ಅನಂತಪುರ ಕ್ಷೇತ್ರದ ಪ್ರಾಂಗಣವೇರಿದ ಮೊಸಳೆ: ಭಕ್ತರಲ್ಲಿ ಕೌತುಕ ಮೂಡಿಸಿದ ಮರಿ ಬಬಿಯಾ

ವಿಜಯವಾಣಿ ಸುದ್ದಿಜಾಲ ಕುಂಬಳೆ

ಕಾಸರಗೋಡಿನ ಶ್ರೀ ಅನಂತಪುರ ಶ್ರೀ ಅನಂತಪದ್ಮನಾಭ ಕ್ಷೇತ್ರದ ಮರಿ ಮೊಸಳೆ ಬಬಿಯಾ ಮತ್ತೆ ಸುದ್ದಿಯಲ್ಲಿದೆ.
ಇದೇ ಮೊದಲ ಬಾರಿಗೆ ಶುಕ್ರವಾರ ಸಂಜೆ ಮೊಸಳೆ ಮರಿ, ದೇಗುಲ ಪ್ರಾಂಗಣ ಏರಿ ಗರ್ಭಗುಡಿಯ ಹೊರಗೆ ಸ್ವಚ್ಛಂದ ವಿಶ್ರಾಂತಿ ಪಡೆದಿರುವುದು ಭಕ್ತರ ಆಕರ್ಷಣೆಗೆ ಕಾರಣವಾಯಿತು. ಶನಿವಾರ ಮುಂಜಾನೆಯೂ ಮತ್ತೆ ಪ್ರಾಂಗಣ ಏರಿದ್ದು, ಭಕ್ತರಲ್ಲಿ ವಿಸ್ಮಯ ಮೂಡಿಸಿದೆ.

ಅನಂತಪುರ ಕ್ಷೇತ್ರ ಏಕೈಕ ನಿರುಪದ್ರವಿ ಸಾತ್ವಿಕ ಮೊಸಳೆಯ ವಾಸದಿಂದ ಪ್ರಸಿದ್ಧವಾಗಿದೆ. ಇಲ್ಲಿ ಈ ಹಿಂದೆ ಇದ್ದ ಮೊಸಳೆ ಬಬಿಯಾ 78ರ ವಯಸ್ಸಿನಲ್ಲಿ ವರ್ಷದ ಹಿಂದೆ ವಯೋಸಹಜವಾಗಿ ಹರಿಪಾದ ಸೇರಿತ್ತು. ಭಕ್ತರ ಪಾಲಿಗೆ ಕಣ್ಣಿಗೆ ಕಾಣುವ ದೇವರೆಂದೇ ಆರಾಧನೆ ಪಡೆಯುತ್ತಿದ್ದ ಮೊಸಳೆಯ ವಿಯೋಗದಿಂದ ಭಕ್ತರ ದುಃಖಕ್ಕೆ ಕಾರಣವಾಗಿತ್ತು. ಅನಂತರ ಭರ್ತಿ ಒಂದು ವರ್ಷದ ಬಳಿಕ ಮೊಸಳೆ ಮರಿಯೊಂದು ಈ ಕ್ಷೇತ್ರ ಕೆರೆಯಲ್ಲಿ ಪ್ರತ್ಯಕ್ಷಗೊಂಡು ಅಚ್ಚರಿ ಮೂಡಿಸಿತ್ತು. ಇದಕ್ಕೀಗ ಆರೇಳು ತಿಂಗಳ ಹರೆಯ.

ಆರಂಭದಲ್ಲಿ ಭಕ್ತ ಜನರಿದ್ದರೆ ಕಾಣಿಸಿಕೊಳ್ಳದಿದ್ದ ಮೊಸಳೆ ಮರಿ ಈಗ ದೈವಿಕ ಪರಿಸರಕ್ಕೆ ಹೊಂದಿಕೊಂಡು ಹಿಂದಿನ ಮೊಸಳೆಯಂತೆಯೇ ಸಾತ್ವಿಕವಾಗಿ ಬದುಕುತ್ತಿದೆ. ಕ್ಷೇತ್ರ ಸರೋವರದಲ್ಲಿ ಅತ್ತಿಂದತ್ತ ಓಡಾಡುತ್ತ ನಿರುಪದ್ರವಿಯಾಗಿ ಭಕ್ತರಿಗೆ ದರ್ಶನ ನೀಡುವ ಈ ಮರಿಮೊಸಳೆಗೂ ಬಬಿಯಾ ಎಂದೇ ನಾಮಕರಣವಾಗಿದೆ. ಪ್ರತ್ಯಕ್ಷಗೊಂಡ ಬಳಿಕ ನೀರು ಬಿಟ್ಟು ಕದಲದೆ ಇದ್ದ ಮೊಸಳೆ ಮರಿ ಈಗ ದೇಗುಲ ವಾತಾವರಣಕ್ಕೆ ಹೊಂದಿಕೊಂಡಿದ್ದು, ಕ್ಷೇತ್ರ ಪ್ರಾಂಗಣವೇರಿ ಗರ್ಭಗುಡಿಯ ಹೊರಗೆ ಕಾವಲು ಭಟನಂತೆ ವಿಶ್ರಾಂತಿ ಪಡೆಯುತ್ತಿರುವುದು ಭಕ್ತರಲ್ಲಿ ಅಚ್ಚರಿ ಮೂಡಿಸಿದೆ.

ದೇವರ ನಡೆ ಎದುರು ಭಕ್ತರಿಗೆ ದರ್ಶನ

ಮರಿ ಬಬಿಯಾ ಇದೇ ಮೊದಲ ಬಾರಿಗೆ ಕ್ಷೇತ್ರದ ಅಂಗಣ ಏರಿ ಬಂದಿರುವುದು ಅಚ್ಚರಿ ಮೂಡಿಸಿದೆ. ನಿರುಪದ್ರವಿ ಮೊಸಳೆ ಇಲ್ಲಿಯ ವಾತಾವರಣಕ್ಕೆ ಹೊಂದಿ, ನೀರಿನಿಂದ ಮೇಲೆ ಬಂದು ದೇವರ ನಡೆ ಎದುರು ದರ್ಶನ ನೀಡಿರುವುದು ಕುತೂಹಲ ಮೂಡಿಸಿದೆ. ಭಗವಂ ತನ ಶಕ್ತಿ- ಕಾರಣಿಕಕ್ಕೆ ಇದು ಸಾಕ್ಷಿ ಎಂದು ಅನಂತಪುರ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ವಿ.ಮಹಾಲಿಂಗೇಶ್ವರ ಭಟ್ ಹೇಳಿದ್ದಾರೆ.

Share This Article

ಮೊದಲು ತಲೆಗೆ ನೀರು ಹಾಕ್ತೀರಾ? ಸ್ನಾನ ಮಾಡುವ ಸರಿಯಾದ ವಿಧಾನ ಯಾವುದು? ಇಲ್ಲಿದೆ ಉಪಯುಕ್ತ ಮಾಹಿತಿ | Bathing

Bathing: ದೈಹಿಕ ನೈರ್ಮಲ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಸ್ನಾನ ಮಾಡಲು ಆರೋಗ್ಯ ತಜ್ಞರು ಶಿಫಾರಸು…

ಮಳೆ, ಚಳಿ ಅಂತ ಸುಮ್ಮನೆ ಇರಬೇಡಿ..ಬಿಸಿ ಬಿಸಿಯಾಗಿ ತರಕಾರಿ ಪಲಾವ್​​ ಮಾಡಿ ಸವಿಯಿರಿ… Vegetable Pulao

 ಬೆಂಗಳೂರು:  ಮಳೆ ಜೋರಾಗಿ ಸುರಿಯುತ್ತಿದೆ. ಮಳೆ, ಚಳಿ ಎಂದು ಸುಮ್ಮನೆ ಇರಬೇಡಿ. ಬಿಸಿ ಬಿಸಿಯಾಗಿ ಏನಾದ್ರು…

ಮಳೆಗಾಲದಲ್ಲಿ ಬೆಚ್ಚಗಿರುವುದು ಹೇಗೆ? ಚಳಿಗೆ ಥರಥರ ನಡುಗುವ ಬದಲು ಹೀಗೆ ಮಾಡಿ…Rainy Weather Tips

ಬೆಂಗಳೂರು: ಕಳೆದ ಎರಡು ದಿನದಿಂದ ಎಲ್ಲೆಡೆ ಭಾರಿ ಮಳೆ ಸುರಿಯುತ್ತಿದೆ. ನಗರದಲ್ಲಿ ಸುರಿದ ಧಾರಾಕಾರ ಮಳೆಗೆ…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ