ಹಾಲಿ ಚಾಂಪಿಯನ್ಸ್‌ಗೆ ಹಿನ್ನಡೆ, ಲಂಕೆಗೆ ವಾಪಸ್ ಆದ ಪಥಿರಣ: ಪಂಜಾಬ್ ವಿರುದ್ಧ ವಿಶಿಷ್ಠ ದಾಖಲೆ ಬರೆದ ಧೋನಿ

New-Project-3-1
Published on

ಧರ್ಮಶಾಲಾ: ರವೀಂದ್ರ ಜಡೇಜಾ (43 ರನ್, 26 ಎಸೆತ, 3 ಬೌಂಡರಿ, 2 ಸಿಕ್ಸರ್, 20ಕ್ಕೆ 3 ವಿಕೆಟ್) ಆಲ್ರೌಂಡ್ ನಿರ್ವಹಣೆಯ ಬಲದಿಂದ ಹಾಲಿ ಚಾಂಪಿಯನ್ ಚೆನ್ನೈ ಸೂಪರ್‌ಕಿಂಗ್ಸ್ ತಂಡ ಐಪಿಎಲ್-17ರಲ್ಲಿ ಪಂಜಾಬ್ ಕಿಂಗ್ಸ್ ಎದುರು 28 ರನ್‌ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ಋತುರಾಜ್ ಗಾಯಕ್ವಾಡ್ ಬಳಗ ಪ್ಲೇಆ್ ಅವಕಾಶ ವೃದ್ಧಿಸಿಕೊಂಡಿದೆ. ಜತೆಗೆ 2021ರ ನಂತರ ಪಂಜಾಬ್ ಕಿಂಗ್ಸ್ ಎದುರು ಮೊದಲ ಗೆಲುವಿನ ಸಂಭ್ರಮ ಕಂಡಿದೆ. ಸೋಲಿನೊಂದಿಗೆ ಸ್ಯಾಮ್ ಕರ‌್ರನ್ ಪಡೆ ಪ್ಲೇಆ್ ಕನಸು ಬಹುತೇಕ ಭಗ್ನಗೊಂಡಿದೆ.

ಸಿಎಸ್‌ಕೆ ತಂಡದ ಪ್ರಮುಖ ಬೌಲಿಂಗ್ ಅಸ ಎನಿಸಿರುವ ಶ್ರೀಲಂಕಾದ ವೇಗಿ ಮಥೀಶ ಪಥಿರಣ ಮಂಡಿರಜ್ಜು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಪುನಶ್ಚೇತನಕ್ಕಾಗಿ ತವರಿಗೆ ಹಿಂದಿರುಗಿದ್ದಾರೆ ಎಂದು ್ರಾಂಚೈಸಿ ಭಾನುವಾರ ತಿಳಿಸಿದೆ. ಹಾಲಿ ಐಪಿಎಲ್‌ನಲ್ಲಿ ಆಡಿರುವ 6 ಪಂದ್ಯಗಳಲ್ಲಿ 13 ವಿಕೆಟ್ ಪಡೆದಿರುವ ಪಥಿರಣ ಅಲಭ್ಯತೆ ಸಿಎಸ್‌ಕೆಗೆ ದೊಡ್ಡ ಹಿನ್ನಡೆ ತಂದಿದೆ. ಸನ್‌ರೈಸರ್ಸ್‌ ವಿರುದ್ಧ ಕೊನೆಯದಾಗಿ ಆಡಿದ ಪಥಿರಣ 4 ಓವರ್ ಕೋಟಾ ಪೂರ್ಣಗೊಳಿಸುವಲ್ಲಿ ಸಮಸ್ಯೆ ಎದುರಿಸಿದ್ದರು. ಸಿಎಸ್‌ಕೆ ತಂಡದ ಮುಂದಿನ ಪಂದ್ಯಗಳಿಗೆ ಪಥಿರಣ ಲಭ್ಯತೆಯ ಬಗ್ಗೆ ್ರಾಂಚೈಸಿ ಖಚಿತ ಮಾಹಿತಿ ನೀಡಿಲ್ಲ. ಆಲ್ರೌಂಡರ್ ದೀಪಕ್ ಚಹರ್ ಸಹ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದು, ಫಿಸಿಯೋ ಮತ್ತು ವೈದ್ಯರ ನಿಗಾದಲ್ಲಿದ್ದಾರೆ. ಮತ್ತೊಂದೆಡೆ ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ ರಾಷ್ಟ್ರೀಯ ತಂಡದ ಸೇವೆಗಾಗಿ ಟೂರ್ನಿಯಿಂದ ನಿರ್ಗಮಿಸಿರುವುದು ಕೂಡ ಸಿಎಸ್‌ಕೆ ತಂಡಕ್ಕೆ ಹಿನ್ನಡೆ ಎನಿಸಿದೆ.

10: ಐಪಿಎಲ್ ಆವೃತ್ತಿಯ ಮೊದಲ 11 ಪಂದ್ಯಗಳಲ್ಲಿ 10 ಟಾಸ್ ಸೋತ ಎರಡನೇ ನಾಯಕ ಋತುರಾಜ್ ಗಾಯಕ್ವಾಡ್. ಸಂಜು ಸ್ಯಾಮ್ಸನ್(2022) ಮೊದಲಿಗ.

16: ರವಿಂದ್ರ ಜಡೇಜಾ ಸಿಎಸ್‌ಕೆ ಪರ ಐಪಿಎಲ್‌ನಲ್ಲಿ ಗರಿಷ್ಠ ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಆಟಗಾರ ಎನಿಸಿದರು. ಎಂಎಸ್ ಧೋನಿ (15), ಸುರೇಶ್ ರೈನಾ (11) ನಂತರದಲ್ಲಿದ್ದಾರೆ.

150: ಎಂಎಸ್ ಧೋನಿ ಐಪಿಎಲ್‌ನಲ್ಲಿ 150 ಕ್ಯಾಚ್ ಪಡೆದ ಮೊದಲ ವಿಕೆಟ್ ಕೀಪರ್ ಎನಿಸಿದರು.

3. ರವೀಂದ್ರ ಜಡೇಜಾ ಐಪಿಎಲ್‌ನಲ್ಲಿ 40 ಪ್ಲಸ್ ರನ್ ಹಾಗೂ 3 ವಿಕೆಟ್ ಪಡೆದ ಶೇನ್ ವ್ಯಾಟ್ಸನ್, ಯವರಾಜ್ ಸಿಂಗ್ (3) ದಾಖಲೆ ಸರಿಗಟ್ಟಿದರು.

5. ಎರಡು ತಂಡಗಳ ವಿಕೆಟ್ ಕೀಪರ್-ಬ್ಯಾಟರ್‌ಗಳು ಐಪಿಎಲ್‌ನಲ್ಲಿ ಡಕೌಟ್ ಆದ 5ನೇ ದೃಷ್ಟಾಂತ ಇದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net