More

    ಸೋಮವಾರದಂದು ಷೇರು ಮಾರುಕಟ್ಟೆಯಲ್ಲಿ ನಡೆಯುವುದಿಲ್ಲ ವಹಿವಾಟು: ಮೇ 20ರಂದು ರಜೆ ಘೋಷಿಸಿರುವುದೇಕೆ?

    ಮುಂಬೈ: ಸೋಮವಾರ, ಮೇ 20 ರಂದು ಭಾರತೀಯ ಷೇರು ಪೇಟೆಯಲ್ಲಿ ಯಾವುದೇ ವಹಿವಾಟು ನಡೆಯುವುದಿಲ್ಲ. ಭಾರತದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ಲೋಕಸಭೆ ಚುನಾವಣೆಗೆ ಮತದಾನ ನಡೆಯುವ ಕಾರಣ ಸೋಮವಾರ ಷೇರು ವಿನಿಮಯ ಕೇಂದ್ರಗಳಾದ ಬಿಎಸ್​ಇ ಮತ್ತು ಎನ್​ಎಸ್​ಇಗೆ ರಜೆ ಇರುತ್ತದೆ.

    ಲೋಕಸಭೆ ಚುನಾವಣೆಯ ಐದನೇ ಹಂತದಲ್ಲಿ ಮುಂಬೈ ಉತ್ತರ, ಮುಂಬೈ ವಾಯುವ್ಯ, ಮುಂಬೈ ಈಶಾನ್ಯ, ಮುಂಬೈ ಉತ್ತರ-ಮಧ್ಯ, ಮುಂಬೈ ದಕ್ಷಿಣ-ಮಧ್ಯ ಮತ್ತು ಮುಂಬೈ ದಕ್ಷಿಣ ಸೇರಿದಂತೆ ಒಟ್ಟು 13 ಸಂಸದೀಯ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಹೀಗಾಗಿ, ಮೇ 20 ರಂದು ಸ್ಟಾಕ್ ಮಾರುಕಟ್ಟೆಗೆ ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್ 1881 ರ ಸೆಕ್ಷನ್ 25 ರ ಪ್ರಕಾರ ರಜೆ ಘೋಷಿಸಲಾಗಿದೆ. ಇದು ಚುನಾವಣೆ ಪ್ರಕ್ರಿಯೆಯಲ್ಲಿ ನಾಗರಿಕರ ಭಾಗವಹಿಸುವಿಕೆಯ ಮಹತ್ವವನ್ನು ಸೂಚಿಸುತ್ತದೆ. ಈ ಸಾರ್ವತ್ರಿಕ ಚುನಾವಣೆ ರಜೆಯ ನಂತರ, ಮುಂದಿನ ಸ್ಟಾಕ್ ಮಾರುಕಟ್ಟೆ ರಜೆಯು ಜೂನ್ 17ರಂದು ಬಕ್ರೀದ್ ನಿಮಿತ್ತ ಇರುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts