More

    ಜಿಲ್ಲೆಯಲ್ಲಿ ಸಾಮಾಜಿಕ ನ್ಯಾಯ ಸೋತಿದೆ


    ಗದಗ: ‘ಜಿಲ್ಲೆಯಲ್ಲಿ ಸಾಮಾಜಿಕ ನ್ಯಾಯ ಸೋತಿದೆ. ಚಿಕ್ಕ ಜಿಲ್ಲೆಯಾದರೂ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಂಡಿಲ್ಲ’ ಎಂದು ಚಲನಚಿತ್ರ ನಟ, ಆಮ್‌ಆದ್ಮಿ (ಆಪ್) ಪಕ್ಷದ ಮುಖಂಡ ಮುಖ್ಯಮಂತ್ರಿ ಚಂದ್ರು ಆರೋಪಿಸಿದರು.
    ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಜಿಲ್ಲೆಯಲ್ಲಿ ನಾಲ್ಕು ಮತಕ್ಷೇತ್ರಗಳಿದ್ದರೂ ಕೇವಲ ಒಂದು ಮೀಸಲಾತಿ ಕ್ಷೇತ್ರ ಒದಗಿಸಲಾಗಿದೆ. 40% ಕಮಿಷನ್ ಲೂಟಿಯಿಂದಾಗಿ ಜಿಲ್ಲೆ ಅನಭಿವೃದ್ಧಿಯತ್ತ ಸಾಗುವಂತಾಗಿದೆ’ ಎಂದು ದೂರಿದರು.
    ಆಪ್ ಸರ್ಕಾರ ರಚನೆಯಾದರೆ, 200 ಯುನಿಟ್ ಉಚಿತ ವಿದ್ಯುತ್, ಉಚಿತ ಆರೋಗ್ಯ, ಹೈಟೆಕ್ ಆಸ್ಪತ್ರೆ, ಮಹಿಳೆಯರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದರು.
    ಶಿಕ್ಷಣ, ಭ್ರಷ್ಟಾಚಾರ ಹಾಗೂ ಗಡಿ ಸಮಸ್ಯೆ ಬಗೆಹರಿಸುವುದರಲ್ಲಿ ರಾಜಕೀಯ ಪಕ್ಷಗಳು ಸೋತಿವೆ. ಲೋಕಾಯುಕ್ತರ ಅಧಿಕಾರವನ್ನು ಕಸಿದುಕೊಂಡಿದ್ದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಂದರು. ಸಿದ್ಧಾಂತಗಳನ್ನು ಬದಲಾಯಿಸಿ, ಅಧಿಕಾರ ಹಿಡಿಯುವ ಪ್ರಯತ್ನದಲ್ಲಿ ಬಿಜೆಪಿ ಮುಳಿಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಸರ್ವಾಧಿಕಾರ ಆಡಳಿತ ನಡೆಯುತ್ತಿದ್ದು, ಹಿಂದಿ ಹೇರಿಕೆಯಿಂದ ಪ್ರಾದೇಶಿಕ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅಪಾರ ಗೌರವ ಇದೆ. ಆದರೆ, ಯೋಜನೆಗಳು ಪ್ರಚಾರಕ್ಕಾಗಿ ಜಾರಿಗೆ ತರುತ್ತಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts