More

    ಐಟಿ ಕಂಪನಿ ತ್ರೈಮಾಸಿಕ ಲಾಭ ಭಾರೀ ಕುಸಿತ: ಆದರೂ ಷೇರು ಬೆಲೆ 13% ಏರಿಕೆ; ಬ್ರೋಕರೇಜ್​ ಹೇಳುವುದೇನು?

    ಮುಂಬೈ: ಐಟಿ ಕ್ಷೇತ್ರದ ದೈತ್ಯ ಕಂಪನಿ ಟೆಕ್ ಮಹೀಂದ್ರಾ ಮಾರ್ಚ್ ತ್ರೈಮಾಸಿಕ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ಈ ತ್ರೈಮಾಸಿಕ ಫಲಿತಾಂಶದ ನಂತರ, ಹೂಡಿಕೆದಾರರು ಕಂಪನಿಯ ಷೇರುಗಳನ್ನು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಟೆಕ್ ಮಹೀಂದ್ರಾ ಲಿಮಿಟೆಡ್ ಷೇರುಗಳ ಬೆಲೆ ಶುಕ್ರವಾರ 13% ರಷ್ಟು ಏರಿಕೆಯಾಗಿ 1,344.95 ರೂ. ತಲುಪಿದೆ.

    ಈ ಷೇರುಗಳ 52 ವಾರಗಳ ಗರಿಷ್ಠ ಬೆಲೆ 1,416 ರೂ. ಇದೆ. ಜನವರಿ 2024 ರಲ್ಲಿ ಷೇರು ಈ ಮಟ್ಟವನ್ನು ಮುಟ್ಟಿದೆ.

    ಮಾರ್ಚ್ 2024 ಕ್ಕೆ ಕೊನೆಗೊಳ್ಳುವ ತ್ರೈಮಾಸಿಕದಲ್ಲಿ ಟೆಕ್ ಮಹೀಂದ್ರಾದ ನಿವ್ವಳ ಲಾಭವು ವರ್ಷದಿಂದ ವರ್ಷಕ್ಕೆ ಅಂದಾಜು 41 ಪ್ರತಿಶತದಷ್ಟು ಕುಸಿದು 661 ಕೋಟಿ ರೂ. ತಲುಪಿದೆ. ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ ಟೆಕ್ ಮಹೀಂದ್ರಾ ಲಾಭ 1,117.7 ಕೋಟಿ ರೂ. ಲಾಭ ಗಳಿಸಿತ್ತು. 2023-24ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಟೆಕ್ ಮಹೀಂದ್ರಾದ ಆದಾಯವು ಶೇ. 6.2ರಷ್ಟು ಕುಸಿದು 12,871 ಕೋಟಿ ರೂ. ಮುಟ್ಟಿದೆ.

    2023-24 ರ ಸಂಪೂರ್ಣ ಹಣಕಾಸು ವರ್ಷದಲ್ಲಿ, ಟೆಕ್ ಮಹೀಂದ್ರಾದ ನಿವ್ವಳ ಲಾಭವು ವಾರ್ಷಿಕ ಆಧಾರದ ಮೇಲೆ 51.2 ಪ್ರತಿಶತದಷ್ಟು ಕುಸಿದು 2,358 ಕೋಟಿ ರೂ. ಆಗಿದೆ. ಇದೇ ಹಣಕಾಸು ವರ್ಷದಲ್ಲಿ ಆದಾಯವು 51,996 ಕೋಟಿ ರೂ. ತಲುಪಿದೆ. ಇದು ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ 2.4 ಶೇಕಡಾ ಕಡಿಮೆಯಾಗಿದೆ.

    ಸಿಇಒ ಹೇಳಿದ್ದೇನು?:

    ಟೆಕ್ ಮಹೀಂದ್ರಾ ಸಿಇಒ ಮೋಹಿತ್ ಜೋಶಿ ಮಾತನಾಡಿ, ನಾವು 2024-25 ರ ಆರ್ಥಿಕ ವರ್ಷಕ್ಕೆ ಪ್ರವೇಶಿಸುತ್ತಿದ್ದಂತೆ, ನಾವು ಗ್ರಾಹಕರ ವೆಚ್ಚದಲ್ಲಿ ಸುಧಾರಣೆಯನ್ನು ನಿರೀಕ್ಷಿಸುತ್ತಿದ್ದೇವೆ. ಇದು ಮತ್ತಷ್ಟು ಉತ್ತಮ ಆದಾಯದ ನಮ್ಮ ನಿರೀಕ್ಷೆಯನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.

    ಬ್ರೋಕರೇಜ್ ಹೇಳಿದ್ದೇನು?:

    ಬ್ರೋಕರೇಜ್​ ಸಂಸ್ಥೆ ಅರಿಹಂತ್ ಕ್ಯಾಪಿಟಲ್‌ನ ತಾಂತ್ರಿಕ ವಿಶ್ಲೇಷಣೆಯ ಮುಖ್ಯಸ್ಥ ರತ್ನೇಶ್ ಗೋಯಲ್ ಅವರು ಈ ಸ್ಟಾಕ್​ ಬೆಲೆ 1,400 ರೂಪಾಯಿವರೆಗೆ ಮುಟ್ಟಬಹುದು. ಇದರೊಂದಿಗೆ ಕಟ್ಟುನಿಟ್ಟಿನ ಸ್ಟಾಪ್ ಲಾಸ್ ಅನ್ನು 1,240 ರೂ.ನಲ್ಲಿ ಇರಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

    “ಟೆಕ್‌ಎಮ್‌ನ ಷೇರುಗಳು ರೂ. 1,340 ರ ಸಮೀಪ ಪ್ರತಿರೋಧವನ್ನು ಎದುರಿಸಬಹುದು. ತಕ್ಷಣದ ಬೆಂಬಲವು ರೂ. 1,290 ಆಗಿರುತ್ತದೆ” ಎಂದು ಜೈನಮ್ ಬ್ರೋಕಿಂಗ್‌ನ ತಾಂತ್ರಿಕ ಸಂಶೋಧನಾ ಮುಖ್ಯಸ್ಥ ಕಿರಣ್ ಜಾನಿ ಹೇಳಿದರು.

    “ಸಂವಹನದಲ್ಲಿನ ಬೇಡಿಕೆಯು ದುರ್ಬಲ ಮತ್ತು ಅಸ್ಥಿರವಾಗಿ ಉಳಿದಿದೆ, ಸಂವಹನಗಳ ಮೇಲಿನ ಕಡಿಮೆ ಅವಲಂಬನೆಯೊಂದಿಗೆ ಸಮತೋಲಿತ ಪೋರ್ಟ್​ಫೋಲಿಯೊ ಮಿಶ್ರಣವನ್ನು ಚಾಲನೆ ಮಾಡಲು ಕಂಪನಿಯು ರೂಪಿಸಿದ ಕಾರ್ಯತಂತ್ರವು ಧನಾತ್ಮಕವಾಗಿದೆ ಎಂದು ನಾವು ನಂಬುತ್ತೇವೆ. ಆದರೂ, ಇದರ ಪೋರ್ಟ್​ಫೋಲಿಯೊ ವ್ಯವಹಾರದ ಆವರ್ತಕತೆ ಮತ್ತು ಅದರ ವ್ಯಾಪಾರ ಘಟಕಗಳಾದ್ಯಂತ ದೌರ್ಬಲ್ಯವು ಸವಾಲಿನಂತಿದೆ. ಆದ್ದರಿಂದ ನಾವು ಹೆಸರನ್ನು ಧನಾತ್ಮಕವಾಗಿ ಪರಿವರ್ತಿಸುವ ಮೊದಲು ಚೇತರಿಕೆಯ ಆರಂಭಿಕ ಚಿಹ್ನೆಗಾಗಿ ನಾವು ಕಾಯುತ್ತೇವೆ” ಎಂದು ಬ್ರೋಕರೇಜ್​ ಸಂಸ್ಥೆ ಪ್ರಭುದಾಸ್ ಲೀಲಾಧರ್ ಹೇಳಿದೆ. ಈ ಸಂಸ್ಥೆಯು ರೂ.1,135 ರ ಇಳಿಕೆಯ ಗುರಿಯೊಂದಿಗೆ ‘ಹೋಲ್ಡ್’ ರೇಟಿಂಗ್ ಅನ್ನು ನೀಡಿದೆ.

    ಸತತ 5ನೇ ದಿನ ಗುಳಿಯ ಗುಟುರು: ಭಾರತೀಯ ಷೇರು ಪೇಟೆ ಲಾಭ ಮಾಡಿಕೊಳ್ಳುತ್ತಿರುವುದೇಕೆ?

    ಈ 6 ಷೇರುಗಳು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಬಹುದು… ಬೆಲೆಗಳು 200 ದಿನದ ಸರಾಸರಿಗಿಂತ ಅಧಿಕವಾಗಿವೆ..

    ಮೇ ತಿಂಗಳಲ್ಲಿ ಲಾಭ ಮಾಡಿಕೊಳ್ಳಲು ಪಿಎಸ್​ಯು ಷೇರು ಖರೀದಿಸಿ: ಹೀಗಿಕೆ ಸಲಹೆ ನೀಡುತ್ತಿದ್ದಾರೆ ತಜ್ಞರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts