More

    ಸಣ್ಣ ಸಮುದಾಯದ ನಿರ್ಲಕ್ಷ್ಯ ಸಲ್ಲದು

    ಗೋಣಿಕೊಪ್ಪ: ಕೊಡಗಿನಲ್ಲಿರುವ ಸಣ್ಣ ಸಣ್ಣ ಸಮುದಾಯಗಳು ಇತ್ತೀಚೆಗೆ ಕ್ರೀಡೋತ್ಸವದ ಮೂಲಕ ತಮ್ಮ ಸಮಾಜವನ್ನು ಒಗ್ಗೂಡಿಸುವ ಪ್ರಯತ್ನಕ್ಕೆ ಮುಂದಾಗಿದೆ. ಇದರಲ್ಲಿ ಯಶಸ್ವಿ ಕೂಡ ಸಿಗುತ್ತಿರುವುದು ಆಶಾದಾಯಕ ಬೆಳವಣಿಗೆ, ಸಣ್ಣ ಸಮುದಾಯದ ಮೇಲೆ ಎಂದಿಗೂ ನಿರ್ಲಕ್ಷ್ಯ ಸಲ್ಲದು ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅಭಿಪ್ರಾಯಪಟ್ಟರು.

    ಹಾತೂರು ಶಾಲಾ ಮೈದಾನದಲ್ಲಿ 9ನೇ ವರ್ಷದ ಅಮ್ಮಕೊಡವ ಕ್ರಿಕೆಟ್ ನಮ್ಮೆ ಅಚ್ಚಿಯಂಡ ಕುಟುಂಬಸ್ಥರು ಆಯೋಜಿಸಿರುವ ಈ ಬಾರಿಯ ಕ್ರೀಡೋತ್ಸವವನ್ನು ಶನಿವಾರ ಉದ್ಘಾಟಿಸಿ ಮಾತನಾಡಿ, ಇವರು ಕೊಡಗಿನಲ್ಲಿರುವ ಸಣ್ಣ ಸಣ್ಣ ಸಮುದಾಯಗಳು ತಮ್ಮ ಕಲೆ ಸಂಸ್ಕೃತಿ ಆಚಾರ, ವಿಚಾರ, ಪದ್ಧತಿ, ಪರಂಪರೆಯನ್ನು ಉಳಿಸಿಕೊಂಡು ಬರುತ್ತಿರುವುದರಿಂದ ಕೊಡಗು ಕೊಡಗಾಗಿ ಉಳಿದಿದೆ. ಎಲ್ಲ ಸಣ್ಣ ಸಮುದಾಯಗಳು ತಮ್ಮ ಅಸ್ಥಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸಬೇಕು. ಕ್ರೀಡೆಯ ಮೂಲಕ ವಾರ್ಷಿಕವಾಗಿ ಎಲ್ಲರೂ ಒಂದೆಡೆ ಸೇರುವ ಪ್ರಯತ್ನ ಯಶಸ್ವಿಯಾಗಬೇಕು ಎಂದರು.

    ಪ್ರಜಾಪ್ರಭುತ್ವ ವ್ಯವಸ್ಥೆ, ರಾಜಕೀಯ ವ್ಯವಸ್ಥೆಯಲ್ಲಿ ಸಣ್ಣ ಸಮುದಾಯವನ್ನು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಆದ್ದರಿಂದ ಸಮುದಾಯಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಕ್ರೀಡೋತ್ಸವದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಇದರಿಂದ ಸಮುದಾಯದವರು ಒಂದೆಡೆ ಸೇರುವ ಪ್ರಯತ್ನ ಆಗಲಿದೆ. ಈಗಾಗಲೇ ಅಮ್ಮ ಕೊಡವ ಸಮುದಾಯದವರ ಕ್ರಿಡೋತ್ಸವಕ್ಕೆ 5 ಲಕ್ಷ ರೂ. ಅನುದಾನವನ್ನು ಮಂಜೂರು ಮಾಡಲಾಗಿದೆ. ಇದರ ಸದ್ಬಳಕೆಯಾಗಲಿ ಎಂದರು.

    ಅಚ್ಚಿಯಂಡ ಕುಟುಂಬಸ್ಥರ ಅಧ್ಯಕ್ಷ ಬೋಸ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯನ್ನು ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಸ್ವಾಮಿ ಪರಹಿತಾನಂದಜಿ ಮಹರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಚ್ಚಿಯಂಡ ಕುಟುಂಬಸ್ಥರ ಸೇವೆ ಶ್ಲಾಘನೀಯ. ಪೊನ್ನಂಪೇಟೆಯಲ್ಲಿರುವ ಆಶ್ರಮವು ಅಚ್ಚಿಯಂಡ ಕುಟುಂಬಸ್ಥರ ವಿಶೇಷ ಕೊಡುಗೆಯಾಗಿದೆ ಎಂದರು.

    ಕೊಡಗು ಜಿಲ್ಲಾ ವಿಧಾನ ಪರಿಷತ್ತಿನ ಸದಸ್ಯರಾದ ಮಂಡೇಪಂಡ ಸುಜಾ ಕುಶಾಲಪ್ಪ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಅಮ್ಮಕೊಡವ ಸಮಾಜದ ಕೊಡಗು ಜಿಲ್ಲಾ ಅಧ್ಯಕ್ಷರಾದ ಬಾನಂಡ ಪ್ರಥ್ಯು ಉಪಸ್ಥಿತರಿದ್ದರು.

    ಉಪಾಧ್ಯಕ್ಷರಾದ ಅಚ್ಚಿಯಂಡ ಕೊಡಗು ಗಣೇಶ್, ಗೌರವ ಅಧ್ಯಕ್ಷರಾದ ಎ.ಕೆ.ಜನಾರ್ಧನ, ದೇವಕ್ಕಿ ಅಯ್ಯಪ್ಪಮಯ್ಯ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಅಖಿಲ ಅಮ್ಮಕೊಡವ ಸಮಾಜ ಅಚ್ಚಿಯಂಡ ಕುಟುಂಬಸ್ಥರು, ಅಖಿಲ ಅಮ್ಮಕೊಡವ ವಿದ್ಯಾಭಿವೃದ್ದಿ ಸಂಘ, ಅಖಿಲ ಅಮ್ಮಕೊಡವ ಸಮಾಜ ಬೆಂಗಳೂರು, ಕೋತೂರಿನ ಶ್ರೀಕೃಷ್ಣ ಅಮ್ಮಕೊಡವ ಸಂಘ, ಅನ್ನಪೂರ್ಣೇಶ್ವರಿ ಮಹಿಳಾ ಸಂಘ, ಕಾವೇರಿ ಅಮ್ಮಕೊಡವ ಮಹಿಳಾ ಸಂಘ, ಮಾಯಮುಡಿಯ ಕಂಗಳತನಾಡ್ ಅಮ್ಮಕೊಡವ ಸಂಘ, ಮಡಿಕೇರಿಯ ಕಾವೇರಿ ಅಮ್ಮಕೊಡವ ಸಾಂಸ್ಕೃತಿಕ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು. ಅಮ್ಮಕೊಡವ ಸಮಾಜದ 24 ತಂಡಗಳು ಕ್ರೀಡೋತ್ಸವದಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts