More

    ಬಂಗಾರ ಬಣ್ಣದ ಹಾವು; ಅಪರೂಪದ ಗೋಲ್ಡನ್ ಸ್ನೇಕ್ ನೀವೂ ನೋಡಿ..

    ನವದೆಹಲಿ:  ಭೂಮಿಯ ಮೇಲೆ ಮೂರು ಸಾವಿರಕ್ಕೂ ಹೆಚ್ಚು ಜಾತಿಯ ಹಾವುಗಳಿವೆ ಎಂದು ಸಂಶೋಧಕರು ಅಂದಾಜಿಸಿದ್ದಾರೆ. ಇವುಗಳಲ್ಲಿ ಕೆಲವು ಹೆಚ್ಚು ವಿಷಕಾರಿ, ಹಾಗೂ ನೋಡಲು ವಿಭಿನ್ನವಾಗಿವೆ. ಕೆಲವು ದಿನಗಳ ಹಿಂದೆ ಕೆಂಪು, ಬಿಳಿ ಬಣ್ಣದ ಹಾವು  ಕಾಣಿಸಿಕೊಂಡಿರುವ ವಿಡಿಯೋ ನೋಡಿದ್ದೇವೆ. ಈ ಪಟ್ಟಿಗೆ ಅಪರೂಪದ ಚಿನ್ನದ ಬಣ್ಣದ ಹಾವಿನ ವಿಡಿಯೋ ಕೂಡಾ ಸೇರ್ಪಡೆಯಾಗಿದೆ.

    ವಿಡಿಯೋದಲ್ಲಿ ಗೋಲ್ಡನ್ ಕಲರ್‌ನಲ್ಲಿ ಆರು ಅಡಿಯ ಹಾವೊಂದು ರಸ್ತೆ ದಾಟಿದೆ. ಹಾವನ್ನು ನೋಡಿದ ಸ್ಥಳೀಯರು ಅಚ್ಚರಿಗೊಂಡಿದ್ದು, ಕೂಡಲೇ ಅದನ್ನು ವಿಡಿಯೋ ಮಾಡಿಕೊಂಡಿದ್ದಾರೆ. ಅವರು ನೋಡುತ್ತಿರುವಾಗಲೇ ಹಾವು ರಸ್ತೆಯ ಇನ್ನೊಂದು ಬದಿಯ ಹುಲ್ಲಿಗೆ ಹೋಗಿದೆ. ಈ  ವಿಡಿಯೋ ಕ್ಲಿಪ್‌ಗಳನ್ನು ಟ್ವೀಟ್ ಮಾಡಲಾಗಿದೆ.

    ಇದು ನಿಜವಾದ ವಿಡಿಯೋವೋ ಅಥವಾ ನಕಲಿ ವಿಡಿಯೋವೋ ಗೊತ್ತಿಲ್ಲ. ಹಾವಿನ ಜಾತಿ ತಿಳಿದಿಲ್ಲ.  ಈ ಟ್ವೀಟ್ ಅದರ ಬಣ್ಣದಿಂದಾಗಿ ವೈರಲ್ ಆಗಿದೆ. ಇದಕ್ಕೆ ಸಾಕಷ್ಟು ಮಂದಿ ಕಾಮೆಂಟ್ ಮಾಡುತ್ತಿದ್ದಾರೆ.

    ಇದು ರಿಯಾಲಾ ಫೆಕಾ?,ಬೀದಿ ದೀಪದಿಂದಾಗಿ ಅದು ಹೊಳೆಯುತ್ತಿದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ಇದು ಚಿನ್ನದ ಹಾವೇ ಅಥವಾ ಹೊಳೆಯುವ ಹಾವೇ ಎಂದು ಕೇಳಿದ್ದಾರೆ.

    ಹಾವುಗಳನ್ನು ಕಂಡರೆ ಹಲವರು ಹೆದರಿ ಓಡಿ ಹೋಗುತ್ತಾರೆ. ಯಾಕೆಂದರೆ.. ಹಾವು ವಿಷಕಾರಿ.. ಕಚ್ಚಿದರೆ.. ಮಾರಣಾಂತಿಕವಾಗುತ್ತದೆ. ಸಕಾಲದಲ್ಲಿ ಚಿಕಿತ್ಸೆ ದೊರೆಯದಿದ್ದರೆ ಪ್ರಾಣಹಾನಿಯಾಗುತ್ತದೆ. ಈ ರೀತಿಯ ಬಿಳಿ, ಕೆಂಪು ಹಾಗೂ ಬಂಗಾರ ಬಣ್ಣದ ನಾಗರಹಾವುಗಳು ಅಪರೂಪಕ್ಕೆ ಕಾಣಸಿಗುತ್ತವೆ. ಅವು ಹೆಚ್ಚಾಗಿ ಅರಣ್ಯ ಪ್ರದೇಶಗಳಲ್ಲಿ ಕಂಡುಬರುತ್ತವೆ.

    ಕೆಂಪು ಬಣ್ಣದ ಬುಸ್​..ಬುಸ್ ನಾಗರಹಾವು; ಅಬ್ಬಬ್ಬಾ ನಾಗಪ್ಪ ಇದು ವಿಚಿತ್ರ ಎಂದ್ರು ನೆಟ್ಟಿಗರು

    ಬಿಳಿ ನಾಗರಹಾವು ಪತ್ತೆ!; ನಿನ್ನೆ ಕೆಂಪು, ಇವತ್ತು ಬಿಳಿ ಹಾವು..ಬುಸ್​..ಬುಸ್ ನಾಗಪ್ಪ ಏನಪ್ಪಾ ನಿನ್ನ ಲೀಲೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts