ ದೃಶ್ಯ ಕ್ರೀಡಾಭಿಮಾನಿಗಳು ಮಾತ್ರವಲ್ಲದೇ ಮಾಜಿ ಕ್ರಿಕೆಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಈ ಕುರಿತು ಟೀಂ​ ಇಂಡಿಯಾದ ಮಾಜಿ ಆಟಗಾರ ಇರ್ಫಾನ್​ ಪಠಾಣ್ ಸೇರಿದಂತೆ ಕೆಲವರು ‘ಕ್ಯಾಪ್ಟನ್ ಕೂಲ್’ ನಡೆಯನ್ನು ಖಂಡಿಸಿದ್ದಾರೆ.

    ಒಂದೆಡೆ ಧೋನಿ ಮಾಡಿದ್ದು ಅಕ್ಷಮ್ಯ. ತಂಡದ ಪರ ಸ್ಪೋಟಕ ಬ್ಯಾಟಿಂಗ್ ಮಾಡುವ ಸಾಮರ್ಥ್ಯವಿರುವ ಡರೈಲ್​ ಮಿಚೆಲ್​ಗೆ ಕ್ರೀಸ್​ ಬಿಟ್ಟುಕೊಡಬಹುದಿತ್ತು. ಅದನ್ನು ಮಾಡದೆ, ಸ್ಟ್ರೈಕರ್​ ಎಂಡ್​ಗೆ ಓಡಿಬಂದ ಆಟಗಾರನನ್ನು ಮಾಹಿ ವಾಪಾಸ್​ ಕಳಿಸಿದ್ದು ಸರಿಯಲ್ಲ. ದಿಗ್ಗಜ ಆಟಗಾರನಾಗಿ ಅವಕಾಶ ಕೊಡಬೇಕಿತ್ತು ಎಂದು ನೆಟ್ಟಿಗರು ಅಭಿಪ್ರಾಯಿಸಿದ್ದಾರೆ. ಆದರೆ, ಇದೆಲ್ಲವನ್ನು ಗಮನಿಸಿದ ಕ್ರಿಕೆಟ್ ಅಭಿಮಾನಿಗಳು, ಧೋನಿ ಮಾಡಿದ್ದರಲ್ಲಿ ತಪ್ಪೇನಿಲ್ಲ. ಅಂತಿಮ ಓವರ್​ ಹತ್ತಿರವಿದ್ದಾಗ ಕೇವಲ ಒಂದೆರೆಡು ರನ್​ ಗಳಿಸುವುದಕ್ಕಿಂತ ಸಿಕ್ಸರ್​ ಮತ್ತು ಫೋರ್​​ಗಳನ್ನು ಸಿಡಿಸುವುದು ಉತ್ತಮ ಎಂಬ ನಿಟ್ಟಿನಿಂದ ಧೋನಿ ತಮ್ಮ ಸ್ಟ್ರೈಕ್ ಕೊಡದೆ ಉಳಿಸಿಕೊಂಡರು ಅಷ್ಟೇ ಎಂದು ಸಮರ್ಥಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಸಪ್ತಪದಿ ತುಳಿದ ಟಗರು ಪುಟ್ಟಿ ಮಾನ್ವಿತಾ ಕಾಮತ್

    ಅಸಲಿಗೆ ನಡೆದಿದ್ದೇನು?
    ನಿನ್ನೆ ನಡೆದ ಪಂದ್ಯದಲ್ಲಿ ಪಂಜಾಬ್ ತಂಡ ಚೆನ್ನೈ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಚೆನ್ನೈ ನೀಡಿದ್ದ 163 ರನ್‌ಗಳ ಗುರಿಯನ್ನು 17.5 ಓವರ್‌ಗಳಲ್ಲೇ ಪಂಜಾಬ್​ ಮುಟ್ಟಿತು. ಇದರೊಂದಿಗೆ 10 ಪಂದ್ಯಗಳಲ್ಲಿ 4 ಗೆಲುವಿನೊಂದಿಗೆ ಪಂಜಾಬ್​ ಪ್ಲೇ ಆಫ್ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಚೆನ್ನೈ ಇನ್ನಿಂಗ್ಸ್ ವೇಳೆ ಕೊನೆಯ ಓವರ್ ಬೌಲಿಂಗ್ ಮಾಡಲು ಅರ್ಷದೀಪ್ ಸಿಂಗ್ ಬಂದಿದ್ದರು. ಈ ವೇಳೆ ಕ್ರೀಸ್‌ನಲ್ಲಿ ಧೋನಿ-ಡರೈಲ್​ ಮಿಚೆಲ್ ಇದ್ದರು. ಧೋನಿ ಸ್ಟ್ರೈಕರ್​ ವಿಭಾಗದಲ್ಲಿದ್ದರೆ, ಸಹಜವಾಗಿ ಬೌಲರ್‌ಗಳ ಮೇಲೆ ಸ್ವಲ್ಪ ಒತ್ತಡವಿರುತ್ತದೆ. ಹೀಗಾಗಿಯೇ ಅರ್ಷದೀಪ್ ಮೊದಲ ಎಸೆತವನ್ನು ವೈಡ್ ಎಸೆದರು.

    ನಂತರದ ಎಸೆತವನ್ನು ಧೋನಿ ಬೌಂಡರಿ ಬಾರಿಸಿದರು. ಆ ಬಳಿಕ ಅರ್ಷದೀಪ್​ ಮತ್ತೊಂದು ವೈಡ್ ಬೌಲ್ ಮಾಡಿದರು. ಮೂರನೇ ಎಸೆತವನ್ನು ಧೋನಿ ಬಲವಾಗಿ ಹೊಡೆದರು. ಆದರೆ, ಶಾಟ್ ಸರಿಯಾಗಿ ಕನೆಕ್ಟ್ ಆಗಲಿಲ್ಲ. ಚೆಂಡು ಗಾಳಿಯಲ್ಲಿ ಹಾರಿತು. ಈ ವೇಳೆ ನಾನ್ ಸ್ಟ್ರೈಕರ್​ ವಿಭಾಗದಲ್ಲಿ ಡರೈಲ್​ ಮಿಚೆಲ್ ರನ್​ಗಾಗಿ ಓಡಿದರು. ಆದರೆ ಧೋನಿ ಅವರನ್ನು ಹಿಂದಕ್ಕೆ ಹೋಗುವಂತೆ ಹೇಳಿದರು. ಆದರೆ ಅದಾಗಲೇ ಡರೈಲ್​ ಮಿಚೆಲ್​, ಧೋನಿ ಇದ್ದ ಕ್ರೀಸ್‌ಗೆ ಹೋಗಿದ್ದರು ಮತ್ತು ವಾಪಸ್ ಬಂದರು. ಅಷ್ಟರಲ್ಲಿ ಫೀಲ್ಡರ್ ಚೆಂಡನ್ನು ಎಸೆದರು. ಆದರೆ ಚೆಂಡು ವಿಕೆಟ್‌ಗೆ ತಾಗದ ಕಾರಣ ಮಿಚೆಲ್ ರನ್ ಔಟ್‌ನಿಂದ ಪಾರಾದರು. 4ನೇ ಎಸೆತದಲ್ಲಿ ಯಾವುದೇ ರನ್​ ಬರಲಿಲ್ಲ. 5ನೇ ಎಸೆತವನ್ನು ಧೋನಿ ಸಿಕ್ಸರ್‌ಗೆ ಬಾರಿಸಿದರು. ಈ ಪಂದ್ಯದಲ್ಲಿ ಧೋನಿ 11 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 14 ರನ್ ಗಳಿಸಿದರು.

    ಇಬ್ಬರ ಜೀವನದಲ್ಲಿ ಮಧ್ಯಪ್ರವೇಶಿಸುವ ಹಕ್ಕು ಯಾವನಿಗೂ ಇಲ್ಲ: ಸಿಡಿದೆದ್ದ ಗೌತಮ್​ ಗಂಭೀರ್

    ಪ್ರಜ್ವಲ್ ರೇವಣ್ಣ ವಿಡಿಯೋ ವಿಚಾರ: ಕೆ. ಅಣ್ಣಾಮಲೈ ಕೊಟ್ಟ ಪ್ರತಿಕ್ರಿಯೆ ಹೀಗಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts