More

    1 ಷೇರಿಗೆ 3 ಉಚಿತ ಷೇರುಗಳ ಉಡುಗೊರೆ; 2170% ಹೆಚ್ಚಳ ಕಂಡ ಸ್ಟಾಕ್​ನಿಂದ ಹೂಡಿಕೆದಾರರಿಗೆ ಮತ್ತೆ ಭರ್ಜರಿ ಲಾಭ

    ಮುಂಬೈ: ಪವನ ವಿದ್ಯುತ್​ ವ್ಯವಹಾರದಲ್ಲಿ ತೊಡಗಿರುವ ಐನಾಕ್ಸ್ ವಿಂಡ್ ಕಂಪನಿಯ ಷೇರುಗಳು ಕೇವಲ ಒಂದೇ ವರ್ಷದಲ್ಲಿ ಹೂಡಿಕೆದಾರರನ್ನು ಶ್ರೀಮಂತರನ್ನಾಗಿಸಿದೆ. ಕಳೆದ ಒಂದು ವರ್ಷದಲ್ಲಿ ಐನಾಕ್ಸ್ ವಿಂಡ್ ಷೇರುಗಳ ಬೆಲೆ 417% ಕ್ಕಿಂತ ಹೆಚ್ಚು ಜಿಗಿದಿವೆ. ಕಳೆದ ಒಂದು ವರ್ಷದಲ್ಲಿ ಕಂಪನಿಯ ಷೇರುಗಳ ಬೆಲೆ 117.60 ರೂ.ನಿಂದ 600 ರೂ.ಗೆ ಏರಿದೆ. ಶುಕ್ರವಾರ, ಮೇ 17, 2024 ರಂದು ಐನಾಕ್ಸ್ ವಿಂಡ್‌ನ ಷೇರುಗಳ ಬೆಲೆ 608.20 ರೂ. ಆಗಿದೆ.

    ಈ ಸ್ಮಾಲ್‌ಕ್ಯಾಪ್ ಕಂಪನಿ ಈಗ ತನ್ನ ಹೂಡಿಕೆದಾರರಿಗೆ ದೊಡ್ಡ ಉಡುಗೊರೆಯನ್ನು ಘೋಷಿಸಿದೆ.

    ಐನಾಕ್ಸ್ ವಿಂಡ್ ಇತ್ತೀಚೆಗೆ ತನ್ನ ಷೇರುದಾರರಿಗೆ ಬೋನಸ್ ಷೇರುಗಳನ್ನು ನೀಡುವುದಾಗಿ ಘೋಷಿಸಿದೆ. ಕಂಪನಿಯು 3:1 ಅನುಪಾತದಲ್ಲಿ ಬೋನಸ್ ಷೇರುಗಳನ್ನು ನೀಡುತ್ತಿದೆ. ಅಂದರೆ, ಕಂಪನಿಯು ಹೂಡಿಕೆದಾರರಿಗೆ ಪ್ರತಿ ಷೇರಿಗೆ 3 ಬೋನಸ್ ಷೇರುಗಳನ್ನು ಉಚಿತವಾಗಿ ನೀಡುತ್ತದೆ. ಕಂಪನಿಯು ಬೋನಸ್ ಷೇರುಗಳ ದಾಖಲೆ ದಿನಾಂಕವನ್ನು 25 ಮೇ 2024 ಕ್ಕೆ ಪರಿಷ್ಕರಿಸಿದೆ. ಕಂಪನಿಯು ಈ ಹಿಂದೆ ಬೋನಸ್ ಷೇರುಗಳ ದಾಖಲೆ ದಿನಾಂಕವನ್ನು 18 ಮೇ 2024 ಎಂದು ನಿಗದಿಪಡಿಸಿತ್ತು.

    ಕಳೆದ 4 ವರ್ಷಗಳಲ್ಲಿ ಐನಾಕ್ಸ್ ವಿಂಡ್ ಷೇರುಗಳ ಬೆಲೆ 2170% ಕ್ಕಿಂತ ಹೆಚ್ಚು ಏರಿಕೆಯಾಗಿದೆ. ವಿಂಡ್ ಎನರ್ಜಿ ಕಂಪನಿಯ ಷೇರುಗಳ ಬೆಲೆ 15 ಮೇ 2020 ರಂದು 26.90 ರೂ. ಇತ್ತು. ಕಳೆದ 2 ವರ್ಷಗಳಲ್ಲಿ ಕಂಪನಿಯ ಷೇರುಗಳ ಬೆಲೆ 550% ಹೆಚ್ಚಾಗಿದೆ. ಈ ಅವಧಿಯಲ್ಲಿ ಕಂಪನಿಯ ಷೇರುಗಳ ಬೆಲೆ ರೂ. 93ರಿಂದ ರೂ. 600ಕ್ಕೆ ಏರಿಕೆಯಾಗಿದೆ. ಕಳೆದ 6 ತಿಂಗಳಲ್ಲಿ ಈ ಷೇರುಗಳ ಬೆಲೆ ಶೇ. 141ರಷ್ಟು ಏರಿಕೆ ಕಂಡಿದೆ. ಈ ಕಂಪನಿಯ ಷೇರುಗಳ ಬೆಲೆ ನವೆಂಬರ್ 17, 2023 ರಂದು 251.85 ರೂ. ಇತ್ತು. ಈ ಷೇರುಗಳ 52 ವಾರಗಳ ಗರಿಷ್ಠ ಬೆಲೆ 663 ರೂ. ಹಾಗೂ ಕನಿಷ್ಠ ಬೆಲೆ 111.10 ರೂ. ಇದೆ.

    ಎಲೆಕ್ಷನ್​ ರೆಸಿಸ್ಟಂಟ್​ ಸ್ಟಾಕ್​ಗಳು: ಚುನಾವಣೆ ಸಂದರ್ಭದಲ್ಲಿ ಈ ಷೇರುಗಳು ಹೆಚ್ಚು ಸುರಕ್ಷಿತ?

    ಪ್ರಸ್ತುತ ಲೋಕಸಭೆ ಚುನಾವಣೆಯ ಮೊದಲ 4 ಹಂತಗಳಲ್ಲಿ 66.95% ಮತದಾನ: 2019ರ ಚುನಾವಣೆಗೆ ಹೋಲಿಸಿದರೆ ಇದು ಹೆಚ್ಚೋ ಅಥವಾ ಕಡಿಮೆಯೋ?

    ಷೇರುಪೇಟೆಯಲ್ಲಿ ಮತ್ತೆ ಗೂಳಿಯ ಗುಟುರು: ಸ್ಮಾಲ್, ಮಿಡ್ ಕ್ಯಾಪ್ ಸೂಚ್ಯಂಕಗಳಲ್ಲಿ ಭಾರೀ ಹೆಚ್ಚಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts