More

    ಹೂಡಿಕೆದಾರರಿಗೆ ದೊಡ್ಡ ಉಡುಗೊರೆ ನೀಡಿದ ಮಾರುತಿ ಸುಜುಕಿ: ಗರಿಷ್ಠ ಡಿವಿಡೆಂಡ್​ ನೀಡಿದ ಕಂಪನಿಯ ಷೇರು ಬೆಲೆ ಹೆಚ್ಚಳವಾಗುವುದೇ?

    ಮುಂಬೈ: ದೇಶದ ಅತಿದೊಡ್ಡ ಕಾರು ಕಂಪನಿ ಮಾರುತಿ ಸುಜುಕಿ ಇಲ್ಲಿಯವರೆಗಿನ ಅತಿದೊಡ್ಡ ಉಡುಗೊರೆಯನ್ನು ತನ್ನ ಷೇರುದಾರರಿಗೆ ಘೋಷಿಸಿದೆ. ಮಾರುತಿ ಸುಜುಕಿ ತನ್ನ ಹೂಡಿಕೆದಾರರಿಗೆ ಪ್ರತಿ ಷೇರಿಗೆ 125 ರೂಪಾಯಿಗಳ ಅಂತಿಮ ಲಾಭಾಂಶವನ್ನು (ಡಿವಿಡೆಂಡ್​) ಘೋಷಿಸಿದೆ. ಇದು ಕಂಪನಿಯ ಇತಿಹಾಸದಲ್ಲಿ ಇದುವರೆಗಿನ ಗರಿಷ್ಠ ಲಾಭಾಂಶವಾಗಿದೆ. ಮಾರುತಿ ಸುಜುಕಿಯ ಈ ಲಾಭಾಂಶವು 2023-24 ರ ಆರ್ಥಿಕ ವರ್ಷಕ್ಕೆ ನೀಡಲಾಗುತ್ತಿದೆ.

    ಶುಕ್ರವಾರದಂದು ಕಂಪನಿಯ ಷೇರುಗಳ ಬೆಲೆ 12687.05 ರೂ. ತಲುಪಿವೆ. ಮಾರುತಿ ಸುಜುಕಿ ಷೇರುಗಳ 52 ವಾರಗಳ ಗರಿಷ್ಠ ಬೆಲೆ 13066.85 ರೂ. ಹಾಗೂ ಕನಿಷ್ಠ ಬೆಲೆ 8470 ರೂ. ಆಗಿದೆ.

    ಮಾರುತಿ ಸುಜುಕಿ 2024 ರ ಮಾರ್ಚ್ 31 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 3878 ಕೋಟಿ ರೂ.ಗಳ ಲಾಭವನ್ನು ಗಳಿಸಿದೆ. ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ ಗಳಿಸಿದ ಲಾಭಕ್ಕಿಂತ ಶೇ. 48ರಷ್ಟು ಹೆಚ್ಚು. ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ ಮಾರುತಿ ಸುಜುಕಿ 2624 ಕೋಟಿ ರೂಪಾಯಿ ಲಾಭ ಗಳಿಸಿತ್ತು. ಮಾರ್ಚ್ 2024 ರ ತ್ರೈಮಾಸಿಕದಲ್ಲಿ ಕಂಪನಿಯ ಆದಾಯವು ರೂ 38,235 ಕೋಟಿಗಳಷ್ಟಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 19.3 ಹೆಚ್ಚಾಗಿದೆ. ಜನವರಿ-ಮಾರ್ಚ್ 2024 ತ್ರೈಮಾಸಿಕದಲ್ಲಿ ಕಂಪನಿಯ ಮಾರಾಟದ ಪ್ರಮಾಣವು 13.4% ರಷ್ಟು ಹೆಚ್ಚಾಗಿದೆ. ಕಂಪನಿಯು ಈ ತ್ರೈಮಾಸಿಕದಲ್ಲಿ 5.84 ಲಕ್ಷ ವಾಹನಗಳನ್ನು ಮಾರಾಟ ಮಾಡಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪನಿಯು 5.14 ಲಕ್ಷ ಕಾರುಗಳನ್ನು ಮಾರಾಟ ಮಾಡಿತ್ತು.

    ಕಳೆದ ಒಂದು ವರ್ಷದಲ್ಲಿ ಮಾರುತಿ ಸುಜುಕಿ ಷೇರುಗಳ ಬೆಲೆ ಉತ್ತಮ ಏರಿಕೆ ಕಂಡಿದೆ. ಕಳೆದ ಒಂದು ವರ್ಷದಲ್ಲಿ ಕಂಪನಿಯ ಷೇರುಗಳ ಬೆಲೆ 49% ಏರಿಕೆಯಾಗಿದೆ. ಮಾರುತಿ ಸುಜುಕಿಯ ಷೇರುಗಳ ಬೆಲೆ 27 ಏಪ್ರಿಲ್ 2023 ರಂದು ರೂ 8541.75 ರಷ್ಟಿತ್ತು, ಇದು 26 ಏಪ್ರಿಲ್ 2024 ರಂದು ರೂ 12687.05 ಕ್ಕೆ ಮುಟ್ಟಿದೆ. ಈ ವರ್ಷ ಇಲ್ಲಿಯವರೆಗೆ ಈ ಷೇರುಗಳ ಬೆಲೆ ಶೇಕಡಾ 24 ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಕಂಪನಿಯ ಷೇರುಗಳ ಬೆಲೆ ಜನವರಿ 1, 2024 ರಂದು ವರ್ಷದ ಆರಂಭದಲ್ಲಿ ರೂ 10281.75 ರಷ್ಟಿತ್ತು, ಅದು ಈಗ ರೂ 12687.05 ಕ್ಕೆ ಮುಟ್ಟಿದೆ.

    ಮಾರುತಿ ಷೇರಿನ ಬೆಲೆ ಕುರಿತು, ಚಾಯ್ಸ್ ಬ್ರೋಕಿಂಗ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸುಮೀತ್ ಬಗಾಡಿಯಾ ಅವರು, “ಮಾರುತಿ ಷೇರುಗಳು ರೂ. 12,600 ನಲ್ಲಿ ಬಲವಾದ ಬೆಂಬಲವನ್ನು ಹೊಂದಿವೆ. ಇದು ಚಾರ್ಟ್ ಮಾದರಿಯಲ್ಲಿಯೂ ಪ್ರಬಲವಾಗಿದೆ. ತಮ್ಮ ಸ್ಟಾಕ್ ಪೋರ್ಟ್‌ಫೋಲಿಯೊದಲ್ಲಿ ಮಾರುತಿ ಷೇರುಗಳನ್ನು ಹೊಂದಿರುವವರು, ಪ್ರತಿ ಷೇರಿನ ಮಟ್ಟಕ್ಕೆ ರೂ. 13,500 ರಿಂದ ರೂ. 13,700 ರ ಸಮೀಪಾವಧಿ ಗುರಿ ಬೆಲೆ ಇಟ್ಟುಕೊಳ್ಳಬೇಕು. ಪ್ರತಿ ಷೇರಿಗೆ ರೂ. 12,600 ಸ್ಟಾಪ್ ನಷ್ಟವನ್ನು ನಿಗದಿ ಮಾಡಿಕೊಳ್ಳಬೇಕು” ಎಂದು ಸಲಹೆ ನೀಡಿದ್ದಾರೆ.

    ತಾಜಾ ಹೂಡಿಕೆದಾರರಿಗೆ ನೀಡಿದ ಸಲಹೆಯ ಮೇರೆಗೆ ಬಗಾಡಿಯಾ, ತಾಜಾ ಹೂಡಿಕೆದಾರರು ಮಾರುತಿ ಷೇರುಗಳನ್ನು ರೂ. 13,700 ರ ಅಲ್ಪಾವಧಿಯ ಗುರಿ ಬೆಲೆಗೆ ಹಾಗೂ ರೂ. 12,600 ರಂತೆ ಸ್ಟಾಪ್ ಲಾಸ್​ ಕಾಯ್ದುಕೊಳ್ಳಬಹುದು ಮತ್ತು ಖರೀದಿಸಬಹುದು ಎಂದಿದ್ದಾರೆ.

    5 ದಿನಗಳಿಂದ ಷೇರು ಬೆಲೆಗೆ ಎಕ್ಸ್​ಪ್ರೆಸ್​ ವೇಗ: ರೂ. 175 ತಲುಪಬಹುದು ರೈಲ್ವೆ ಕಂಪನಿ ಸ್ಟಾಕ್​ ದರ

    ಜರ್ಮನಿ ಕಂಪನಿ ಜತೆ ಡೀಲ್​: ವಾಲ್ವ್ಸ್​ ಕಂಪನಿ ಷೇರುಗಳಿಗೆ ರಾಕೆಟ್​ ವೇಗ

    ಸಾಲ ಮುಕ್ತವಾಗುತ್ತಿದೆ ಕಂಪನಿ; ಲಾಭದಲ್ಲಿ 1,421% ಹೆಚ್ಚಳ: 1 ವರ್ಷದಲ್ಲಿ ಷೇರು ಬೆಲೆ 2,050% ಏರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts