More

    ಚೊಚ್ಚಲ ಪ್ರಶಸ್ತಿ ಗೆದ್ದ ಅಂಗಣದಲ್ಲಿ ಮರುಕಳಿಸುವುದೇ ಕೆಕೆಆರ್ ವೈಭವ: ಅಂದಿನ ನಾಯಕ, ಈಗ ಮೆಂಟರ್

    ಚೆನ್ನೈ: ಚೊಚ್ಚಲ ಬಾರಿ ಪ್ರಶಸ್ತಿ ಎತ್ತಿಹಿಡಿದ ಅಂಗಣ, ಅಂದಿನ ನಾಯಕನ ಮಾರ್ಗದರ್ಶನದಲ್ಲಿ 10 ವರ್ಷಗಳ ಬಳಿಕ ಮತ್ತೆ ಅದೇ ಅಂಗಣದಲ್ಲಿ ಚಾಂಪಿಯನ್ ಆಗುವ ಹಂಬಲದಲ್ಲಿರುವ ಕೋಲ್ಕತ ನೈಟ್‌ರೈಡರ್ಸ್‌ ತಂಡ ಐಪಿಎಲ್ 17ನೇ ಆವೃತ್ತಿಯಲ್ಲಿ ಭಾನುವಾರ ಚೆಪಾಕ್ ಅಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಸವಾಲು ಎದುರಿಸಲಿದೆ. ಕೆಕೆಆರ್ ಗೆದ್ದರೆ 3ನೇ ಬಾರಿ ಪ್ರಶಸ್ತಿ ಗೆದ್ದ ದಾಖಲೆ ಬರೆಯಲಿದ್ದು, ಸನ್‌ರೈಸರ್ಸ್‌ ಗೆದ್ದರೆ ಎಂಟು ವರ್ಷಗಳ ಬಳಿಕ 2ನೇ ಬಾರಿ ಪ್ರಶಸ್ತಿ ಜಯಿಸಿದ ಸಾಧನೆ ಮಾಡಲಿದೆ. ಹಾಲಿ ಟೂರ್ನಿಯಲ್ಲಿ ಉಭಯ ತಂಡಗಳು 2 ಬಾರಿ ಮುಖಾಮುಖಿಯಾಗಿದ್ದಾಗ ಶ್ರೇಯಸ್ ಅಯ್ಯರ್ ಬಳಗವೇ ಮೇಲುಗೈ ಸಾಧಿಸಿದೆ. ಆತಿಥೇಯ ತಂಡವಿಲ್ಲದ ಸೂಪರ್ ಸಂಡೇ ಸೆಣಸಾಟದಲ್ಲಿ ಪ್ರಶಸ್ತಿ ಯಾರು ಎತ್ತಿ ಹಿಡಿಯಲಿದ್ದಾರೆ ಎಂಬುದು ಕ್ರಿಕೆಟ್‌ಪ್ರಿಯರಲ್ಲಿ ಕುತೂಹಲ ಮೂಡಿಸಿದೆ.

    ಆಗ ನಾಯಕ, ಈಗ ಮೆಂಟರ್: ಕೆಕೆಆರ್ ತಂಡ 4ನೇ ಬಾರಿ ಫೈನಲ್ ಆಡಲಿದ್ದು, ಎರಡು ಬಾರಿ ಚಾಂಪಿಯನ್, ಒಮ್ಮೆ ರನ್ನರ್ ಅಪ್ ಆಗಿದೆ. ಆದರೆ ಪ್ರಸ್ತುತ ತಂಡದ ಮೆಂಟರ್ ಆಗಿರುವ 2 ವಿಶ್ವಕಪ್ ಗೆದ್ದ ಟೀಮ್ ಇಂಡಿಯಾದ ಸದಸ್ಯ ಮಾಜಿ ಆಟಗಾರ ಗೌತಮ್ ಗಂಭೀರ್ ಸಾರಥ್ಯದಲ್ಲಿ ಕೆಕೆಆರ್ 2012ರಲ್ಲಿ ಚೊಚ್ಚಲ ಪ್ರಶಸ್ತಿ ಜಯಿಸಿತ್ತು, ಬಳಿಕ 2014ರಲ್ಲಿ 2ನೇ ಬಾರಿ ಕಪ್ ಗೆದ್ದಿತ್ತು. ಆದರೆ 2021ರಲ್ಲಿ 3ನೇ ಬಾರಿ ಫೈನಲ್‌ಗೇರಿದರೂ ಪ್ರಶಸ್ತಿ ಜಯಿಸುವಲ್ಲಿ ಕೆಕೆಆರ್ ವಿಲವಾಗಿತ್ತು. ಆಗ ಇಂಗ್ಲೆಂಡ್‌ನ ಇವೋಯಿನ್ ಮಾರ್ಗನ್ ತಂಡದ ನಾಯಕನಾಗಿದ್ದರು. ಕೆಕೆಆರ್ ಈ ಬಾರಿ ಪ್ರಶಸ್ತಿ ಜಯಿಸುವಲ್ಲಿ ಸಲವಾದರೆ ಗಂಭೀರ್ ಒಂದೇ ತಂಡದ ನಾಯಕ ಹಾಗೂ ಮೆಂಟರ್ ಆಗಿ ಚಾಂಪಿಯನ್ ಎನಿಸಿದ ಮೊದಲ ಆಟಗಾರ ಎನಿಸಲಿದ್ದಾರೆ.

    ಮುಖಾಮುಖಿ: 27
    ಕೆಕೆಆರ್: 18
    ಸನ್‌ರೈಸರ್ಸ್‌: 9
    ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts