More

    ಎಸ್​​ಆರ್​ಎಚ್​ ವಿರುದ್ಧ ಕೊಹ್ಲಿ ನಿಧಾನಗತಿಯ ಆಟ; ಮಾಜಿ ನಾಯಕ ಹೇಳಿದ್ದಿಷ್ಟು

    ಹೈದರಾಬಾದ್: ಏಪ್ರಿಲ್​ 25ರಂದು ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ನಡೆದ 41ನೇ ಐಪಿಎಲ್​ ಪಂದ್ಯದಲ್ಲಿ ಫಾಫ್​ ಡು ಪ್ಲೆಸಿಸ್​ ನಾಯಕತ್ವದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು 35 ರನ್​ಗಳ ಭರ್ಜರಿ ಜಯ ಕಂಡಿದ್ದು, ಸತತ ಸೋಲುಗಳ ಬಳಿಕ ಗೆಲುವಿನ ಹಳಿಗೆ ಮರಳಿದೆ. ಇತ್ತ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಅವರ ನಿಧಾನಗತಿಯ ಆಟಕ್ಕೆ ಹಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ನೀಡಿದ ವಿವರಣೆ ಎಲ್ಲೆಡೆ ವೈರಲ್​ ಆಗಿದೆ.

    ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ವಿರಾಟ್ ಕೊಹ್ಲಿ (51 ರನ್, 43 ಎಸೆತ, 4 ಬೌಂಡರಿ, 1 ಸಿಕ್ಸರ್), ರಜತ್ ಪಾಟೀದಾರ್ (50 ರನ್, 20 ಎಸೆತ, 2 ಬೌಂಡರಿ, 5 ಸಿಕ್ಸರ್) ಅರ್ಧಶತಕ ಹಾಗೂ ಕ್ಯಾಮರಾನ್ ಗ್ರೀನ್ (37* ರನ್, 20 ಎಸೆತ, 5 ಬೌಂಡರಿ) ಬಿರುಸಿನ ಬ್ಯಾಟಿಂಗ್ ನೆರವಿನಿಂದ 7 ವಿಕೆಟ್‌ಗೆ 206 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಹಲವರು ರಜತ್​ ಪಾಟೀದಾರ್​ ಬಿರುಸಿನ ಆಟವನ್ನು ಹಾಡಿ ಹೊಗಳಿದರೆ, ಮಾಜಿ ನಾಯಕ ವಿರಾಟ್​ ಕೊಹ್ಲಿ ಅವರ ನಿಧಾನಗತಿಯ ಬ್ಯಾಟಿಂಗ್​ಗೆ ಕಿಡಿಕಾರಿದ್ದಾರೆ.

    Aaron Kohli

    ಇದನ್ನೂ ಓದಿ: ಎಸ್​ಆರ್​ಎಚ್​ ವಿರುದ್ಧ 35 ರನ್​ಗಳ ಜಯ; ಆರ್​ಸಿಬಿ ನಾಯಕ ಫಾಫ್​ ಹೇಳಿದ್ದಿಷ್ಟು

    ಆರಂಭದಲ್ಲಿ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ವಿರಾಟ್​ ಕೊಹ್ಲಿ 18 ಎಸೆತಗಳನ್ನು ಎದುರಿಸಿ 32ರನ್​ಗಳನ್ನು ಕಲೆಹಾಕಿದ್ದರು. ಪವರ್​ಪ್ಲೇ ಬಳಿಕ 25 ಎಸೆತಗಳನ್ನು ಎದುರಿಸಿ 19 ಕಲೆಹಾಕುವ ಮೂಲಕ ತಮ್ಮ ಅರ್ಧಶತಕವನ್ನು ಪೂರೈಸಿಕೊಂಡರು. ವಿರಾಟ್​ ಕೊಹ್ಲಿ ನಿಧಾನಗತಿಯ ಬ್ಯಾಟಿಂಗ್​ಅನ್ನು ಸುನೀಲ್​ ಗಾವಸ್ಕರ್​​ ಸೇರಿದಂತೆ ಹಲವರು ಟೀಕಿಸಿದ್ದು, ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಆರನ್​ ಫಿಂಚ್ ಕೊಹ್ಲಿ ಬೆನ್ನಿಗೆ ನಿಂತಿದ್ದಾರೆ. ಅವರ ನಿಧಾನಗತಿಯ ಆಟಕ್ಕೆ ಕಾರಣ ಏನು ಎಂಬುದನ್ನು ವಿವರಿಸಿದ್ದಾರೆ.

    ಆರಂಭದಲ್ಲಿ ಕೊಹ್ಲಿ ಉತ್ತಮವಾಗಿ ಆಡಿದ್ದರು. ಆದರೆ, ಪವರ್​ಪ್ಲೇ ಬಳಿಕ ಅವರು 25 ಬಾಲ್​ಗಳಲ್ಲಿ 19 ರನ್ ಸಿಡಿಸಿದರು. ಎದುರಿದ್ದ ರಜತ್ ಪಾಟೀದಾರ್​ ಬಿರುಸಿನ ಆಟವಾಡುತ್ತಿದ್ದರು ಎಂಬುದನ್ನು ನಾವು ನೋಡಬೇಕಿದೆ. ಕೊಹ್ಲಿ ರನ್ ನೋಡಿ ನೀವು ಕಡಿಮೆ ಆಯಿತು ಎನ್ನಬಹುದು. ಆದರೆ, ರಜತ್​ ಹಾಗೂ ಕೊಹ್ಲಿ ಬಿಲ್ಡ್​​ ಮಾಡಿದ ಪಾರ್ಟ್​ನರ್​ಶಿಪ್​ ನೋಡಿದಾಗ ನಿಜಕ್ಕೂ ಇದು ಕೆಲಸ ಮಾಡಿದೆ ಮತ್ತು ತಂಡದ ಸ್ಕೋರ್​ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕೊಹ್ಲಿ ಪಾಟೀದಾರ್​ಗೆ ಸ್ಟ್ರೈಕ್​ ಬಿಟ್ಟುಕೊಡುವ ಮೂಲಕ ಒಳ್ಳೆಯ ಕೆಲಸ ಮಾಡಿದ್ಧಾರೆ ಎಂದು ಹೇಳುವ ಮೂಲಕ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಆರನ್​ ಫಿಂಚ್ ವಿರಾಟ್​​ನ ನಿಧಾನಗತಿಯ ಬ್ಯಾಟಿಂಗ್​ಅನ್ನು ಸಮರ್ಥಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts