More

    15 ಜಿಲ್ಲೆಗಳಲ್ಲಿ ಮುಂದುವರಿದ ಶಾಖ ಅಲೆ:ಮೊದಲ ಬಾರಿ ಬೆಂಗಳೂರಿನಲ್ಲಿ ಅಧಿಕ ತಾಪಮಾನ

    ಬೆಂಗಳೂರು:ರಾಜ್ಯದ 15 ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಶಾಖ ಅಲೆ ಮುಂದುವರಿಯಲಿದೆ. ಕಲಬುರಗಿ, ಬೀದರ್​, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಗದಗ, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಮೇ 5ರವರೆಗೆ ಶಾಖ ಅಲೆ ಇರಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ.

    ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಏ.28ರಿಂದ ಮೇ 1ರವರೆಗೆ ಬಿಸಿಲು ಹೆಚ್ಚಾಗುವ ಸಾಧ್ಯತೆ ಇದೆ. ಮುಂದಿನ ಐದು ದಿನಗಳಲ್ಲಿ ರಾಜ್ಯದ ಹಲವೆಡೆ ಗರಿಷ್ಠ ತಾಪಮಾನದಲ್ಲಿ ಸರಾಸರಿ 2-3 ಡಿ.ಸೆ.ಹೆಚ್ಚಳವಾಗಲಿದೆ. ಕೆಲವೆಡೆ ಮಾತ್ರ ಸಾಧಾರಣ ಪ್ರಮಾಣದಲ್ಲಿ ಮಳೆ ಬೀಳಲಿದೆ. ಬೆಂಗಳೂರು ನಗರದಲ್ಲಿ ನಿರ್ಮಲ ಆಕಾಶ ಇರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ಕ್ರಮವಾಗಿ 38 ಮತ್ತು 23 ಡಿ.ಸೆ. ದಾಖಲಾಗಲಿದೆ. ಶನಿವಾರ ಕಲಬುರಗಿಯಲ್ಲಿ 42.4 ಡಿ.ಸೆ.ವರದಿಯಾಗಿದೆ. ರಾಯಚೂರು 42.2, ವಿಜಯಪುರ 40.6, ಬಾಗಲಕೋಟೆ 41.6, ಚಿಕ್ಕನಾಯಕನಹಳ್ಳಿ 41.4, ಮಂಡ್ಯ 39.2, ಚಾಮರಾಜನಗರ 39.1 ಡಿ.ಸೆ. ದಾಖಲಾಗಿದೆ. ದಕ್ಷಿಣ ಕರ್ನಾಟಕ ಜಿಲ್ಲೆಗಳಕ್ಕಿಂತ ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಪ್ರಸ್ತುತ ತಿಂಗಳಿಂದ 40ರ ಗಡಿಯಲ್ಲಿ ಉಷ್ಣಾಂಶ ವರದಿಯಾಗುತ್ತಿದ್ದು, ಬಿಸಿಲಿನ ಪ್ರಖರತೆ ಜನರನ್ನು ಬಾಧಿಸುತ್ತಿದೆ.

    ಬೆಂಗಳೂರಿನಲ್ಲಿ ಅಧಿಕ ತಾಪಮಾನ
    ರಾಜಧಾನಿಯಲ್ಲಿ ಇದೇ ಮೊದಲ ಬಾರಿಗೆ ಅಧಿಕ ತಾಪಮಾನ ದಾಖಲಾಗಿದೆ. ಶನಿವಾರ 38 ಡಿ.ಸೆ. ಉಷ್ಣಾಂಶ ಕಂಡುಬಂದಿದೆ. ಈ ಮೂಲಕ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ. ಮುಂದಿನ ದಿನಗಳಲ್ಲಿ 40 ಡಿ.ಸೆ.ಉಷ್ಣಾಂಶ ವರದಿಯಾಗುವ ಸಾಧ್ಯತೆ ಇದೆ. ಪ್ರಸಕ್ತ ತಿಂಗಳಿಂದ ಸರಾಸರಿ 37 ಅಸುಪಾಸಿನಲ್ಲಿ ಉಷ್ಣಾಂಶ ದಾಖಲಾಗುತ್ತಿದೆ. ಮೂರ್ನಾಲ್ಕ ದಿನಗಳಿಂದ ಗರಿಷ್ಠ ತಾಪಮಾನದಲ್ಲಿ 1-2 ಡಿ.ಸೆ.ಹೆಚ್ಚಳವಾಗುತ್ತಿದೆ. ಮೇನಲ್ಲಿ ಇನ್ನಷ್ಟು ಬಿಸಿಲಿನ ಪ್ರಖರತೆ ಕಾಣಿಸಿಕೊಳ್ಳಲಿದೆ.

    ‘ಕಲ್ಕಿ 2898 ಎಡಿ’ ರಿಲೀಸ್​ಗೆ ಡೇಟ್​ ಫಿಕ್ಸ್​.. ಯಾವಾಗ ಬಿಡುಗಡೆ?

    ಜನರೇ ಎಚ್ಚರಿಕೆವಹಿಸಿ
    ದೀರ್ಘಾವಧಿವರೆಗೆ ಬಿಸಿಲಿನಲ್ಲಿ ಕೆಲಸ ಮಾಡುವವರಿಗೆ ಶಾಖ ಅಲೆಯ ಕಾಯಿಲೆಗಳಿಗೆ ತುತ್ತಾಗಲಿದ್ದಾರೆ. ಹಾಗಾಗಿ, ಬಿಸಿಲಿನ ಪ್ರಖರತೆ ಇರುವ ಸಂದರ್ಭದಲ್ಲಿ ಹೊರಗಡೆ ಕೆಲಸ ಮಾಡುವುದನ್ನು ತಪ್ಪಿಸಬೇಕು. ಚಿಕ್ಕ ಮಕ್ಕಳು, ವೃದ್ಧರು, ಗಂಭೀರ ಕಾಯಿಲೆಗಳಿಂದ ಒಳಲುತ್ತಿರುವ ರೋಗಿಗಳು ತಮ್ಮ ಆರೋಗ್ಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ರೈತರು, ಕೃಷಿ ಕಾರ್ಮಿಕರು ಜಮೀನಿನಲ್ಲಿ ಕೆಲಸ ಮಾಡಬಾರದು. ಪ್ರಯಾಣ ಮಾಡುವವರು ತಮ್ಮ ಜತೆಗೆ ಕುಡಿಯವ ನೀರನ್ನು ಒಯ್ಯಬೇಕು. ಹೊರಗಿನ ತಾಪಮಾನ ಹೆಚ್ಚಿರುವವಾಗ ಕ್ರೀಡಾಪಟುಗಳು ಶ್ರಮದಾಯಕ ಚಟುವಟಿಕೆ ತಪ್ಪಿಸಬೇಕು.

    ಉತ್ತರ ಕರ್ನಾಟಕ ಭಾಗದ ಕೆಲ ಜಿಲ್ಲೆಗಳಲ್ಲಿ ಮೇನಲ್ಲಿ 45-46ರ ಅಸುಪಾಸಿನಲ್ಲಿ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ಮತ್ತು ಕನಿಷ್ಠದಲ್ಲಿ ವಾಡಿಕೆಗಿಂತ ಅಧಿಕ ಉಷ್ಣಾಂಶ ವರದಿಯಾಗುತ್ತಿದೆ. ಬಿಸಿಗಾಳಿಯಿಂದಾಗಿ ಜನರು ಸೇರಿ ಕೃಷಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಮೇ 15ರ ನಂತರ ರಾಜ್ಯದಲ್ಲಿ ತಾಪಮಾನ ಇಳಿಮುಖವಾಗಬಹುದು.
    |ಸಿ.ಎಸ್​.ಪಾಟೀಲ್​, ಹವಾಮಾನ ಇಲಾಖೆ ನಿರ್ದೇಶಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts