More

    ಹಿರಿಯ ಹೂಡಿಕೆದಾರ ಕಚೋಲಿಯಾ ಹೂಡಿಕೆ ಮಾಡಿದ ಕಂಪನಿಯ ಷೇರುಗಳ ಬೆಲೆ 45 ದಿನಗಳಲ್ಲಿ 60% ಏರಿಕೆ

    ಮುಂಬೈ: ಸೋಮವಾರ, ಷೇರು ಮಾರುಕಟ್ಟೆ ಏರಿಕೆ ಕಾಣುತ್ತಿದ್ದ ಅವಧಿಯಲ್ಲಿ, ಬಾಲು ಫೋರ್ಜ್ ಇಂಡಸ್ಟ್ರೀಸ್‌ ಲಿಮಿಟೆಡ್​ (Balu Forge Industries Ltd:) ಷೇರುಗಳ ಬೆಲೆ ಶೇಕಡಾ 5 ರಷ್ಟು ಏರಿಕೆ ದಾಖಲಿಸಿ, ರೂ. 274.80 ರ ಮಟ್ಟ ಮುಟ್ಟಿತ್ತು.

    ಬಾಲು ಫೋರ್ಜ್ ಕಂಪನಿಯು 2520 ಕೋಟಿ ರೂಪಾಯಿಗಳ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ, ಈ ಷೇರುಗಳ 52 ವಾರಗಳ ಗರಿಷ್ಠ ಬೆಲೆ 301 ರೂ ಮತ್ತು ಕನಿಷ್ಠ ಬೆಲೆ ರೂ. 92.55 ಇದೆ.

    ಬಾಲು ಫೊರ್ಜ್ ಷೇರುಗಳು ಕಳೆದ 5 ದಿನಗಳಲ್ಲಿ ಹೂಡಿಕೆದಾರರಿಗೆ ಶೇಕಡಾ 23 ರಷ್ಟು ಲಾಭವನ್ನು ನೀಡಿವೆ. ಕಳೆದ ಒಂದು ತಿಂಗಳಲ್ಲಿ, ಈ ಷೇರುಗಳ ಬೆಲೆ ರೂ 190 ರ ಕನಿಷ್ಠ ಮಟ್ಟದಿಂದ ಶೇಕಡಾ 45 ರಷ್ಟು ಏರಿಕೆ ಕಂಡಿದೆ, ಮಾರ್ಚ್ 13 ರಂದು ರೂ 164 ರ ಕಡಿಮೆ ಮಟ್ಟದಿಂದ, ಬಾಲು ಫೋರ್ಜ್ ಷೇರುಗಳ ಬೆಲೆ ಶೇಕಡಾ 60 ರಷ್ಟು ಹೆಚ್ಚಳ ಕಂಡಿದೆ.

    ಷೇರುಪೇಟೆಯಲ್ಲಿ ಬಿಗ್ ವೇಲ್ ಎಂದು ಕರೆಯಲ್ಪಡುವ ಹಿರಿಯ ಹೂಡಿಕೆದಾರ ಆಶಿಶ್ ಕಚೋಲಿಯಾ ಅವರು ಬಾಲು ಫೋರ್ಜ್ ಇಂಡಸ್ಟ್ರೀಸ್ ಮೇಲೆ ದೊಡ್ಡ ಬೆಟ್ ಇಟ್ಟು 21.65 ಲಕ್ಷ ಷೇರುಗಳನ್ನು ಖರೀದಿಸಿದ್ದಾರೆ.

    ಬಾಲು ಫೋರ್ಜ್ ಇಂಡಸ್ಟ್ರೀಸ್ ಭಾರತದಲ್ಲಿ ಕ್ರ್ಯಾಂಕ್‌ಶಾಫ್ಟ್ ಉತ್ಪಾದನಾ ಕಂಪನಿಯಾಗಿದೆ. ಈ ಕಂಪನಿಯು ಸಿದ್ಧಪಡಿಸಿದ ಮತ್ತು ಅರೆ-ಸಿದ್ಧಪಡಿಸಿದ ಖೋಟಾ ಕ್ರ್ಯಾಂಕ್‌ಶಾಫ್ಟ್​ಗಳನ್ನು ತಯಾರಿಸುತ್ತದೆ. ಬಾಲು ಫೊರ್ಜ್ ಕ್ರ್ಯಾಂಕ್‌ಶಾಫ್ಟ್​ಗಳ ಯಂತ್ರಕ್ಕಾಗಿ ಹೊಸ ತಂತ್ರಜ್ಞಾನಗಳು ಮತ್ತು ಉಪಕರಣಗಳನ್ನು ಬಳಸುತ್ತದೆ.

    10 ತಿಂಗಳಲ್ಲಿ ಸಾಕಷ್ಟು ಏರಿಕೆ: ಸರ್ಕಾರಿ ಗಣಿ ಕಂಪನಿ ಷೇರು ಬೆಲೆ​ ಮತ್ತಷ್ಟು ಹೆಚ್ಚುತ್ತದೆ ಎನ್ನುತ್ತದೆ ಬ್ರೋಕರೇಜ್​

    ಈ ಎರಡು ಫಾರ್ಮಾ ಷೇರುಗಳನ್ನು ಖರೀದಿಸಿ: ಮಾರುಕಟ್ಟೆ ತಜ್ಞರ ಶಿಫಾರಸು

    ಸ್ಟೀಲ್​ ಟ್ಯೂಬ್ಸ್​ ಕಂಪನಿ ಐಪಿಒ ಷೇರಿನ ಮಹಿಮೆ: 2 ತಿಂಗಳಲ್ಲಿ ಹೂಡಿಕೆದಾರರ ಹಣ ದುಪ್ಟಟ್ಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts