More

    ಕೊನೆಗೂ ಅನುಷ್ಕಾಶೆಟ್ಟಿ ಮದುವೆ ಫಿಕ್ಸ್..ಆ ದೊಡ್ಡ ನಿರ್ಮಾಪಕನ ಜೊತೆ.. ವಯಸ್ಸು ಎಷ್ಟು ಗೊತ್ತಾ?

    ಬೆಂಗಳೂರು: ದಕ್ಷಿಣ ಭಾರತದ ಸ್ಟಾರ್​ ನಟಿಯರಲ್ಲಿ ಒಬ್ಬರಾಗಿ ಟಾಲಿವುಡ್​ನಲ್ಲಿ ತನ್ನದೇ ಇಮೇಜ್​ ಸೃಷ್ಟಿಸಿಕೊಂಡಿರುವ ಅನುಷ್ಕಾ ಶೆಟ್ಟಿ ಈಗಲೂ ತೆಲುಗು ಚಿತ್ರರಂಗದಲ್ಲಿ ಕ್ರೇಜಿ ಪ್ರಾಜೆಕ್ಟ್ ಗಳನ್ನು ಮಾಡುತ್ತಲೇ ಇದ್ದಾರೆ. ಇತ್ತೀಚೆಗೆ ಆಫರ್​ಗಳು ಕಡಿಮೆಯಾಗಿದ್ದು, ಹಲವು ಕಾರಣಗಳಿಗಾಗಿ ಈ ನಟಿಯ ಮದುವೆ ಬಗ್ಗೆ ಒಂದಿಲ್ಲೊಂದು ಚರ್ಚೆ ನಡೆಯುತ್ತಲೇ ಇರುತ್ತದೆ. ಈಗ ಈ ಕುರಿತು ಅನಿರೀಕ್ಷಿತ ಸುದ್ದಿಯೊಂದು ಸಿನಿ ಇಂಡಸ್ಟ್ರಿಯಲ್ಲಿ ಹರಿದಾಡುತ್ತಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್​ ಆಗಿದೆ.

    ಇದನ್ನೂ ಓದಿ: ಗರ್ಭದಲ್ಲಿರುವ ಮಗುವಿಗೆ ಬದುಕುವ ಮೂಲಭೂತ ಹಕ್ಕಿದೆ : ಸುಪ್ರೀಂಕೋರ್ಟ್ ಮಹತ್ವದ ತೀರ್ಪು

    ಟಾಲಿವುಡ್​ನಲ್ಲಿ ಅನುಷ್ಕಾ ‘ಅರುಂಧತಿ, ‘ಬಾಹುಬಲಿ’ಯಂಥ ಸಿನಿಮಾಗಳಲ್ಲಿ ಮಿಂಚಿದ ಅನುಷ್ಕಾ ಇತ್ತೀಚೆಗೆ ಸ್ವಲ್ಪ ದಪ್ಪವಾದಂತೆ ಕಾಣುತ್ತಿದ್ದು, ಆಕೆಗೆ ಬೇಡಿಕೆ ಕಡಿಮೆಯಾಗಿದೆ ಎಂಬುದು ಸುಳ್ಳಲ್ಲ. ಈಗ ಅನುಷ್ಕಾ ‘ಘಾಟಿ’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾಳೆ. ಈ ನಡುವೆ ಪ್ಯಾನ್ ಇಂಡಿಯಾ ಸ್ಟಾರ್​ ನಟ ಪ್ರಭಾಸ್ ಜೊತೆ ಮದುವೆ ಬಗ್ಗೆ ಹಲವು ಸುದ್ದಿಗಳು ಹರಿದಾಡಿದ್ದು ಗೊತ್ತೇ ಇದೆ. ಈ ಚೆಲುವೆ ಪ್ರಭಾಸ್ ಅವರನ್ನು ಪ್ರೀತಿಸುತ್ತಿದ್ದು, ಶೀಘ್ರದಲ್ಲೇ ಅವರು ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದವು.

    ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿದ್ದ ಅನುಷ್ಕಾ ಶೆಟ್ಟಿಗೆ ಮದುವೆ ಫಿಕ್ಸ್ ಆಗಿರುವುದರಿಂದಲೇ ಇತ್ತೀಚಿಗೆ ಚಿತ್ರಗಳಲ್ಲಿ ಹೆಚ್ಚಾಗಿ ಅಭಿನಯಿಸುತ್ತಿಲ್ಲ ಎಂಬ ಸುದ್ದಿ ಹಬ್ಬುತ್ತಿದೆ. ಇದರ ಭಾಗವಾಗಿಯೇ ಅನುಷ್ಕಾ ಶೆಟ್ಟಿ ಮದುವೆಯ ಸುದ್ದಿ ಟಾಲಿವುಡ್‌ನಲ್ಲಿ ಚರ್ಚೆಯಾಗುತ್ತಿದೆ.

    ಇದರ ಪ್ರಕಾರ.. ಸದ್ಯದಲ್ಲೇ ಈ ಸ್ಟಾರ್ ಹೀರೋಯಿನ್ ಹಸೆಮಣೆ ಏರಲಿದ್ದಾಳೆ. ಅನುಷ್ಕಾ ಶೆಟ್ಟಿ ಕನ್ನಡ ಚಿತ್ರರಂಗದ ದೊಡ್ಡ ನಿರ್ಮಾಪಕರೊಬ್ಬರ ಜೊತೆ ಮದುವೆಗೆ ರೆಡಿಯಾಗುತ್ತಿದ್ದಾಳೆ. ಸದ್ಯದಲ್ಲೇ ಇಬ್ಬರಿಗೂ ನಿಶ್ಚಿತಾರ್ಥ ಮಾಡಲು ಎರಡೂ ಕುಟುಂಬದ ಹಿರಿಯರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

    ಮೇಲಾಗಿ ಈ ವರ್ಷಾಂತ್ಯದಲ್ಲಿ ಅನುಷ್ಕಾ ಮದುವೆ ನಡೆಯಲಿದೆಯಂತೆ. ಅಲ್ಲದೇ ನಿರ್ಮಾಪಕರಿಗೆ 42 ವರ್ಷ ಎಂಬ ಸುದ್ದಿ ವೈರಲ್ ಆಗುತ್ತಿದೆ.

    12 ವರ್ಷದ ಬಳಿಕ ಹಾಲಿವುಡ್​ಗೆ ನಟಿ ಟಬು ರೀ ಎಂಟ್ರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts