

ಮುಂಬೈ: ಶುಕ್ರವಾರ ಏಪ್ರಿಲ್ 27 ರಂದು ಷೇರು ಪೇಟೆ ಹಿನ್ನಡೆ ಅನುಭವಿಸಿತು. ಇದರ ಮಧ್ಯೆ, ಎಫ್‌ಐಐ ಬೆಂಬಲಿತ ಶಾಂತಿ ಎಜುಕೇಷನಲ್ ಇನಿಶಿಯೇಟಿವ್ಸ್‌ನ ಷೇರುಗಳ ಬೆಲೆ ಶೇಕಡಾ 20 ರಷ್ಟು ಏರಿಕೆಯಾಗಿ ಅಪ್ಪರ್ ಸರ್ಕ್ಯೂಟ್ ಹಿಟ್ ಅಯಿತು. ಶುಕ್ರವಾರ ಈ ಸ್ಟಾಕ್ ಬೆಲೆ ರೂ 61.50 ಬೆಲೆಯಲ್ಲಿ ಕುಸಿತದೊಂದಿಗೆ ಪ್ರಾರಂಭವಾದರೂ ನಂತರ ರೂ. 74.40 ಮುಟ್ಟಿ ಅಪ್ಪರ್ ಸರ್ಕ್ಯೂಟ್‌ಗೆ ತಲುಪಿತು.
ರೂ 1,133 ಕೋಟಿ ಮಾರುಕಟ್ಟೆ ಮೌಲ್ಯ ಹೊಂದಿರುವ ಶಾಂತಿ ಎಜುಕೇಷನಲ್ ಇನಿಶಿಯೇಟಿವ್ಸ್‌ನ ಷೇರುಗಳ ಬೆಲೆ ಶುಕ್ರವಾರ ಅಂತಿವಾಗಿ 13.60 ಪ್ರತಿಶತ ಹೆಚ್ಚಳದೊಂದಿಗೆ ರೂ 70.43 ಕ್ಕೆ ತಲುಪಿತು. ಇದರ ಹಿಂದಿನ ಮುಕ್ತಾಯದ ದರ ರೂ 62 ಇತ್ತು.
ಕಳೆದ ನಾಲ್ಕು ದಿನಗಳಿಂದ ಈ ಷೇರು ಬೆಲೆ ಏರುಗತಿಯಲ್ಲಿದೆ. ಈ ಷೇರಿನ 52 ವಾರಗಳ ಗರಿಷ್ಠ ಬೆಲೆ 109.40 ರೂ. ಹಾಗೂ ಕನಿಷ್ಠ ಬೆಲೆ 52.01 ರೂ. ಆಗಿದೆ.
ಈ ಷೇರು ಬೆಲೆ ಕಳೆದ ಮೂರು ವರ್ಷಗಳಲ್ಲಿ ಶೇಕಡಾ 345 ಮತ್ತು ಐದು ವರ್ಷಗಳಲ್ಲಿ ಶೇಕಡಾ 528 ರಷ್ಟು ಹೆಚ್ಚಳ ಕಂಡಿದೆ. ಆದರೆ, ಕಳೆದ ಒಂದು ವರ್ಷದಲ್ಲಿ ಶೇಕಡಾ 1.92 ಕುಸಿತ ಕಂಡಿದೆ. ಈ ಷೇರಿನ ಸಾರ್ವಕಾಲಿಕ ಗರಿಷ್ಠ ಬೆಲೆ 116 ರೂಪಾಯಿ ಮತ್ತು ಕನಿಷ್ಠ ಬೆಲೆ 8.31 ರೂಪಾಯಿ ಆಗಿದೆ.
ಶಾಂತಿ ಎಜುಕೇಷನಲ್ ಇನಿಶಿಯೇಟಿವ್ಸ್ ಲಿಮಿಟೆಡ್ 2022 ರಲ್ಲಿ ತನ್ನ ಷೇರುಗಳ ಮುಖಬೆಲೆಯನ್ನು ರೂ 10 ರಿಂದ ರೂ 1 ಕ್ಕೆ ಕೊನೆಯದಾಗಿ ವಿಭಜಿಸಿತು. ಜುಲೈ 21, 2022 ರಿಂದ ಷೇರಿನ ಎಕ್ಸ್-ಸ್ಪ್ಲಿಟ್ ಆಧಾರದ ಮೇಲೆ ವಹಿವಾಟು ನಡೆಸಲಾಯಿತು.
ಶಾಂತಿ ಎಜುಕೇಷನಲ್ ಇನಿಶಿಯೇಟಿವ್ಸ್ ಕಂಪನಿಯು ಶಿಕ್ಷಣ ಸೇವೆಗಳು ಮತ್ತು ಸಂಬಂಧಿತ ಚಟುವಟಿಕೆಗಳನ್ನು ಒದಗಿಸುವ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ. ಇದು ಚಿರಿಪಾಲ್ ಗ್ರೂಪ್‌ನ ಉದ್ಯಮವಾಗಿದ್ದು, ಅಹಮದಾಬಾದ್‌ನಲ್ಲಿ ನೆಲೆಗೊಂಡಿದೆ.