More

    ಜರ್ಮನಿ ಕಂಪನಿ ಜತೆ ಡೀಲ್​: ವಾಲ್ವ್ಸ್​ ಕಂಪನಿ ಷೇರುಗಳಿಗೆ ರಾಕೆಟ್​ ವೇಗ

    ಮುಂಬೈ: ಷೇರು ಮಾರುಕಟ್ಟೆಯಲ್ಲಿ ಮಾರಾಟದ ವಾತಾವರಣ ಮರಳಿದೆ. ವಾರದ ಕೊನೆಯ ವಹಿವಾಟಿನ ದಿನವಾದ ಶುಕ್ರವಾರ ಬಿಎಸ್​ಇ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಒತ್ತಡದಲ್ಲಿ ಕಾಣಿಸಿಕೊಂಡವು. ಆದರೂ, ಈ ವಾತಾವರಣದ ನಡುವೆಯೂ ಮೇಸನ್ ವಾಲ್ವ್ಸ್ ಇಂಡಿಯಾ ಲಿಮಿಟೆಡ್ (Meson Valves India Ltd.) ಷೇರುಗಳಿಗೆ ಭಾರಿ ಬೇಡಿಕೆ ಕಂಡುಬಂದಿತು. ಈ ಷೇರು ಬೆಲೆ ಶುಕ್ರವಾರದ ವಹಿವಾಟಿನ ಸಮಯದಲ್ಲಿ ಶೇಕಡಾ 5ರಷ್ಟು ಹೆಚ್ಚಳವಾದ ನಂತರ ತನ್ನ ಸಾರ್ವಕಾಲಿಕ ಗರಿಷ್ಠ ಬೆಲೆಯಾದ ರೂ. 904.05 ಮುಟ್ಟಿತು. ಸೆಪ್ಟೆಂಬರ್ 2023 ರಲ್ಲಿ ಈ ಷೇರಿನ ಬೆಲೆ ರೂ 196.40 ಆಗಿತ್ತು.

    ಏಪ್ರಿಲ್ 25 ರಂದು ಷೇರು ಮಾರುಕಟ್ಟೆ ನೀಡಿದ ಮಾಹಿತಿ ಪ್ರಕಾರ, ಮೇಸನ್ ವಾಲ್ವ್ಸ್ ಲಿಮಿಟೆಡ್​, ಜರ್ಮನಿಯ ಬ್ರೆಮೆನ್‌ನ ಜಾರ್ಜ್​ ಶೂನ್​ಮನ್​ GmHH (ಪರವಾನಗಿದಾರ) ಜತೆಗೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

    ಮೇಸನ್ ವಾಲ್ವ್ ಮತ್ತು ಅದರ ಅಂಗಸಂಸ್ಥೆಗಳು ತಮ್ಮ ಅಗತ್ಯಗಳಿಗಾಗಿ ಫಿಲ್ಟರ್‌ಗಳು, ತಯಾರಿಸಿದ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಪರವಾನಗಿದಾರರಿಂದ ಸಹಾಯ ಪಡೆಯುವ ಹಾಗೂ ಹೆಚ್ಚುವರಿ ಪ್ರಯೋಜನದೊಂದಿಗೆ ಬಳಸಲು ಅಧಿಕಾರವನ್ನು ಈ ಒಪ್ಪಂದದ ಮೂಲಕ ಪಡೆದುಕೊಂಡಿವೆ. ಈ ಒಪ್ಪಂದವು ಏರೋಸ್ಪೇಸ್, ​​HVAC, ತೈಲ ಮತ್ತು ಅನಿಲ, ಆಟೋಮೋಟಿವ್ ಮತ್ತು ಇತರ ಉದ್ಯಮಗಳಿಂದ ಹೆಚ್ಚಿನ ಬೇಡಿಕೆಯನ್ನು ಪೂರೈಸಲು ಕಂಪನಿಗೆ ಅವಕಾಶ ಕಲ್ಪಿಸುತ್ತದೆ. ಬ್ರೆಮೆನ್‌ನ ಜಾರ್ಜ್​ ಶೂನ್​ಮನ್​ GmHH ವಿಶೇಷ ಫಿಟ್ಟಿಂಗ್‌ಗಳು, ಫಿಲ್ಟರ್‌ಗಳ ವಲಯದಲ್ಲಿ 80 ವರ್ಷಗಳ ಅನುಭವವನ್ನು ಹೊಂದಿರುವ ಕಂಪನಿಯಾಗಿದೆ.

    ಮೇಸನ್ ವಾಲ್ವ್ಸ್‌ನ IPO ಕಳೆದ ವರ್ಷ ಬಂದಿತ್ತು. ತದನಂತರ ಈ ಐಪಿಒ ಷೇರುಗಳನ್ನು ಷೇರು ಮಾರುಕಟ್ಟೆಯಲ್ಲಿ ಪ್ರತಿ ಷೇರಿಗೆ ರೂ 191 ಕ್ಕೆ ಪಟ್ಟಿ ಮಾಡಲಾಗಿತ್ತು. ಪಟ್ಟಿ ಮಾಡಿದ ನಂತರ ಈ ಷೇರುಗಳ ಬೆಲೆ 373 ಪ್ರತಿಶತದಷ್ಟು ಹೆಚ್ಚಾಗಿವೆ. ಈ ವರ್ಷದ ಆರಂಭದಿಂದ ಇದುವರೆಗೆ ಈ ಷೇರುಗಳ ಬೆಲೆ 56 ಪ್ರತಿಶತದಷ್ಟು ಹೆಚ್ಚಾಗಿದೆ. ಕಳೆದ ಒಂದು ತಿಂಗಳಲ್ಲಿ, ಈ ಷೇರುಗಳ ಬೆಲೆ 41 ಪ್ರತಿಶತದಷ್ಟು ಏರಿಕೆ ಕಂಡಿದೆ.

    ಸಾಲ ಮುಕ್ತವಾಗುತ್ತಿದೆ ಕಂಪನಿ; ಲಾಭದಲ್ಲಿ 1,421% ಹೆಚ್ಚಳ: 1 ವರ್ಷದಲ್ಲಿ ಷೇರು ಬೆಲೆ 2,050% ಏರಿಕೆ

    ಒಂದೇ ದಿನದಲ್ಲಿ 20% ಏರಿಕೆ; ಅಪ್ಪರ್​ ಸರ್ಕ್ಯೂಟ್​ ಹಿಟ್​: ಷೇರು ಬೆಲೆ ಏರಿಕೆ ಕಾರಣಗಳೇನು?

    ಐಟಿ ಕಂಪನಿ ತ್ರೈಮಾಸಿಕ ಲಾಭ ಭಾರೀ ಕುಸಿತ: ಆದರೂ ಷೇರು ಬೆಲೆ 13% ಏರಿಕೆ; ಬ್ರೋಕರೇಜ್​ ಹೇಳುವುದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts