ಪ್ರಜ್ವಲ್ ರೇವಣ್ಣ ವಿಡಿಯೋ ವಿಚಾರ: ಕೆ. ಅಣ್ಣಾಮಲೈ ಕೊಟ್ಟ ಪ್ರತಿಕ್ರಿಯೆ ಹೀಗಿದೆ

WhatsApp Image 2024-05-02 at 1.23.01 PM
Published on

ಬಾಗಲಕೋಟೆ: ರಾಷ್ಟ್ರಮಟ್ಟಕ್ಕೆ ತಲುಪಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಲೈಂಗಿಕ ದೌರ್ಜನ್ಯ ಪ್ರಕರಣ ಇದೀಗ ದಿನದಿಂದ ದಿನಕ್ಕೆ ಹಲವು ತಿರುವು ಪಡೆದುಕೊಳ್ಳುತ್ತಿದೆ. ಸದ್ಯ ಈ ವಿಷಯ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಹುಟ್ಟುಹಾಕಿದ್ದು, ಬಿಜೆಪಿ ವಿರುದ್ಧ ಕಾಂಗ್ರೆಸ್​ ನಾಯಕರು ಸರಣಿ ಆರೋಪಗಳನ್ನು ಎಸಗಿದ್ದಾರೆ. ಸದ್ಯ ಪ್ರಜ್ವಲ್ ರೇವಣ್ಣ ವಿಡಿಯೋ ವಿಚಾರಕ್ಕೆ ಸ್ಪಂದಿಸಿದ ಕೆ.ಅಣ್ಣಾಮಲೈ, ಪ್ರಕರಣದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಈ ರೀತಿ ತಿಳಿಸಿದ್ದಾರೆ.

ಇಂದು ಬಾಗಲಕೋಟೆಯ ಜಮಖಂಡಿಯಲ್ಲಿ ಮಾತನಾಡಿದ ಕೆ. ಅಣ್ಣಾಮಲೈ, "ಅಮಿತ್ ಷಾ ಅವರು ಈ ಬಗ್ಗೆ ಬಹಳ‌ ಕ್ಲಿಯರ್ ಆಗಿ ಹೇಳಿದ್ದಾರೆ. ಎಸ್ಐಟಿ ತನಿಖೆ ಕೈಗೊಂಡಿದೆ. ಯಾವ ಕ್ರಮ ಬೇಕಾದರೂ ಕೈಗೊಳ್ಳಲ್ಲಿ ಅಂತ ಹೇಳಿದ್ದಾರೆ, ಕಂಪ್ಲೆಂಟ್ ಕೊಡ್ತಾರೆ ಕ್ರಮ ತೆಗೆದುಕೊಳ್ಳಲಿ" ಎಂದು ಹೇಳಿದರು.

"ಇದರಲ್ಲಿ ತಡೆ ಮಾಡೋದಕ್ಕೆ, ತನಿಖೆ ಮುಚ್ಚಿ ಹಾಕೋದಕ್ಕೆ ಬಿಜೆಪಿ ಏನಾದರೂ ಮುಂದಾಗಿದೆಯಾ? ಇಲ್ಲ. ತನಿಖೆ ಏನಾಗುತ್ತದೆಯೋ ಅದು ಆಗುತ್ತದೆ. ಕ್ಲಿಯರ್ ಆಗಿ ಇನ್ವೆಸ್ಟಿಗೇಷನ್ ಮಾಡಿ ಕ್ರಮ ಕೈಗೊಳ್ಳಬೇಕು. ತಪ್ಪು ಯಾರು ಮಾಡಿದ್ದಾರೋ ಅವರ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಡಿಕೆಶಿ ಕೈವಾಡದ ಬಗ್ಗೆ ಕೇಳಿಬಂದ ಆರೋಪ ಕುರಿತು ನಾನು ಏನು ಹೇಳೋದಿಲ್ಲ. ತನಿಖೆ ನಡೆಯುತ್ತಿದೆ, ಆ ಮೂಲಕ ಎಲ್ಲ ಹೊರಬರಲಿದೆ" ಎಂದು ಖಡಕ್ ಆಗಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net