ಟಗರು ಪುಟ್ಟಿ ಮಾನ್ವಿತಾ ಕಾಮತ್​ ಕೈ ಹಿಡಿಯಲಿರುವ ಹುಡುಗ ಹೇಗಿದ್ದಾರೆ ಗೊತ್ತಾ?

ManvitaKamath
Published on

ಬೆಂಗಳೂರು: ಸ್ಯಾಂಡಲ್​​ವುಡ್​ ನಟಿ ಮಾನ್ವಿತಾ ಕಾಮತ್​ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಕುರಿತಾಗಿ ನಟಿ ಕೆಲವು ದಿನಗಳ ಹಿಂದೆ ಸೋಶಿಯಲ್​​ ಮೀಡಿಯಾ ಮೂಲಕವಾಗಿ ತಾವು ಮದುವೆ ಆಗುತ್ತಿರುವುದಾಗಿ ತಿಳಿಸಿದ್ದರು. ಟಗರು ಪುಟ್ಟಿ ಕೈ ಹಿಡಿಯುವ ವರ ಹೇಗೆ ಇದ್ದಾನೆ ಎನ್ನುವ ಪ್ರಶ್ನೆಗೆ ಇಂದು ಉತ್ತರ ಸಿಕ್ಕಿದೆ.

ಮಾನ್ವಿತಾ ಕಾಮತ್ ಮೇ 1ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮ್ಯೂಸಿಕ್ ಡೈರೆಕ್ಟರ್ ಅರುಣ್ ಕುಮಾರ್ ಕೈ ಹಿಡಿಯಲು ರೆಡಿಯಾಗಿದ್ದಾರೆ. ಮದುವೆಯಾಗುವ ಹುಡುಗನ ಫೋಟೋ ಕೂಡ ನಟಿ ರಿವೀಲ್ ಮಾಡಿದ್ದಾರೆ.

ಅಶ್ವಿನಿ ಪುನೀತ್‌ರಾಜ್‌ಕುಮಾರ್‌ಗೆ ನಟಿ ಆಮಂತ್ರಣ ನೀಡಿದ್ದಾರೆ. ಈ ವೇಳೆ, ಮದುವೆಯಾಗುವ ಹುಡುಗ ಅರುಣ್ ಕುಮಾರ್ ಕೂಡ ಹಾಜರಿ ಹಾಕಿದ್ದಾರೆ. ಈ ಮೂಲಕ ನಟಿ ಹುಡುಗನ ಮುಖ ರಿವೀಲ್ ಮಾಡಿದ್ದಾರೆ.

ಚಿಕ್ಕಮಗಳೂರಿನ ಕಳಸ ಮನೆಯಲ್ಲಿ ಏ.22ರಂದು ನಾಂದಿ ಪೂಜೆ ಮಾಡುವ ಮೂಲಕ ಮದುವೆಯ ತಯಾರಿ ಶುರುವಾಗಿದೆ. ಮಾನ್ವಿತಾ ಮತ್ತು ಅರುಣ್ ಅವರದ್ದು ಅರೇಂಜ್ ಮ್ಯಾರೇಜ್ ಆಗಿದ್ದು, ಅಮ್ಮ ನೋಡಿದ ವರನನ್ನೇ ಮಾನ್ವಿತಾ ಮದುವೆಯಾಗುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net