5 ದಿನಗಳಿಂದ ಷೇರು ಬೆಲೆಗೆ ಎಕ್ಸ್​ಪ್ರೆಸ್​ ವೇಗ: ರೂ. 175 ತಲುಪಬಹುದು ರೈಲ್ವೆ ಕಂಪನಿ ಸ್ಟಾಕ್​ ದರ

railway-stock
Published on

ಮುಂಬೈ: ರೈಲ್ವೆ ಕಂಪನಿಯಾಗಿರುವ ಇಂಡಿಯನ್ ರೈಲ್ವೆ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ (IRFC) ಷೇರುಗಳಲ್ಲಿ ಏರುತ್ತಿರುವ ಪ್ರವೃತ್ತಿ ಮುಂದುವರಿದಿದೆ. ವಾರದ ಕೊನೆಯ ವಹಿವಾಟಿನ ದಿನವಾದ ಶುಕ್ರವಾರ ಈ ಷೇರು 5.19 ರಷ್ಟು ಏರಿಕೆಯೊಂದಿಗೆ 158.05 ರೂ. ಮುಟ್ಟಿತು. ಶುಕ್ರವಾರ ಷೇರು ಮಾರುಕಟ್ಟೆಯು ಮಾರಾಟದ ಪ್ರವೃತ್ತಿಯಲ್ಲಿದ್ದ ಸಮಯದಲ್ಲಿ ಷೇರುಗಳಲ್ಲಿ ಈ ಏರಿಕೆ ಕಂಡುಬಂದಿದೆ.

ಸತತ 5ನೇ ವಹಿವಾಟಿನ ದಿನಗಳಿಂದ ಈ ಷೇರುಗಳ ಬೆಲೆ ಏರಿಕೆ ಕಾಣುತ್ತಿದೆ. ಈ ವಾರದಲ್ಲಿ ಈ ಷೇರು ಶೇಕಡಾ 12 ರಷ್ಟು ಏರಿಕೆಯಾಗಿದೆ. ಇದೇ ಸಮಯದಲ್ಲಿ, ಈ ಷೇರು ಬೆಲೆ ಕಳೆದ ಆರು ತಿಂಗಳಲ್ಲಿ ಅಂದಾಜು ಶೇಕಡಾ 120 ಮತ್ತು ಒಂದು ವರ್ಷದಲ್ಲಿ ಶೇಕಡಾ 402 ಹೆಚ್ಚಳವನ್ನು ದಾಖಲಿಸಿದೆ.

ದೈನಂದಿನ ಪಟ್ಟಿಯಲ್ಲಿ ಷೇರುಗಳು ಬಲವಾಗಿ ಕಾಣುತ್ತವೆ. ಮುಂದಿನ ಅವಧಿಯಲ್ಲಿ ಇದು ರೂ 175 ರ ಗುರಿ ಬೆಲೆಗೆ ಏರಬಹುದು ಎಂದು ಬ್ರೋಕರೇಜ್​ ಸಂಸ್ಥೆಯಾದ ರೆಲಿಗೇರ್ ಬ್ರೋಕಿಂಗ್‌ನ ರವಿ ಸಿಂಗ್ ಹೇಳಿದ್ದಾರೆ. ಸ್ಟಾಪ್ ಲಾಸ್ ಅನ್ನು 152 ರೂ.ನಲ್ಲಿ ಇರಿಸಿಕೊಳ್ಳಲು ಅವರು ಸಲಹೆ ನೀಡಿದ್ದಾರೆ.

ಇದೇ ಸಮಯದಲ್ಲಿ, ಆನಂದ್ ರಾಠಿ ಷೇರ್ಸ್​ ಮತ್ತು ಸ್ಟಾಕ್ ಬ್ರೋಕರ್ಸ್​ನ ಜಿಗರ್ ಎಸ್ ಪಟೇಲ್ ಅವರು 150 ರೂಗಳಲ್ಲಿ ಬೆಂಬಲವನ್ನು ಮತ್ತು 160 ರೂಗಳಲ್ಲಿ ಪ್ರತಿರೋಧವನ್ನು ಕಂಡುಕೊಳ್ಳುವುದಾಗಿ ಹೇಳಿದ್ದಾರೆ. ಒಂದು ತಿಂಗಳಿಗೆ ಈ ಷೇರಿನ ಅಂದಾಜು ವ್ಯಾಪಾರದ ಶ್ರೇಣಿಯು ರೂ 145 ರಿಂದ ರೂ 175 ರ ನಡುವೆ ಇರುತ್ತದೆ ಎಂದು ಅವರು ಹೇಳಿದ್ದಾರೆ.

ವಾರದ ಕೊನೆಯ ವಹಿವಾಟಿನ ದಿನವಾದ ಶುಕ್ರವಾರದಂದು ಷೇರುಪೇಟೆ ತೀವ್ರ ಕುಸಿತ ಕಂಡಿದೆ. ಬಿಎಸ್ಇ 30-ಷೇರು ಸೂಚ್ಯಂಕ 609.28 ಅಂಕಗಳು ಅಥವಾ ಶೇಕಡಾ 0.82 ರಷ್ಟು ಕುಸಿದು 73,730.16 ಅಂಕಗಳಿಗೆ ತಲುಪಿದೆ. ವಹಿವಾಟಿನ ಸಮಯದಲ್ಲಿ ಇದು 722.79 ಅಂಕಗಳು ಅಥವಾ ಶೇಕಡಾ 0.97ರಷ್ಟು ಕುಸಿದು 73,616.65 ಕ್ಕೆ ತಲುಪಿತ್ತು. ನಿಫ್ಟಿ ಕೂಡ 150.40 ಅಂಕಗಳು ಅಥವಾ ಶೇಕಡಾ 0.67 ರಷ್ಟು ಕುಸಿದು 22,419.95 ಅಂಕಗಳಿಗೆ ತಲುಪಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net