More

    ಕಂಪನಿ ತ್ರೈಮಾಸಿಕ ಲಾಭ 41% ಹೆಚ್ಚಳ: ಐಟಿ ಸ್ಟಾಕ್​ ಬೆಲೆ ಏರಿಕೆ, ಖರೀದಿ ಜೋರು

    ಮುಂಬೈ: ಝೆನ್ಸಾರ್ ಟೆಕ್ನಾಲಜೀಸ್ ಲಿಮಿಟೆಡ್​ (Zensar Technologies Ltd.) ಕಂಪನಿಯ ನಾಲ್ಕನೇ ತ್ರೈಮಾಸಿಕದ ನಿವ್ವಳ ಲಾಭವು ವರ್ಷದಿಂದ ವರ್ಷಕ್ಕೆ 41% ಏರಿಕೆಯಾಗಿದೆ. ಅಲ್ಲದೆ, ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ 8% ಹೆಚ್ಚಿದೆ.

    ಈ ಹಿನ್ನೆಲೆಯಲ್ಲಿ ಶುಕ್ರವಾರದ ವಹಿವಾಟಿನಲ್ಲಿ ಝೆನ್ಸಾರ್ ಟೆಕ್ನಾಲಜಿಯ ಷೇರುಗಳ ಖರೀದಿ ಜೋರಾಗಿ ನಡೆದು, ಇದರ ಬೆಲೆ ಶೇಕಡಾ 12 ರಷ್ಟು ಏರಿಕೆಯಾಗಿ ದಿನದ ಗರಿಷ್ಠ ಮಟ್ಟವಾದ 643.70 ರೂ. ತಲುಪಿತ್ತು. ಅಂತಿಮವಾಗಿ, ಶೇ.8 ರಷ್ಟು ಲಾಭದೊಂದಿಗೆ ರೂ.619.50 ಮಟ್ಟ ತಲುಪಿತು. ಕಂಪನಿಯ ಮಾರುಕಟ್ಟೆ ಬಂಡವಾಳ 14,396.87 ಕೋಟಿ ರೂ. ಆಗಿದೆ.

    ಈ ಕಂಪನಿಯ ಆದಾಯವು 2023-24ನೇ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ (Q3FY24) ರೂ. 1,204 ಕೋಟಿಯಿಂದ 2023-24ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ (Q4FY24) ರೂ. 1,230 ಕೋಟಿಗಳಿಗೆ ಏರಿಕೆಯಾಗಿದೆ. ಆದಾಯವು ವರ್ಷದಿಂದ ವರ್ಷಕ್ಕೆ 1.4 ಪ್ರತಿಶತದಷ್ಟು ಹೆಚ್ಚಾಗಿದೆ.

    ಝೆನ್ಸಾರ್ ಟೆಕ್ನಾಲಜೀಸ್ ಲಿಮಿಟೆಡ್‌ನ ನಿವ್ವಳ ಲಾಭವು ತ್ರೈಮಾಸಿಕದಿಂದ ತ್ರೈಮಾಸಿಕದಲ್ಲಿ ಶೇಕಡಾ 8 ರಷ್ಟು ಏರಿಕೆಯಾಗಿದ್ದು, Q3FY24 ರಲ್ಲಿ 212 ಕೋಟಿ ರೂ.ಗಳಿಂದ Q3FY24 ರಲ್ಲಿ 229 ಕೋಟಿ ರೂಪಾಯಿ ಏರಿಕೆ ಕಂಡಿದೆ. ಇದಲ್ಲದೆ, ನಿವ್ವಳ ಲಾಭವು ವರ್ಷದಿಂದ ವರ್ಷಕ್ಕೆ 41 ಪ್ರತಿಶತದಷ್ಟು ಹೆಚ್ಚಾಗಿದೆ..

    ಈ ಸ್ಟಾಕ್ ಕಳೆದ ಆರು ತಿಂಗಳಲ್ಲಿ ಶೇಕಡಾ 30.25 ಏರಿಕೆ ಕಂಡಿದೆ. ಒಂದು ವರ್ಷದಲ್ಲಿ ಶೇಕಡಾ 130.65 ಮಲ್ಟಿ ಬ್ಯಾಗರ್ ಲಾಭ ನೀಡಿದೆ.

    ಕಂಪನಿಯ ಆದಾಯವನ್ನು ಪ್ರಾಥಮಿಕವಾಗಿ ಉತ್ತರ ಅಮೆರಿಕಾದಿಂದ ಬರುತ್ತದೆ. ಬ್ರಿಟನ್​, ಯುರೋಪ್​ನಿಂದ 18.1% ಮತ್ತು ದಕ್ಷಿಣ ಆಫ್ರಿಕಾದಿಂದ 11.2% ಆದಾಯ ಬರುತ್ತದೆ. ಜಾಗತಿಕವಾಗಿ 37 ಕ್ಕೂ ಹೆಚ್ಚು ಸ್ಥಳಗಳಲ್ಲಿ ವಹಿವಾಟು ನಡೆಯುತ್ತದೆ.

    ಝೆನ್ಸಾರ್ ಟೆಕ್ನಾಲಜೀಸ್‌ನ ಷೇರುಗಳ ಬೆಲೆ ಕಳೆದ ಆರು ತಿಂಗಳಲ್ಲಿ ಶೇಕಡಾ 30 ರಷ್ಟು ಏರಿಕೆ ಕಂಡಿದೆ. ಕಳೆದ ಒಂದು ವರ್ಷದಲ್ಲಿ ಶೇಕಡಾ 124 ರಷ್ಟು ಹೆಚ್ಚಳವಾಗಿದೆ.

    ಕಳೆದ ಐದು ವರ್ಷಗಳಲ್ಲಿ ಝೆನ್ಸಾರ್ ಟೆಕ್ನಾಲಜೀಸ್‌ನ ಷೇರಿನ ಬೆಲೆಯ ಮೌಲ್ಯಮಾಪನವು ಅದರ ಷೇರಿನ ಬೆಲೆ ಮೊದಲ ಎರಡು ವರ್ಷಗಳಲ್ಲಿ ಶ್ರೇಣಿಯಲ್ಲಿಯೇ ಉಳಿದಿದೆ. ಆದರೆ ಕಳೆದ ಮೂರು ವರ್ಷಗಳಲ್ಲಿ ಅದರ ಬೆಲೆಯು 150 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ತೋರಿಸುತ್ತದೆ. ಮುಂಬರುವ ಸಮಯದಲ್ಲಿ ಈ ಸ್ಟಾಕ್ ಬೆಲೆ ಹೊಸ ಉನ್ನತ ಮಟ್ಟವನ್ನು ತಲುಪಬಹುದು ಎಂದು ಅಂದಾಜಿಸಲಾಗಿದೆ.

    ಪ್ರಸ್ತುತ ಮಾರುಕಟ್ಟೆಯಲ್ಲಿ ಈ 2 ಷೇರು ಖರೀದಿಸಿದರೆ ಲಾಭ; ಈ 2 ಸ್ಟಾಕ್​ ಮಾರಾಟ ಮಾಡಿ: ಮಾರುಕಟ್ಟೆ ತಜ್ಞರ ಸಲಹೆ

    ಅಂಬಾನಿ ಸಮೂಹದ ಈ ಸ್ಟಾಕ್​ ಬೆಲೆ ಒಂದೇ ತಿಂಗಳಲ್ಲಿ 32% ಹೆಚ್ಚಳ: ಇನ್ನಷ್ಟು ಏರಿಕೆ ಕಾಣಲಿದೆ ಎನ್ನುತ್ತಾರೆ ತಜ್ಞರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts