More

    ನಾಡು, ನುಡಿಗೆ ಕಸಾಪ ಕೊಡುಗೆ ಅನನ್ಯ

    ಚನ್ನರಾಯಪಟ್ಟಣ : ನಾಡು, ನುಡಿಗೆ ಕನ್ನಡ ಸಾಹಿತ್ಯ ಪರಿಷತ್ ಕೊಡುಗೆ ಅನನ್ಯ ಎಂದು ಕಸಾಪ ತಾಲೂಕು ಅಧ್ಯಕ್ಷ ಹಡೇನಹಳ್ಳಿ ಲೋಕೇಶ್ ಹೇಳಿದರು.
    ಪಟ್ಟಣದ ಹಳೆಯ ಬಸ್ ನಿಲ್ದಾಣದಲ್ಲಿರುವ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ
    110ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸಂಸ್ಥೆ ಉದಯಕ್ಕೆ ಕಾರಣರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಸೇವೆ ಶ್ಲಾಘನೀಯ ಎಂದರು.
    ಕಸಾಪ ಸ್ಥಾಪನೆಯಾದಾಗಿನಿಂದ ಇಲ್ಲಿಯವರೆಗೆ ಅನೇಕ ಮಹನೀಯರು, ಹೋರಾಟಗಾರರು ವಿಭಿನ್ನವಾದ ಸೇವೆ ಸಲ್ಲಿಸಿದ್ದಾರೆ. ಪರಿಷತ್ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು. ಕನ್ನಡ ನಾಡಿನ ಎಲ್ಲ ಸಾಹಿತಿಗಳು, ಅಕ್ಷರ ಅಭಿಮಾನಿಗಳು, ಸಮಸ್ತ ಕನ್ನಡ ಮನಸ್ಸುಗಳ ಏಕೈಕ ಸಾರ್ವಭೌಮ ಸಂಸ್ಥೆಯಾಗಿ ಕಸಾಪ ಮುಂದೆಯೂ ಅನುಪಮ ಸೇವೆ ಸಲ್ಲಿಸಲಿದೆ ಎಂದರು. ಸಂಸ್ಥೆ ಬೆನ್ನೆಲುಬಾಗಿದೆ : ಕನ್ನಡ ನಮ್ಮ ಬದುಕಿನ ಭಾಗ. ನಮ್ಮ ಆಲೋಚನೆ, ಸಂಸ್ಕಾರ, ಸಂಸ್ಕೃತಿ, ಜೀವನ ಶೈಲಿ, ಬದುಕು, ಬರಹ ಎಲ್ಲೆಡೆಯೂ ಕನ್ನಡವಿದೆ. ಕನ್ನಡ ನಮ್ಮ ಅಸ್ಮಿತೆ. ಕಸಾಪಕ್ಕೆ ಭವ್ಯವಾದ ಇತಿಹಾಸವೂ ಇದೆ. ಭವಿಷ್ಯವೂ ಇದೆ.
    ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ ಮತ್ತು ಕಲೆಗೆ ಕಸಾಪ ಬೆನ್ನೆಲುಬಾಗಿದೆ ಎಂದರು. ಉಪನ್ಯಾಸಕ ದಮ್ಮನಿಂಗಲ ಮಂಜುನಾಥ ಅವರು ಪರಿಷತ್ ನಡೆದು ಬಂದ ದಾರಿ ಅವಲೋಕಿಸಿದರು. ಕಲಾವಿದರಾದ ನೇರಲೆಕೆರೆ ಸವಿತಾ ಮತ್ತು ಸುಧಾಕರ್ ಅವರನ್ನು ಸನ್ಮಾನಿಸಲಾಯಿತು. ಸಾಹಿತಿ ಹೊನ್ನಶೆಟ್ಟಿಹಳ್ಳಿ ಗಿರೀಶ ಅಧ್ಯಕ್ಷತೆ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts