More

  ಕಾಸ್ಮೆಟಿಕ್ ಸರ್ಜರಿಯಿಂದ ದುರಂತ ಅಂತ್ಯ ಕಂಡ ಸೆಲೆಬ್ರಿಟಿಗಳು ಇವರೇ ನೋಡಿ!

  ಬೆಳ್ಳಿತೆರೆ ಇರಲಿ ಅಥವಾ ಕಿರುತೆರೆಯೇ ಇರಲಿ ನಟನೆ ಮಾಡುವುದು ಕಲಾವಿದರ ಕನಸು. ಒಂದೇ ಒಂದು ಸಿನಿಮಾದಲ್ಲಿ ನಮ್ಮ ನಟನಾ ಕೌಶಲ್ಯ ತೋರಿಸುವ ಅವಕಾಶ ಸಿಕ್ಕರೆ ಸಾಕಪ್ಪ, ಅದನ್ನು ಸದುಪಯೋಗ ಪಡಿಸಿಕೊಂಡು ಒಳ್ಳೆಯ ಸ್ಟಾರ್​ ಆಗಿ ಹೊರಹೊಮ್ಮಬೇಕು, ನಂತರ ಹೆಚ್ಚೆಚ್ಚು ಅವಕಾಶ ಗಿಟ್ಟಿಸಿಕೊಳ್ಳಬೇಕು ಎಂದೆಲ್ಲಾ ಕನಸು ಕಾಣುತ್ತಾರೆ. ಕೇವಲ ನಟನೆಯಿಂದ ಮಾತ್ರ ಇದೆಲ್ಲಾ ಸಾಧ್ಯವಿಲ್ಲ, ನೋಡಲು ಸಹ ಅಂದ, ಚೆಂದ ಹೊಂದಿರಬೇಕು ಎಂಬುದನ್ನು ಕೂಡ ಗಮನದಲ್ಲಿಟ್ಟುಕೊಂಡಿರುತ್ತಾರೆ. ಇದಕ್ಕಾಗಿ ಏನೇನೋ ಕಸರತ್ತು ಮಾಡುತ್ತಾರೆ.

  ಇದನ್ನೂ ಓದಿ: ಕೇಂದ್ರದಿಂದ ರಾಜ್ಯಕ್ಕೆ ಮತ್ತೊಮ್ಮೆ ಅನ್ಯಾಯ ಸ್ಪಷ್ಟ: ಸಚಿವ ಕೃಷ್ಣಬೈರೇಗೌಡ ಆಕ್ರೋಶ

  ನೈಸರ್ಗಿಕವಾಗಿ ಇರುವ ಮೈಬಣ್ಣವನ್ನು ಬದಲಿಸಲು ಪ್ರಯತ್ನಿಸುವ ಕಲಾವಿದರು, ಉತ್ತಮ ಪ್ರಾಜೆಕ್ಟ್​ಗಳಲ್ಲಿ ಅವಕಾಶ ಪಡೆಯಲು ದೇಹದ ತೂಕವನ್ನು ದಿಢೀರ್​ ಎಂದು ಇಳಿಸಿಕೊಳ್ಳುತ್ತಾರೆ. ಇದಕ್ಕಾಗಿ ಯಾವ ಸೂಕ್ತ ಮಾರ್ಗವನ್ನು ಅನುಸರಿಸಬೇಕು ಎಂಬುದನ್ನು ಮರೆತು, ಅಡ್ಡದಾರಿಯನ್ನು ಹಿಡಿದು, ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಾರೆ. ಇದಕ್ಕೆ ಕಾಸ್ಮೆಟಿಕ್ ಸರ್ಜರಿ ಮೊರೆ ಹೋದ ಹಲವಾರು ಸೆಲೆಬ್ರಿಟಿಗಳು ಕಂಡ ದುರಂತ ಅಂತ್ಯವೇ ಸಾಕ್ಷಿ. ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಳ್ಳಲು ಹೋಗಿ ದುರಂತ ಸಾವು ಕಂಡ ಕಲಾವಿದರು ಇವರೇ ನೋಡಿ.

  1. ಆರತಿ ಅಗರ್​ವಾಲ್: ತೆಲುಗು ಚಿತ್ರರಂಗದ ನಟಿ ಆರತಿ, 2015ರಲ್ಲಿ ಲಿಪೋ ಸೆಕ್ಷನ್​ ಸರ್ಜರಿಯ ವಿಫಲದಿಂದ ಹೃದಯಾಘಾತವಾಗಿ, ಅಮೆರಿಕಾದ ನ್ಯೂಜೆರ್ಸಿಯಲ್ಲಿ ಸಾವನ್ನಪ್ಪಿದರು.

  2. ಚೇತನ ರಾಜ್: ಕನ್ನಡ ಕಿರುತೆರೆಯಲ್ಲಿ ಅವಕಾಶ ಪಡೆಯಬೇಕು ಎಂದು ಕಾಸ್ಮೆಟಿಕ್ ಸರ್ಜರಿ ಮೂಲಕ ದೇಹದಲ್ಲಿನ ಫ್ಯಾಟ್‌ ತೆಗಿಸುವ ವೇಳೆ ಶ್ವಾಸಕೋಶಕ್ಕೆ ನೀರಿನ ಅಂಶ ಶೇಖರಣೆಯಾಗಿ ನಟಿ ಮೃತಪಟ್ಟರು.

  ಇದನ್ನೂ ಓದಿ: ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದ 60 ವರ್ಷದ ಅಜ್ಜಿ; ಇದು ಇತಿಹಾಸದಲ್ಲಿಯೇ ಮೊದಲ ಬಾರಿಗೆ….

  3. ವಿವೇಕ್ ಶೌಕ್: 2011ರಲ್ಲಿ ಲಿಪೋಸೆಕ್ಷನ್​ ಸರ್ಜರಿಗೆ ಒಳಪಟ್ಟ ಪಂಜಾಬಿ ನಟ ವಿವೇಕ್ ಶೌಕ್, ಹೃದಯಾಘಾತಕ್ಕೆ ತುತ್ತಾಗಿ ದುರಂತ ಅಂತ್ಯ ಕಂಡರು.

  4. ಜಾಕಿ ಹೋ: ‘ವೈಲ್ಡ್​​ ಎನ್​ ಔಟ್’​ನ ಸ್ಟಾರ್​ ನಟ ಜಾಕಿ ಹೋ, ‘ಗ್ಲುಟೇಲ್​ ಆಗ್​ಮೆಂಟೇಷನ್​’ ಸರ್ಜರಿ ಮಾಡಿಸುವ ವೇಳೆ ಶಸ್ತ್ರಚಿಕಿತ್ಸೆ ವಿಫಲಗೊಂಡು ಫ್ಲೋರಿಡಾದಲ್ಲಿ ಸಾವಿಗೀಡಾದರು.

  5. ಸೇಂಟ್ ವಾನ್ ಕೊಲುಸಿ: 2023ರ ಏಪ್ರಿಲ್​ನಲ್ಲಿ ಇದೇ ರೀತಿಯ ಸರ್ಜರಿಗೆ ಒಳಗಾದ ಕೆನಡಿಯನ್ ನಟ ಸೇಂಟ್ ವಾನ್ ಕೊಲುಸಿ, ಆಪರೇಷನ್ ಬಳಿಕ ಇನ್​ಫೆಕ್ಷನ್​ನಿಂದ 22 ವರ್ಷಕ್ಕೆ ದುರಂತ ಅಂತ್ಯ ಕಂಡರು.

  ಇದನ್ನೂ ಓದಿ: ಈ BJP ನಾಯಕನೇ ನನ್ನ ತಂದೆ, ಬೇಕಿದ್ರೆ DNA ಟೆಸ್ಟ್‌ ಮಾಡಿ; ನಟಿ ಶಿನೋವಾ

  6. ಲುನಾ ಆ್ಯಂಡ್ರಾಡೆ: 29 ವರ್ಷದ ಬ್ರೆಜಿಲ್ ನಟಿ ಲುನಾ ಆ್ಯಂಡ್ರಾಡೆ ಸಹ ಇದೇ ರೀತಿಯ ಮಂಡಿಯ ಲಿಪೋ ಸೆಕ್ಷನ್​ ಸರ್ಜರಿ ಮಾಡಿಸಿಕೊಂಡ ಎರಡೂವರೆ ಗಂಟೆಯ ಬಳಿಕ ಹೃದಯಾಘಾತಕ್ಕೆ ತುತ್ತಾಗಿ, ನವೆಂಬರ್​ 2023ರಲ್ಲಿ ಸಾವನ್ನಪ್ಪಿದರು,(ಏಜೆನ್ಸೀಸ್).

  ತಾಳಿ ಕಟ್ಟುವ ವೇಳೆ ಕಣ್ಣೀರಿಟ್ಟ ಆರತಿ ಸಿಂಗ್! ಕೃಷ್ಣ-ಕಾಶ್ಮೀರ ದಂಪತಿಗೆ ಹಿಗ್ಗಾಮುಗ್ಗಾ ಜಾಡಿಸಿದ ನೆಟ್ಟಿಗರು

  ನಿಮಗೆ ಏನೂ ಗೊತ್ತಿಲ್ಲ… RCB ಪ್ಲೇಆಫ್ ಕನಸು ಇನ್ನೂ ಜೀವಂತ: ವಿಲ್​ ಜ್ಯಾಕ್ಸ್​ ಬಿಚ್ಚಿಟ್ರು ಶಾಕಿಂಗ್ ಸಂಗತಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts