More

  ಸ್ವಂತ ಹಣದಲ್ಲಿ ಸಾರ್ವಜನಿಕ ರಸ್ತೆ ರಿಪೇರಿ ಮಾಡಿಸಿದ ವಿನೋದ್ ರಾಜ್

  ಬೆಂಗಳೂರು: ವಿನೋದ್ ರಾಜ್ ಅವರು ಸ್ವಂತ ಹಣದಲ್ಲಿ ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ರೈತರ ಹಸುಗಳಿಗೆ ಹುಲ್ಲು ನೀಡಿದ್ದರು. ಇದೀಗ ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

  ಬೆಂಗಳೂರಿನ ನೆಲಮಂಗಲದ ಕರೆಕಲ್ ಕ್ರಾಸ್​ನಿಂದ ಸೋಲದೇವನಹಳ್ಳಿವರೆಗೆ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡುತ್ತಿದ್ದಾರೆ.
  ಮಳೆ ಬರುವ ಸಂದರ್ಭದಲ್ಲಿ ನೀರು ನಿಂತು ವಾಹನಗಳ ಓಡಾಟಕ್ಕೆ ತೊಂದರೆ ಆಗುತ್ತಿತ್ತು. ಇದನ್ನು ತಪ್ಪಿಸಲು ವಿನೋದ್ ರಾಜ್ ಅವರು ಸ್ವಂತ ಹಣ ಖರ್ಚು ಮಾಡಿ ರಸ್ತೆ ರಿಪೇರಿ ಕಾರ್ಯ ಮಾಡುತ್ತಿದ್ದಾರೆ.

  ನಟ ವಿನೋದ್ ರಾಜ್ ಅವರು ಇತ್ತೀಚೆಗೆ ನಟನೆಯಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ. ಆದಾಗ್ಯೂ ಅವರು ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಇದಕ್ಕೆ ಕಾರಣವಾಗಿರೋದು ಅವರ ಸಾಮಾಜಿಕ ಸೇವೆ. ಈಗ ನೀರಿಲ್ಲದೆ ಎಲ್ಲ ಕಡೆ ಹಾಹಾಕಾರ ಶುರುವಾಗಿದೆ. ಹೀಗಾಗಿ ರೈತರ ಹಸುಗಳಿಗೆ ಹುಲ್ಲು ನೀಡಿದ್ದರು.

  ಆಸ್ಪತ್ರೆಯಲ್ಲಿ ಕಸ ಗುಡಿಸುತ್ತಿದ್ದವನನ್ನು ಪ್ರೀತಿಸಿ ಮದ್ವೆಯಾದ ವೈದ್ಯೆ; ಇದು ಪವಿತ್ರ ಪ್ರೀತಿಯ ಪ್ರೇಮ ಕಥೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts