More

    ವಿಟ್ಲ ಕೈಕೊಟ್ಟ ವಿದ್ಯುತ್

    ಚುನಾವಣೆ ಪ್ರಾರಂಭವಾದ ಬಳಿಕ ಮುಗಿರುವ ತನಕ ಅಡಚಣೆ ರಹಿತ ವಿದ್ಯುತ್ ನೀಡಬೇಕೆಂಬ ನಿರ್ದೇಶನವನ್ನು ಚುನಾವಣಾ ಆಯೋಗದಿಂದ ನೀಡಲಾಗಿತ್ತು. ಈ ನಡುವೆ ವಿಟ್ಲ ಮೆಸ್ಕಾಂ ವ್ಯಾಪ್ತಿಯಲ್ಲಿ ಬೆಳಗ್ಗೆ ೭ರ ಸುಮಾರಿಗೆ ೩೦ ನಿಮಿಷಕ್ಕೂ ಅಽಕ ಸಮಯ ವಿದ್ಯುತ್ ನಿಲುಗಡೆಯಾಗಿದೆ. ಇದರಿಂದ ಪುತ್ತೂರು ಹಾಗೂ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವಿವಿಧ ಮತಗಟ್ಟೆಗಳಲ್ಲಿ ಕತ್ತಲೆಯಲ್ಲೇ ಮತದಾನ ಮಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಮತಗಟ್ಟೆ ಅಽಕಾರಿಗಳು ತಮ್ಮಲ್ಲಿದ್ದ ಲೈಟ್ ಹಾಗೂ ಮೊಬೈಲ್ ಲೈಟ್‌ಗಳನ್ನು ಬಳಸಿಕೊಂಡು ಮತದಾನ ಪ್ರಕ್ರಿಯೆ ನಡೆಸಿದರು. ವಿಟ್ಲ ಉಪಕೇಂದ್ರ ಸಂಪರ್ಕ ಕಲ್ಪಿಸುವ ೧೧೦ಕೆವಿ ಮಾರ್ಗದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ಅಡಚಣೆಯಾಗಿದೆ. ಪರ್ಯಾಯ ಮಾರ್ಗದ ಮೂಲಕ ವಿಟ್ಲಕ್ಕೆ ವಿದ್ಯುತ್ ಸರಬರಾಜು ಮಾಡಲಾಯಿತು.


    ಮೊಬೈಲ್ ಗೊಂದಲ!
    ಪುತ್ತೂರು ಮತಗಟ್ಟೆಯೊಂದರಲ್ಲಿ ಮತದಾನ ಮಾಡಿದ ಬಳಿಕ ತಾವು ಮಾಡಿದ ಮತದಾನದ ಚಿತ್ರ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಇದರಿಂದ ಮತಗಟ್ಟೆ ಆವರಣದಲ್ಲಿ ಮೊಬೈಲ್ ತೆಗೆದುಕೊಂಡು ಹೋಗುವುದಕ್ಕೇ ಅಽಕಾರಿಗಳು ಬಿಡದೆ ಮತದಾರರಿಗೆ ಕಿರಿಕಿರಿ ಮಾಡಿದರು. ಕೆಲವು ಭಾಗದಲ್ಲಿ ಯಾವುದೇ ಭದ್ರತೆ ಇಲ್ಲದೆ ಮೊಬೈಲ್‌ಗಳನ್ನು ಮತಗಟ್ಟೆಯ ಹೊರಭಾಗದಲ್ಲಿ ಇಟ್ಟುಹೋಗಬೇಕಾಯಿತು. ಕೆಲವು ಭಾಗದಲ್ಲಿ ಮತದಾರರು ಮೊಬೈಲ್‌ನ್ನು ಭದ್ರತೆ ಇಲ್ಲದೆ ಬಿಟ್ಟು ಹೋಗಲು ಒಪ್ಪದ ಹಿನ್ನೆಲೆಯಲ್ಲಿ ಅಽಕಾರಿಗಳು ಅನಿವರ್ಯವಾಗಿ ಒಳಗೆ ಬಿಡಬೇಕಾಯಿತು. ಕೆಲವು ಕಡೆಯಲ್ಲಿ ಮತಗಟ್ಟೆ ಹೊರಭಾಗದಲ್ಲಿ ಮೊಬೈಲ್ ಇಡುವುದಕ್ಕೆ ಸೇಫ್ ಲಾಕರ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದರು.


    ಚೆಕ್‌ಪೋಸ್ಟ್‌ನಲ್ಲಿಲ್ಲ ಚೆಕ್ಕಿಂಗ್!
    ಚುನಾವಣಾ ಆಯೋಗದಿಂದ ಗಡಿಭಾಗದ ಚೆಕ್‌ಪೋಸ್ಟ್‌ಗಳಲ್ಲಿ ಕ್ಯಾಮರಾಗಳ ಮುಂದೆ ಘನವಾಹನಗಳನ್ನು ಕಡ್ಡಾಯವಾಗಿ ಚೆಕ್ಕಿಂಗ್ ಮಾಡಬೇಕೆಂಬ ಆದೇಶ ಹೊರಡಿಸಲಾಗಿದ್ದರೂ, ಅಽಕಾರಿಗಳು ನಿರಾಸಕ್ತಿ ತೋರಿಸಿದ್ದಾರೆ. ವಾಹನ ನಿಲ್ಲಿಸಿ ವಾಹಿತಿ ಪಡೆಯುವ ಗೋಜಿಗೂ ಅಽಕಾರಿಗಳು ಹೋಗದಿರುವುದು ಸಾರಡ್ಕ ಭಾಗದಲ್ಲಿ ಕಾಣಿಸಿದೆ. ಪೊಲೀಸ್, ಗೃಹರಕ್ಷಕ ದಳ, ಸೇರಿ ಅಽಕಾರಿಗಳನ್ನು ಇಲ್ಲಿ ನಿಯೋಜನೆ ಮಾಡಲಾಗುತ್ತಿದ್ದು, ನಿತ್ಯ ಕುರ್ಚಿ ಹಾಕಿ ಕೂರುವುದಕ್ಕೆ ಸರ್ಕಾರ ಸಾವಿರಾರು ರೂ. ಪೋಲು ಮಾಡಬೇಕಾ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.


    ಮತದಾನದಿಂದ ವಂಚನೆ!
    ಗ್ರಾಮದ ಪ್ರತಿಯೊಂದು ಮನೆಗೆ ಬೇಟಿ ನೀಡಿ ಹಿರಿಯ ನಾಗರೀಕರ ಹಾಗೂ ಮತಗಟ್ಟೆ ಬರಲು ಸಾಧ್ಯವಿಲ್ಲದ ಅಂಗವಿಕಲ ಮತದಾರರ ಮಾಹಿತಿಯನ್ನು ಸಂಗ್ರಹ ಮಾಡಿ ಚುನಾವಣಾ ಆಯೋಗಕ್ಕೆ ನೀಡಿ ಅವರಿಗೆ ಮನೆ ಮತದಾನದ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಆದರೆ ಅಽಕಾರಿಗಳು ಮನೆ ಮಂದಿಗೆ ಸಮರ್ಪಕ ಮಾಹಿತಿಯನ್ನು ನೀಡದೆ ಅವರಿಗೆ ಮತಗಟ್ಟೆ ಬರಲಾಗದಿದ್ದರೂ, ಮನೆ ಮತದಾನದ ವ್ಯವಸ್ಥೆಯನ್ನು ಕಲ್ಪಿಸದೆ ಮತದಾನದಿಂದ ವಂಚಿತರಾಗುವಂತೆ ಮಾಡಿದೆ. ಎರುಂಬು ನಿವಾಸಿ ೧೯೩೫ರಲ್ಲಿ ಜನಿಸಿದ ಕಾವೇರಿ ಅವರಿಗೆ ಮನೆ ಮತದಾನ ಇಲ್ಲದಂತಾಗಿದೆ. ಆದಾಳ ನಿವಾಸಿ ೮೯ವರ್ಷದ ಅನಂತ ಶ್ರೀಧರ ನಾಯಕ್ ಅವರು ಮತಗಟ್ಟೆಗೆ ತೆರಳಿ ಮತದಾನ ಮಾಡಿದರು. ನಿಧನರಾದವರ ಹೆಸರು ತೆಗೆದುಹಾಕುವ ಬದಲಾಗಿ, ಅವರ ಮನೆಯಲ್ಲಿ ಜೀವಂತ ಇರುವ ವ್ಯಕ್ತಿಗಳ ಹೆಸರನ್ನು ತೆಗೆದು ಹಾಕಲಾಗಿದೆ. ಜಾಗ ಮಾರಾಟ ಮಾಡಿ ಊರೇ ಬಿಟ್ಟಿ ಹೋದವರ ಹೆಸರುಗಳೂ ಮತದಾರರ ಪಟ್ಟಿಯಲ್ಲಿ ಇನ್ನೂ ಊರ್ಜಿತವಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts