More

    ಮತ ಚಲಾಯಿಸಲು ಗ್ರಾಮಸ್ಥರ ನಿರಾಸಕ್ತಿ

    ಕೋಲಾರ: ತಾಲೂಕಿನ ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಚನ್ನಪ್ಪನಹಳ್ಳಿ ಮತಗಟ್ಟೆಯನ್ನು ವೇಮಗಲ್ ಮತಗಟ್ಟೆಗೆ ಸ್ಥಳಾಂತರಿಸಲಾಗಿದ್ದು, ಗ್ರಾಮಸ್ಥರು ಮತ ಹಾಕಿದರೋ ಇಲ್ಲವೊ ಎಂಬುದು ವಿಚಾರಿಸುವವರಿಲ್ಲದಂತಾಗಿತ್ತು.

    ಪ್ರತಿ ಚುನಾವಣೆಗೂ ಚನ್ನಪ್ಪನಹಳ್ಳಿಯಲ್ಲೇ ಮತಗಟ್ಟೆ ಸ್ಥಾಪನೆ ಮಾಡಲಾಗುತ್ತಿತ್ತು. 300ಕ್ಕೂ ಹೆಚ್ಚು ಮತದಾರರಿದ್ದು, ಗ್ರಾಮಸ್ಥರ ಅಭಿಪ್ರಾಯವನ್ನು ಸಂಗ್ರಹಿಸದೆ ಜಿಲ್ಲಾಡಳಿತ ಏಕಾಏಕಿಯಾಗಿ ಸ್ಥಳಾಂತರ ಮಾಡಿದ್ದಾರೆ. ಬಿಸಿಲಿನ ತಾಪಮಾನ ಹೆಚ್ಚಾಗಿದ್ದ ಕಾರಣ ಗ್ರಾಮಸ್ಥರು ಹೆಚ್ಚಾಗಿ ಮತ ಚಲಾಯಿಸಲಿಲ್ಲ. ಮತ ಚಲಾಯಿಸಲು ಹೋದವರು ತಲೆಯ ಮೇಲೆ ಬಟ್ಟೆ ಹಾಕಿಕೊಂಡು ತೆರಳಬೇಕಾಯಿತು.

    ಈ ಮೊದಲು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮತಗಟ್ಟೆ ವ್ಯವಸ್ಥೆ ಮಾಡುತ್ತಿದ್ದರು. ಆಗ ನಮಗೆ ಅನುಕೂಲವಾಗಿತ್ತು. ಆದರೆ ಈಗ ನಮ್ಮೂರಿನಿಂದ ವೇಮಗಲ್ ಮತಗಟ್ಟೆಗೆ ಮತ ಚಲಾಯಿಸಲು ಸುಮಾರು ೩ರಿಂದ ೪ ಕಿಮೀ ಸುಡುವ ಬಿಸಿಲಿನಲ್ಲಿ ಕಾಲ್ನಡಿಗೆಯಲ್ಲಿ ಬಂದು ಮತ ಚಲಾಯಿಸಬೇಕಿದೆ. ಯಾವುದೇ ವಾಹನ ಸೌಲಭ್ಯವು ಇಲ್ಲ, ದ್ವಿಚಕ್ರ ವಾಹನಗಳು ಇರುವವರು ಹೋಗಿ ಬರುತ್ತಾರೆ ಇಲ್ಲದೆ ಇರುವವರು ಹೇಗೆ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

    ವÊದ್ಧರ ಪರಿಸ್ಥಿತಿ ಹೇಗೆ, ಸಂಬಂಧ ಅಽಕಾರಿಗಳು ಏನನ್ನೂ ಅರಿಯದೆ ಈ ರೀತಿ ಮತ ಗಟ್ಟೆಯನ್ನು ಬದಲಾವಣೆ ಮಾಡುವುದು ಸರಿಯಲ್ಲ. ಈ ಹಿಂದೆ ನಮ್ಮ ಗ್ರಾಮದಲ್ಲಿ ಶೇ.90 ಮತದಾನ ನಡೆಯುತ್ತಿತ್ತು. ಈ ಬಾರಿ ಎಷ್ಟು ಜನ ಮತ ಹಾಕುತ್ತಾರೋ ಗೊತ್ತಿಲ್ಲ. ಬಿಸಿಲಿನಿಂದ ಮನೆಬಿಟ್ಟು ಆಚೆ ಬರುವುದೇ ಕಷ್ಟಕರವಾಗಿದೆ ಎಂದು ಗ್ರಾಮಸ್ಥರು ಬೇಸರ ಹೊರಹಾಕಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts