More

    ಈತ ನಿಜವಾದ ಹೀರೋ…ಪ್ರಾಣವನ್ನೇ ಪಣಕ್ಕಿಟ್ಟು 50 ಜನರನ್ನು ರಕ್ಷಿಸಿದ 10ನೇ ತರಗತಿ ವಿದ್ಯಾರ್ಥಿ

    ಹೈದರಾಬಾದ್‌:  ಫಾರ್ಮಾ ಕಂಪನಿಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ವ್ಯಾಪಿಸಿದ್ದರಿಂದ ದಟ್ಟ ಹೊಗೆ ಆವರಿಸಿಕೊಂಡಿದ್ದು, ಸುಮಾರು 50 ಮಂದಿ ಕಾರ್ಮಿಕರು ಒಳಗೆ ಸಿಲುಕಿಕೊಂಡಿದ್ದರು. ಆದರೆ, ಬಾಲಕನೊಬ್ಬನ ಸಾಹಸದಿಂದ 50 ಮಂದಿ ಕಾರ್ಮಿಕರ ಪ್ರಾಣ ಉಳಿದಿದೆ.

    ರಂಗಾರೆಡ್ಡಿ ಜಿಲ್ಲೆಯ ನಂದಿಗಾಮ ಮಂಡಲದಲ್ಲಿರುವ ಅಲೆನ್ ಹರ್ಬಲ್ ಕಂಪನಿಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಹೊಸದಾಗಿ ನಿರ್ಮಿಸಿರುವ ಶೆಡ್​​ನಲ್ಲಿ ವೆಲ್ಡಿಂಗ್ ಕೆಲಸ ನಡೆಯುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದೆ. ಅಪಘಾತದ ಸಮಯದಲ್ಲಿ ಕಂಪನಿಯಲ್ಲಿ ಸುಮಾರು 300 ಕಾರ್ಮಿಕರು ಜೀವ ಭಯದಿಂದ ಹೊರಗೆ ಓಡಿಹೋದರು. ಆದರೆ, ದಟ್ಟ ಹೊಗೆಯಿಂದಾಗಿ ಸುಮಾರು 50 ಮಂದಿ ಒಳಗೆ ಸಿಲುಕಿಕೊಂಡಿದ್ದಾರೆ. ಇದರಿಂದಾಗಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು.

    ಈತ ನಿಜವಾದ ಹೀರೋ...ಪ್ರಾಣವನ್ನೇ ಪಣಕ್ಕಿಟ್ಟು 50 ಜನರನ್ನು ರಕ್ಷಿಸಿದ 10ನೇ ತರಗತಿ ವಿದ್ಯಾರ್ಥಿ

    ಬೆಂಕಿ ತಗುಲಿದಾಗ ಅಲ್ಲಿದ್ದ ನಂದಿಗಾಮ ಮೂಲದ 10ನೇ ತರಗತಿ ವಿದ್ಯಾರ್ಥಿ ಸಾಯಿಚರಣ್ ಕಟ್ಟಡದ ಮೇಲೆ ಓಡಿ, ಅಗ್ನಿಶಾಮಕ ಸಿಬ್ಬಂದಿ ಒದಗಿಸಿದ ಹಗ್ಗವನ್ನು ಕಿಟಕಿಗೆ ಕಟ್ಟಿದರು. ಸಾಯಿ ಚರಣ್ ಕಟ್ಟಿದ ಹಗ್ಗದ ಸಹಾಯದಿಂದ ಅನೇಕ ಕಾರ್ಮಿಕರು ಕೆಳಗಿಳಿದರು. ಕಾರ್ಮಿಕರು ಸುರಕ್ಷಿತವಾಗಿ ಪ್ರಾಣ ಉಳಿಸಿಕೊಂಡರು. ಕಾರ್ಮಿಕರ ಜೀವ ಉಳಿಸಿದ ಸಾಯಿ ಚರಣ್ ಅವರ ಧೈರ್ಯಕ್ಕೆ ಸ್ಥಳೀಯ ಶಾಸಕ ವೀರ್ಲಪಲ್ಲಿ ಶಂಕರ್ ಮೆಚ್ಚುಗೆ ವ್ಯಕ್ತಪಡಿಸಿದರು.  ಸ್ಥಳೀಯರು ಅವರನ್ನು ನಿಜವಾದ ಹೀರೋ ಎಂದು ಕೊಂಡಾಡಿದರು.

    ಬೆಂಕಿ ಹೊತ್ತಿಕೊಂಡಾಗ ಹೊಗೆ ತಡೆದುಕೊಳ್ಳಲಾಗದೆ ಕೆಲ ಕಾರ್ಮಿಕರು ಕಟ್ಟಡದ ಮೇಲಿನಿಂದ ಕೆಳಗೆ ಜಿಗಿದಿದ್ದಾರೆ. ಬದುಕುಳಿದಿದ್ದರೂ ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ 5 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟಿವೆ. ಕೊನೆಗೆ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಬೆಂಕಿ ಅವಘಡದ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತಕ್ಕೆ ಕಾರಣಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

    ಉತ್ತರ ಪತ್ರಿಕೆಯಲ್ಲಿ ‘ಜೈ ಶ್ರೀ ರಾಮ್’ ಘೋಷಣೆಗಳು, ಕ್ರಿಕೆಟಿಗರ ಹೆಸರು.. ಆದ್ರೂ ವಿದ್ಯಾರ್ಥಿಗಳು ಪಾಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts