More

    ಕೆಂಪು ಬಣ್ಣದ ಬುಸ್​..ಬುಸ್ ನಾಗರಹಾವು; ಅಬ್ಬಬ್ಬಾ ನಾಗಪ್ಪ ಇದು ವಿಚಿತ್ರ ಎಂದ್ರು ನೆಟ್ಟಿಗರು

    ನವದೆಹಲಿ: ಭೂಮಿಯ ಮೇಲೆ ಮೂರು ಸಾವಿರಕ್ಕೂ ಹೆಚ್ಚು ಜಾತಿಯ ಹಾವುಗಳಿವೆ ಎಂದು ಸಂಶೋಧಕರು ಅಂದಾಜಿಸಿದ್ದಾರೆ. ಇವುಗಳಲ್ಲಿ ಕೆಲವು ಹೆಚ್ಚು ವಿಷಕಾರಿ. ದೂರದಲ್ಲಿ ಹಾವು ಇದೆ ಎಂದು ತಿಳಿದರೆ ಅದೆಷ್ಟೋ ಜನ ಪ್ರಾಣ ಭಯದಿಂದ ಓಡುತ್ತಾರೆ. ಆದರೆ, ಇದೀಗ ಅಪರೂಪದ ಹಾವಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವೈರಲ್ ವೀಡಿಯೊದಲ್ಲಿ, ವ್ಯಕ್ತಿಯೊಬ್ಬರು ಕೆಂಪು ಹಾವನ್ನು ಹಿಡಿದಿರುವುದನ್ನು ಕಾಣಬಹುದು. ಇದು ನಾಗರಹಾವು. ಇಲ್ಲಿ ಅತ್ಯಂತ ಆಶ್ಚರ್ಯಕರ ವಿಷಯವೆಂದರೆ ಹಾವಿನ ಬಣ್ಣ ಕೆಂಪು. ಇದು ಬಹಳ ಅಪರೂಪದ ಹಾವು. ಕೆಂಪು ಬಣ್ಣದ ಹಾವನ್ನು ರೆಡ್ ಸ್ಪಿಟಿಂಗ್ ಕೋಬ್ರಾ ಎಂದು ಕರೆಯಲಾಗುತ್ತದೆ.

    ಅನಿಮಲ್ ಡೈವರ್ಸಿಟಿ ವೆಬ್‌ಸೈಟ್ ಪ್ರಕಾರ, ಕೆಂಪು ಬಣ್ಣವನ್ನು ಹೊಂದಿರುವ ಈ ನಾಗರ ಹಾವು ಅಪರೂಪದ ಜಾತಿಯಾಗಿದೆ. ಇದು ಆಫ್ರಿಕಾದಲ್ಲಿ ಕಂಡುಬರುತ್ತದೆ. ಈಜಿಪ್ಟ್, ತಾಂಜಾನಿಯಾ, ಉಗಾಂಡಾ, ಸುಡಾನ್ ಮುಂತಾದ ಸ್ಥಳಗಳಲ್ಲಿ ಕಂಡುಬರುವ ಈ ಹಾವಿನ ವೈಜ್ಞಾನಿಕ ಹೆಸರು ನಜಾ ಪಲ್ಲಿಡಾ. ಈ ಹಾವುಗಳು ಅತ್ಯಂತ ವಿಷಕಾರಿ ಎಂದು ಹೇಳಲಾಗುತ್ತದೆ.

    ಈ ವೀಡಿಯೋ ನೋಡಿದರೆ ಸಾಮಾನ್ಯ ನಾಗರಹಾವಿಗಿಂತ ಭಿನ್ನವಾಗಿ ಕಾಣುತ್ತದೆ. ಇದು ಕೆಂಪು ಬಣ್ಣದಿಂದ ತುಂಬಿದಂತೆ ಕಾಣುತ್ತದೆ. ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿರುವ ಈ ವಿಡಿಯೋವನ್ನು ಇದುವರೆಗೆ ಲಕ್ಷ ಲಕ್ಷ ಮಂದಿ ವೀಕ್ಷಿಸಿದ್ದಾರೆ. ವಿಷಪೂರಿತ ನಾಗರಹಾವನ್ನು ನೋಡಿದ ಜನರು ಮತ್ತು ನೆಟಿಜನ್‌ಗಳು ಅಚ್ಚರಿಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts