More

    ಉತ್ತರ ಪತ್ರಿಕೆಯಲ್ಲಿ ‘ಜೈ ಶ್ರೀ ರಾಮ್’ ಘೋಷಣೆಗಳು, ಕ್ರಿಕೆಟಿಗರ ಹೆಸರು.. ಆದ್ರೂ ವಿದ್ಯಾರ್ಥಿಗಳು ಪಾಸ್

    ಉತ್ತರಪ್ರದೇಶ: ಇತ್ತೀಚೆಗೆ ಯುಪಿ ವಿಶ್ವವಿದ್ಯಾಲಯದಲ್ಲಿ ಡಿಗ್ರಿ ಪ್ರಥಮ ವರ್ಷದ ಪರೀಕ್ಷೆಗಳು ನಡೆದವು. ಈ ಪರೀಕ್ಷೆಗಳಲ್ಲಿ ಕೆಲವರು ಉತ್ತರ ಪತ್ರಿಕೆಗಳಲ್ಲಿ ಜೈ ಶ್ರೀ ರಾಮ್ ಘೋಷಣೆಗಳೊಂದಿಗೆ ಕ್ರಿಕೆಟಿಗರ ಹೆಸರನ್ನು ಬರೆದಿದ್ದಾರೆ. ವಿಚಿತ್ರವೆಂದರೆ ಈ ವಿದ್ಯಾರ್ಥಿಗಳು ಶೇ.60 ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ.

    ತನಿಖೆಯಲ್ಲಿ ವಿವಿಯ ಇಬ್ಬರು ಪ್ರಾಧ್ಯಾಪಕರು ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಿರುವುದು ಬೆಳಕಿಗೆ ಬಂದಿದೆ. ಹಾಗಾಗಿಯೇ ಕ್ರಿಕೆಟಿಗರ ಹೆಸರು, ಶ್ರೀರಾಮ್ ಅವರ ಸ್ಲೋಗನ್ ಬರೆದರೂ ಪಾಸ್ ಆಗಿದ್ದಾರೆ. ಇದರ ಭಾಗವಾಗಿ ತನಿಖೆ ನಡೆಸಿ ಇಬ್ಬರು ಪ್ರಾಧ್ಯಾಪಕರನ್ನು ಅಮಾನತುಗೊಳಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

    ವೀರ್ ಬಹದ್ದೂರ್ ಸಿಂಗ್ ಪೂರ್ವಾಂಚಲ್ ವಿಶ್ವವಿದ್ಯಾನಿಲಯದ ಮಾಜಿ ವಿದ್ಯಾರ್ಥಿ ದಿವ್ಯಾಂಶು ಸಿಂಗ್ ಅವರು ಕಳೆದ ವರ್ಷ ಆಗಸ್ಟ್ 3 ರಂದು ಆರ್‌ಟಿಐ ಸಲ್ಲಿಸಿದಾಗ, ಫಾರ್ಮಸಿ ಕೋರ್ಸ್ ವಿದ್ಯಾರ್ಥಿಗಳ ರೋಲ್ ನಂಬರ್ ಸಂಖ್ಯೆಗಳನ್ನು ನೀಡುವ ಮೂಲಕ ಉತ್ತರ ಪತ್ರಿಕೆಗಳನ್ನು ಮರು ಮೌಲ್ಯಮಾಪನ ಮಾಡುವಂತೆ ಕೋರಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ.

    ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲು ಪ್ರಾಧ್ಯಾಪಕರಾದ ವಿನಯ್ ವರ್ಮಾ ಮತ್ತು ಆಶಿಶ್ ಗುಪ್ತಾ ಲಂಚ ಸ್ವೀಕರಿಸಿದ್ದಾರೆ ಎಂದು ದಿವ್ಯಾಂಶು ಸಿಂಗ್ ಆರೋಪಿಸಿದ್ದಾರೆ.

    ಉತ್ತರ ಪತ್ರಿಕೆಗಳಲ್ಲಿ “ಜೈ ಶ್ರೀ ರಾಮ್” ಮತ್ತು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಮುಂತಾದ ಕ್ರಿಕೆಟಿಗರ ಹೆಸರುಗಳನ್ನು ಬರೆದ ವಿದ್ಯಾರ್ಥಿಗಳು ವಿವರಿಸಲಾಗದ ರೀತಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಶ್ವವಿದ್ಯಾನಿಲಯದ ಆಡಳಿತವು ತನಿಖಾ ಸಮಿತಿಯನ್ನು ಕರೆಯಿತು. ಉತ್ತರ ಪತ್ರಿಕೆಗಳ ಬಾಹ್ಯ ಮೌಲ್ಯಮಾಪನವನ್ನು ಪರಿಶೀಲನಾ ಸಮಿತಿಯು ನಡೆಸಿತು, ವಿದ್ಯಾರ್ಥಿಗಳಿಗೆ ನೀಡಲಾಗಿದ್ದ ಅಂಕಗಳನ್ನು ವ್ಯತ್ಯಾಸಗಳನ್ನು ಬಹಿರಂಗಪಡಿಸಿತು ಎಂದು ತಿಳಿದು ಬಂದಿದೆ.

    ಪ್ರತಿಕ್ರಿಯೆ ನೀಡಿದ ಉಪಕುಲಪತಿ ವಂದನಾ ಸಿಂಗ್, ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನದಿಂದ ಅಸಲಿ ವಿಷಯ ಬಯಲಾಗಿದೆ.  ವಿದ್ಯಾರ್ಥಿಗಳಿಗೆ ಹೆಚ್ಚು ಅಂಕ ನಿಗದಿ ಮಾಡಿರುವ ಬಗ್ಗೆ ಸಮಿತಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ. ಆದರೆ ಇದೀಗ ಶ್ರೀರಾಮ್ ಘೋಷಣೆಗಳಿರುವ ಉತ್ತರ ಪತ್ರಿಕೆಗಳು ವೈರಲ್ ಆಗುತ್ತಿವೆ.

    ಟಗರು ಪುಟ್ಟಿ ಮಾನ್ವಿತಾ ಕಾಮತ್​ ಕೈ ಹಿಡಿಯಲಿರುವ ಹುಡುಗ ಹೇಗಿದ್ದಾರೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts