More

    ಕೊಳ್ಳೇಗಾಲದ ಎಲ್ಲೆಂದರಲ್ಲಿ ಕಸ

    ಕೊಳ್ಳೇಗಾಲ: ಕೊಳ್ಳೇಗಾಲ ನಗರಸಭೆಯ ವೈಫಲ್ಯದಿಂದ ಪಟ್ಟಣದಲ್ಲಿ ಎಲ್ಲಿ ನೋಡಿದರಲ್ಲಿ ಕಸದ ರಾಶಿ ರಾರಾಜಿಸುತ್ತಿದೆ.
    ಕೇಂದ್ರ ಸರ್ಕಾರ ಸ್ವಚ್ಛ ಭಾರತ ಕಾರ್ಯಕ್ರಮ ಜಾರಿಗೆ ತಂದು ಏಳೆಂಟು ವರ್ಷಗಳೇ ಆಗಿದ್ದರೂ ಕೊಳ್ಳೇಗಾಲ ನಗರಸಭೆಯ 31 ವಾರ್ಡ್‌ಗಳಲ್ಲಿನ ಹಲವು ಕಡೆ ಕಸದ ಸಮಸ್ಯೆ ದಿನದಿಂದ ದಿನಕ್ಕೆ ಬಿಗಿಡಾಯಿಸುತ್ತಿದೆ.


    ದೇವಾಂಗ ಕಾಲನಿಯ ನಗರಸಭೆಗೆ ಸೇರಿದ ಸಿಡಿಎಸ್ ಸಮುದಾಯ ಭವನ ಎದುರೇ ಕಸದ ರಾಶಿ ಕಳೆದ ಐದಾರು ದಿನಗಳಿಂದ ಬಿದ್ದರೂ ತೆರವಾಗಿಲ್ಲ.
    ಅಲ್ಲದೆ ಕೆಲ ಸ್ವಚ್ಛತಾ ವಾಹನಗಳು ಸಿಡಿಎಸ್ ಭವನದ ಆವರಣದಲ್ಲೇ ಪಾರ್ಕಿಂಗ್ ಮಾಡಲಾಗುತ್ತದೆ. ಬೆಳಗ್ಗೆ ಇಲ್ಲಿಂದಲೇ ವಾರ್ಡ್‌ಗಳಿಗೆ ಕಸ ತೆರವು ಮಾಡುವ ಕಾರ್ಯ ಪ್ರಾರಂಭವಾಗುತ್ತದೆ. ಆದರೆ ಇಲ್ಲಿನ ಸ್ವಚ್ಛತೆಯಂತೂ ಮರೀಚಿಕೆಯಾಗಿದೆ. ನಗರಸಭೆಗೆ ಸೇರಿದ ಭವನ ಮುಂಭಾಗವೇ ಈ ಪರಿಸ್ಥಿತಿ ಇರುವುದು ಅಧಿಕಾರಿಗಳ ಇಚ್ಛಾಶಕ್ತಿ ತೋರಿಸುತ್ತದೆ.
    ವಿವಿಧೆಡೆ ತ್ಯಾಜ್ಯ: ಈದ್ಗಾ ಮೊಹಲ್ಲಾ ರಸ್ತೆಬದಿ ಕಸ ಸಂಗ್ರಹಣೆ ಮಾಡುವ ತೊಟ್ಟಿಯಾಗಿದೆ. ಗೀತಾ ಪ್ರೈಮರಿ ಶಾಲೆಯ ರಸ್ತೆಯ ಓಂ ಶಕ್ತಿ ದೇವಾಲಯ ಸುತ್ತುಗೋಡೆ ಪಕ್ಕದಲ್ಲಿ ಕಸ ಸುರಿಯುವುದರಿಂದ ದುರ್ವಾಸನೆಯಿಂದ ರಸ್ತೆಯಲ್ಲಿ ಸಂಚಾರ ಮಾಡುವುದು ಕಷ್ಟವಾಗಿದೆ. ಅಲ್ಲದೆ ಅಣಗಳ್ಳಿ ಬಡಾವಣೆಯ ಮುಖ್ಯರಸ್ತೆ ತ್ಯಾಜ್ಯ ಸಂಗ್ರಹ ತಾಣವಾಗಿದೆ. ಪಟ್ಟಣಕ್ಕೆ ಪ್ರವೇಶಿಸುವ ಮುಳ್ಳೂರು ರಸ್ತೆ ಕಸ ಸುರಿಯುವ ಕೇಂದ್ರ ಮಾರ್ಪಟ್ಟಿದೆ. ಆದರೆ ನಗರಸಭೆ ಕ್ರಮ ವಹಿಸಲು ಸಂಪೂರ್ಣ ವಿಫಲವಾಗಿದೆ.


    ಮನೆಮನೆ ಕಸ ಸಂಗ್ರಹ ವ್ಯವಸ್ಥೆ ಇದ್ದರೂ ರಸ್ತೆಗಳಲ್ಲಿ ಕಸ ಸುರಿಯುತ್ತಿರುವುದನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಇನ್ನಾದರೂ ಪಟ್ಟಣದ ಸ್ವಚ್ಛತೆಗೆ ನಗರಸಭೆ ಆದ್ಯತೆ ನೀಡಬೇಕೆಂಬುದು ಸಾರ್ವಜನಿಕರ ಒತ್ತಾಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts