More

  ತ್ರೈಮಾಸಿಕ ಲಾಭದಲ್ಲಿ 64% ಹೆಚ್ಚಳ; ಈಗ 250 ಕೋಟಿ ರೂ. ಆರ್ಡರ್: ಮಿನಿ ರತ್ನ ಕಂಪನಿ ಷೇರುಗಳ ಬೆಲೆ ಗಗನಕ್ಕೆ

  ಮುಂಬೈ: ಮಿನಿ ರತ್ನ ಕಂಪನಿ ಬಿಇಎಂಎಲ್ ಲಿಮಿಟೆಡ್ ಷೇರುಗಳಲ್ಲಿ ಭಾರಿ ಏರಿಕೆಯಾಗಿದೆ. ಬಿಇಎಂಎಲ್ ಲಿಮಿಟೆಡ್‌ನ ಷೇರುಗಳ ಬೆಲೆ ಶುಕ್ರವಾರ ಶೇಕಡಾ 8 ಕ್ಕಿಂತ ಹೆಚ್ಚು ಏರಿಕೆ ಕಂಡು 4036 ರೂಪಾಯಿಗಳಿಗೆ ತಲುಪಿದೆ. ಕಂಪನಿಯ ಷೇರುಗಳ ಬೆಲೆ ಈಗ 52 ವಾರಗಳ ಗರಿಷ್ಠ ಮಟ್ಟಕ್ಕೆ ಸಮೀಪಿಸಿದೆ. ಬಿಇಎಂಎಲ್ ಲಿಮಿಟೆಡ್‌ನ ಷೇರುಗಳಲ್ಲಿ ಈ ಏರಿಕೆಗೆ ಕಾರಣವಾಗಿರುವುದು ಅದಕ್ಕೆ ಸಿಕ್ಕಿರುವ ದೊಡ್ಡ ಮೊತ್ತದ ಕಾಮಗಾರಿ ಆರ್ಡರ್.

  ಸ್ಮಾಲ್‌ಕ್ಯಾಪ್ ಕಂಪನಿಯಾಗಿರುವ ಬಿಇಎಂಎಲ್ ಲಿಮಿಟೆಡ್‌ ಷೇರುಗಳ 52 ವಾರಗಳ ಗರಿಷ್ಠ ಬೆಲೆ 4139.40 ರೂ. ಇದೆ. ಈ ಷೇರುಗಳ 52 ವಾರಗಳ ಕನಿಷ್ಠ ಬೆಲೆ 1400 ರೂ. ಇದೆ.

  ಈಗ ರೂ. 250 ಕೋಟಿ ಮೌಲ್ಯದ ಆರ್ಡರ್ ಪಡೆದಿರುವುದಾಗಿ ಬಿಇಎಂಎಲ್ ಲಿಮಿಟೆಡ್ ಹೇಳಿದೆ. ನಾರ್ದರ್ನ್​ ಕೋಲ್ ಫೀಲ್ಡ್ಸ್‌ನಿಂದ ಡಂಪ್ ಟ್ರಕ್‌ಗಳಿಗೆ ಈ ಆರ್ಡರ್​ ಬಂದಿದೆ ಎಂದು ಕಂಪನಿಯು ಷೇರು ಮಾರುಕಟ್ಟೆಗೆ ತಿಳಿಸಿದೆ. ಮಾರ್ಚ್ 2024 ರ ತ್ರೈಮಾಸಿಕದಲ್ಲಿ ಕಂಪನಿಯ ಆದಾಯವು ಶೇಕಡಾ 9 ರಷ್ಟು ಏರಿಕೆಯಾಗಿದ್ದು, 1513 ಕೋಟಿ ರೂ. ಮುಟ್ಟಿದೆ. ಇದೇ ಸಮಯದಲ್ಲಿ, ನಿವ್ವಳ ಲಾಭವು ಜನವರಿ-ಮಾರ್ಚ್ 2024 ತ್ರೈಮಾಸಿಕದಲ್ಲಿ 64% ರಷ್ಟು ಏರಿಕೆಯಾಗಿ 257 ಕೋಟಿ ರೂ. ಮುಟ್ಟಿದೆ.

  ಮಿನಿ ರತ್ನ ಕಂಪನಿಯಾಗಿರುವ ಬಿಇಎಂಎಲ್ ಲಿಮಿಟೆಡ್‌ನ ಷೇರುಗಳ ಬೆಲೆ ಕಳೆದ ಒಂದು ವರ್ಷದಲ್ಲಿ ವೇಗವಾಗಿ ಹೆಚ್ಚಿದೆ. ಕಳೆದ ಒಂದು ವರ್ಷದಲ್ಲಿ 183% ಕ್ಕಿಂತ ಹೆಚ್ಚು ಏರಿಕೆಯಾಗಿದೆ. 17 ಮೇ 2023 ರಂದು ಕಂಪನಿಯ ಷೇರುಗಳ ಬೆಲೆ 1421 ರೂ. ಇತ್ತು. ಕಳೆದ 6 ತಿಂಗಳುಗಳಲ್ಲಿ, ಈ ಷೇರುಗಳ ಬೆಲೆ ಶೇಕಡಾ 73 ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ಈ ಕಂಪನಿಯ ಷೇರುಗಳ ಬೆಲೆ 17 ನವೆಂಬರ್ 2023 ರಂದು ರೂ 2306.75 ಇತ್ತು. ಈ ವರ್ಷ ಇಲ್ಲಿಯವರೆಗೆ, ಬಿಇಎಂಎಲ್ ಲಿಮಿಟೆಡ್‌ನ ಷೇರುಗಳ ಬೆಲೆ 43% ರಷ್ಟು ಏರಿಕೆ ಕಂಡಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts