ನವದೆಹಲಿ: ವಿದ್ಯಾರ್ಥಿಗಳಿಗಾಗಿ ಮೀಸಲಿಟ್ಟಿದ್ದ ಹಣವನ್ನು ವಿಶ್ವಾವಿದ್ಯಾಲಯಗಳ ಖಾತೆಯಿಂದ ಅನಧಿಕೃತವಾಗಿ ವರ್ಗಾಯಿಸಿಕೊಂಡು ಬಳಿಕ ಅದನ್ನು ಫ್ರೀಜ್ ಮಾಡಿರುವ ಬಿಹಾರ ಶಿಕ್ಷಣ ಇಲಾಖೆ ಹಾಗೂ ಬ್ಯಾಂಕ್ಗಳ ಕ್ರಮ ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ABVP) ಆರ್ಬಿಐ ಗವರ್ನರ್ಗೆ ದೂರು ನೀಡಿದೆ.
ಕಳೆದ ಕೆಲ ದಿನಗಳ ಹಿಂದೆ ವಿದ್ಯಾರ್ಥಿಗಳಿಗೆ ಮೀಸಲಿಟ್ಟಿದ್ದ ಹಣವನ್ನು ವಿಶ್ವವಿದ್ಯಾಲಯಗಳ ಖಾತೆಯಿಂದ ಅನಧಿಕೃತವಾಗಿ ವರ್ಗಾಯಿಸಲಾಗಿದ್ದು, ಇದಾದ ಬಳಿಕ ಬ್ಯಾಂಕ್ ಅಕೌಂಟ್ಗಳನ್ನು ಕಾನೂನುಬಾಹಿರವಾಗಿ ಫ್ರೀಜ್ ಮಾಡಲಾಗಿದೆ. ಬ್ಯಾಂಕ್ಗಳ ಈ ನಡೆಯಿಂದ ವಿಶ್ವವಿದ್ಯಾಲಯಗಳು ಅರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಕೂಡಲೇ ಇದಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯ ಜೊತೆ ಭಾಗಿಯಾಗಿರುವ ಬ್ಯಾಂಕ್ಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆರ್ಬಿಐ ಗವರ್ನರ್ಗೆ ಸಲ್ಲಿಸಲಾಗಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಮಾತನಾಡಿರುವ ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಜ್ಞವಾಲ್ಕ್ಯ ಶುಕ್ಲಾ, ಪ್ರಕರಣದಲ್ಲಿ ಬಿಹಾರ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ 1976 ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಕಾಯದೆ 1934ರ ನಿಯಮಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಶಿಕ್ಷಣ ಇಲಾಖೆಯ ಈ ಕ್ರಮದಿಂದ ವಿಶ್ವವಿದ್ಯಾಲಯಗಳಿಗೆ ಮತ್ತಷ್ಟು ಹಿನ್ನಡೆಯಾಗುತ್ತಿದ್ದು, ನಿಯಾಮವಳಿಗಳನ್ನು ಅನುಸರಿಸಿ ತಕ್ಷಣವೇ ಕ್ರಮ ಜರುಗಿಸುವಂತೆ ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಜ್ಞವಾಲ್ಕ್ಯ ಶುಕ್ಲಾ ಆಗ್ರಹಿಸಿದ್ದಾರೆ.