More

    ಅವರ ಪ್ರೇಯಸಿಗಾಗಿ ನನ್ನ ಅವಕಾಶ ಕಿತ್ತುಕೊಂಡ್ರು! ಚಿತ್ರರಂಗದ ಕರಾಳ ಸತ್ಯ ಬಿಚ್ಚಿಟ್ಟ ನಟಿ ಪ್ರಿಯಾಂಕಾ ಚೋಪ್ರಾ

    ಮುಂಬೈ: ‘ಕ್ರಿಶ್​’, ‘ದೋಸ್ತಾನ’ ಹೀಗೆ ಮುಂತಾದ ಸೂಪರ್​ಡೂಪರ್​ ಹಿಟ್​ ಸಿನಿಮಾಗಳಲ್ಲಿ ನಟಿಸಿ, ಸಿನಿಪ್ರೇಕ್ಷಕರಿಂದ ಅಪಾರ ಮೆಚ್ಚುಗೆ, ಖ್ಯಾತಿ ಗಳಿಸಿದ ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಇದೀಗ ತನಗೆ ಚಿತ್ರರಂಗದಲ್ಲಿ ಉಂಟಾದ ಸಂಕಷ್ಟಗಳು, ರಿಜೆಕ್ಷನ್​ಗಳ ಬಗ್ಗೆ ಶಾಕಿಂಗ್ ಸಂಗತಿಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಅಲೋಪತಿಗೆ ಸಮನಾಗಿ ಆಯುರ್ವೇದ ಬೆಳೆಯಬೇಕು; ಬಿಜೆಪಿ ಅವಧಿಯಲ್ಲಿ ಆಯುಷ್ ಇಲಾಖೆ ಆರಂಭ; ಬಸವರಾಜ ಬೊಮ್ಮಾಯಿ ಹೇಳಿಕೆ

    ಪ್ರಸ್ತುತ ‘ಹೆಡ್​ ಆಫ್​ ಸ್ಟೇಟ್’​ ಚಿತ್ರದ ಚಿತ್ರೀಕರಣದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಪ್ರಿಯಾಂಕಾ, ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ತನಗೆ ಒಲಿದುಬಂದ ಅವಕಾಶಗಳನ್ನು ಹೇಗೆ ಕಸಿದುಕೊಳ್ಳುತ್ತಿದ್ದರು, ಯಾವ ಕಾರಣಕ್ಕಾಗಿ ಕಿತ್ತುಕೊಳ್ಳುತ್ತಿದ್ದರು ಎಂಬುದನ್ನು ಅಭಿಮಾನಿಗಳ ಎದುರು ಬಟಾಬಯಲು ಮಾಡಿದ್ದಾರೆ.

    “ನಾನು ಚಿತ್ರರಂಗಕ್ಕೆ ಬಂದ ಮೊದಲ ದಿನದಿಂದಲೂ ಈ ರಿಜೆಕ್ಷನ್ ಎಂಬುದನ್ನು ನೋಡುತ್ತಲೇ ಬಂದಿದ್ದೇನೆ. ಈ ಪದ ಕೇಳಿದಾಗಲೆಲ್ಲಾ ಬಹಳ ಸಂಕಟವಾಗುತ್ತಿತ್ತು. ಕೆಲಸ ಮಾಡಲೆಂದು ಉತ್ಸಾಹದಿಂದ ಎದುರು ನೋಡುತ್ತಿದ್ದಾಗಲೇ ಇಂತಹ ರಿಜೆಕ್ಷನ್​ಗಳು ತುಂಬ ಆಘಾತ ಉಂಟುಮಾಡುತ್ತಿತ್ತು. ನನ್ನ ಕೈಬಿಡಲು ನಾನು ಆ ಪಾತ್ರಕ್ಕೆ ಸರಿಯಿಲ್ಲ ಎಂದೋ ಅಥವಾ ಅವರ ಪ್ರೇಯಸಿಗೆ ಆ ಪಾತ್ರ ಕೊಡಿಸಲು ನಮ್ಮನ್ನು ಹೊರ ಹಾಕುತ್ತಿದ್ದರೋ ಗೊತ್ತಿಲ್ಲ. ಆದರೆ, ಇಂತಹ ಹಲವು ಕಾರಣಗಳು ನಮ್ಮನ್ನು ರಿಜೆಕ್ಟ್ ಮಾಡಲು ಮುಂದಿದ್ದವು” ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಟಿಸಿಎಸ್​ vs ಎಚ್​ಸಿಎಲ್​ ಟೆಕ್ vs ವಿಪ್ರೋ vs ಇನ್ಫೋಸಿಸ್: ತ್ರೈಮಾಸಿಕ ಫಲಿತಾಂಶಗಳ ನಂತರ ಯಾವ ಸ್ಟಾಕ್ ಖರೀದಿಸಬೇಕು?

    “ಅವರಿಗೆ ಯಾರು ಹಿಡಿಸುತ್ತಾರೋ ಅಂತವರಿಗೆ ಅವಕಾಶ ಕೊಡುವುದು ಹೀಗೆ ಏನೇನೋ ಮಾಡಿದ್ದಾರೆ. ಆದರೆ, ನಾನು ಅಂದೇ ದೃಢವಾಗಿ ಸಂಕಲ್ಪ ಮಾಡಿಕೊಂಡೆ. ಇದಕ್ಕೆಲ್ಲಾ ತಲೆಕೆಡಿಸಿಕೊಳ್ಳಬಾರದು, ಮುನ್ನುಗ್ಗುತ್ತಿರಬೇಕು ಎಂದು. ಆ ದಿನವೇ ನನಗೆ ನಾನು ಮಾಡಿಕೊಂಡ ಶಪಥ ಇದು. ಇಂದು ಅದರಿಂದ ಸಂಪೂರ್ಣವಾಗಿ ನೆಮ್ಮದಿಯಾಗಿದ್ದೇನೆ. ಇಂತಹ ರಿಜೆಕ್ಷನ್​ಗಳಿಗೆ ಕಿಂಚಿತ್ತು ಯೋಚಿಸಲ್ಲ ನಾನು” ಎಂದು ಬೋಲ್ಡ್​ ಆಗಿ ನುಡಿದಿದ್ದಾರೆ ಪ್ರಿಯಾಂಕಾ,(ಏಜೆನ್ಸೀಸ್).

    ತಾಳಿ ಕಟ್ಟುವ ವೇಳೆ ಕಣ್ಣೀರಿಟ್ಟ ಆರತಿ ಸಿಂಗ್! ಕೃಷ್ಣ-ಕಾಶ್ಮೀರ ದಂಪತಿಗೆ ಹಿಗ್ಗಾಮುಗ್ಗಾ ಜಾಡಿಸಿದ ನೆಟ್ಟಿಗರು

    ನಿಮಗೆ ಏನೂ ಗೊತ್ತಿಲ್ಲ… RCB ಪ್ಲೇಆಫ್ ಕನಸು ಇನ್ನೂ ಜೀವಂತ: ವಿಲ್​ ಜ್ಯಾಕ್ಸ್​ ಬಿಚ್ಚಿಟ್ರು ಶಾಕಿಂಗ್ ಸಂಗತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts