More

    ಬ್ಯಾಂಕ್​ ತ್ರೈಮಾಸಿಕ ಲಾಭದಲ್ಲಿ 123% ಹೆಚ್ಚಳ: 404 ರಿಂದ 26 ರೂಪಾಯಿಗೆ ಕುಸಿದಿರುವ ಷೇರು ಬೆಲೆ ಏರಿಕೆಯಾಗುವುದೇ?

    ಮುಂಬೈ: ಖಾಸಗಿ ವಲಯದ ಸಾಲದಾತ ಯೆಸ್ ಬ್ಯಾಂಕ್ ಮಾರ್ಚ್ 31 ರ ತ್ರೈಮಾಸಿಕದಲ್ಲಿ (Q4FY23) 452 ಕೋಟಿ ರೂಪಾಯಿಗಳ ನಿವ್ವಳ ಲಾಭವನ್ನು ವರದಿ ಮಾಡಿದೆ, ಇದು ಹಿಂದಿನ ವರ್ಷದ ಅವಧಿಯ 202 ಕೋಟಿ ರೂಪಾಯಿಗಳಿಂದ ಶೇಕಡಾ 123 ಹೆಚ್ಚಳವಾಗಿದೆ.

    ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ಲಾಭದ ಪ್ರಮಾಣವು ಶೇಕಡಾ 95.2 ಹೆಚ್ಚಳವಾಗಿದೆ.

    ಬ್ಯಾಂಕಿನ ಒಟ್ಟು ಅನುತ್ಪಾದಕ ಆಸ್ತಿಯು ಶೇಕಡಾ 1.7 ರಷ್ಟಿದ್ದು, ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಇದು ಶೇಕಡಾ 2.2 ರಷ್ಟಿತ್ತು.

    ಮಾರ್ಚ್​ ತ್ರೈಮಾಸಿಕದಲ್ಲಿ 2,153 ಕೋಟಿ ರೂ.ಗಳ ನಿವ್ವಳ ಬಡ್ಡಿ ಆದಾಯ (NII) ಇದ್ದರೆ, ಕಳೆದ ಆರ್ಥಿಕ ವರ್ಷದ ಇದೇ ತ್ರೈಮಾಸಿಕದಲ್ಲಿ 2,105 ಕೋಟಿ ರೂ. ಇತ್ತು. ಇದಕ್ಕೆ ಹೋಲಿಸಿದರೆ ಈಗ ಶೇಕಡಾ 2 ರಷ್ಟು ಏರಿಕೆಯಾಗಿದೆ.

    ಒಟ್ಟು ಠೇವಣಿ 22.5 ರಷ್ಟು ಏರಿಕೆಯಾಗಿ 2.6 ಲಕ್ಷ ಕೋಟಿ ರೂ. ತಲುಪಿದೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಬಿಗಿಯಾದ ದ್ರವ್ಯತೆ ಪರಿಸ್ಥಿತಿಗಳು ಮತ್ತು ಸಾಲಗಳಿಗೆ ಆರೋಗ್ಯಕರ ಬೇಡಿಕೆಯ ನಡುವೆ ಹೆಚ್ಚಿನ ಬ್ಯಾಂಕುಗಳು ತಮ್ಮ ಠೇವಣಿ ಮೂಲವನ್ನು ಹೆಚ್ಚಿಸುತ್ತಿವೆ. ಯೆಸ್ ಬ್ಯಾಂಕ್‌ನ ಸಾಲಗಳು ವರ್ಷಕ್ಕೆ 12.1% ರಷ್ಟು ಬೆಳೆದರೆ, ಠೇವಣಿಗಳು 22% ಕ್ಕಿಂತ ಹೆಚ್ಚಿವೆ.

    ಬ್ಯಾಂಕ್‌ನ ಷೇರುಗಳ ಬೆಲೆ ಏಪ್ರಿಲ್ 26 ರಂದು ಶೇಕಡಾ 0.73 ರಷ್ಟು ಏರಿಕೆಯಾಗಿ 26.15 ರೂ.ಗೆ ತಲುಪಿದೆ. ಈ ಷೇರಿನ ಸಾರ್ವಕಾಲಿಕ ಗರಿಷ್ಠ ಬೆಲೆ 404 ರೂ ಇದ್ದರೆ, ಸಾರ್ವಕಾಲಿಕ ಕನಿಷ್ಠ ಬೆಲೆ ರೂ. 5.65 ಇದೆ. ಹಿಂದಿನ ಮಾರ್ಚ್​ ತ್ರೈಮಾಸಿಕದಲ್ಲಿ ಬ್ಯಾಂಕ್​ ಉತ್ತಮ ಲಾಭ ಗಳಿಸಿರುವ ಹಿನ್ನೆಲೆಯಲ್ಲಿ ಷೇರಿನ ಬೆಲೆ ಹೆಚ್ಚಾಗಬಹುದೆಂಬ ನಿರೀಕ್ಷೆ ಮಾರುಕಟ್ಟೆ ವಿಶ್ಲೇಷಕರದ್ದಾಗಿದೆ.

    4 ಪೈಸೆಗೆ ಕುಸಿದಿದ್ದ ಈ ಷೇರು ಬೆಲೆ ಈಗ ರೂ 1.99: ಈಗ ಮತ್ತೆ ಸ್ಟಾಕ್​ಗೆ ಮತ್ತೆ ಬೇಡಿಕೆ ಏಕೆ?

    ಹೂಡಿಕೆದಾರರಿಗೆ ಹಣದ ಸುರಿಮಳೆ: ಒಂದು ವರ್ಷದಲ್ಲಿ 334%; ಆರು ತಿಂಗಳಲ್ಲಿ 168% ಹೆಚ್ಚಳ: ಈಗ 3 ಷೇರು ಉಚಿತ!

    ಹೂಡಿಕೆದಾರರಿಗೆ ದೊಡ್ಡ ಉಡುಗೊರೆ ನೀಡಿದ ಮಾರುತಿ ಸುಜುಕಿ: ಗರಿಷ್ಠ ಡಿವಿಡೆಂಡ್​ ನೀಡಿದ ಕಂಪನಿಯ ಷೇರು ಬೆಲೆ ಹೆಚ್ಚಳವಾಗುವುದೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts