More

    ಶಿವಣ್ಣನನ್ನು ಭರ್ಜರಿಯಾಗಿ ಬರಮಾಡಿಕೊಂಡ ಉತ್ತರಕಾಂಡ

    ಬೆಂಗಳೂರು: ಸ್ಯಾಂಡಲ್​ವುಡ್​ನ ದಿ ಮೋಸ್ಟ್​ ಬ್ಯುಸಿಯೆಸ್ಟ್​ ನಟ ಎಂದರೆ ಮೊದಲಿಗೆ ಕೇಳಿ ಬರುವ ಹೆಸರು ಹ್ಯಾಟ್ರಿಕ್​ ಹೀರೋ ಡಾ. ಶಿವರಾಜ್​ಕುಮಾರ್​ ಅವರದ್ದು, ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ದಿನ ನಟ ಇದೀಗ ಶೂಟಿಂಗ್​ಗೆ ವಾಪಸ್​ ಆಗಿದ್ದು, ಇವರಿಗೆ ಭರ್ಜರಿ ಸ್ವಾಗತ ದೊರೆತಿದೆ. ಉತ್ತರಕಾಂಡ ಸಿನಿಮಾ ತಂಡದವರು ಶಿವರಾಜ್​ಕುಮಾರ್​ಗೆ ಭರ್ಜರಿ ಸ್ವಾಗತ ನೀಡಿದ್ದು, ಇದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ಡಾಲಿ ಧನಂಜಯ್​ ನಾಯಕನಾಗಿ ನಟಿಸುತ್ತಿರುವ ಉತ್ತರಕಾಂಡ ಸಿನಿಮಾದಲ್ಲಿ ಕಲಾವಿದರ ದೊಡ್ಡ ದಂಡೇ ಇದೆ ಎಂದು ಹೇಳಬಹುದಾಗಿದೆ. ದಿನ ಕಳೆದಂತೆ ಸ್ಟಾರ್​ ನಟರು ಚಿತ್ರತಂಡವನ್ನು ಕೂಡಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಶಿವರಾಜ್​ಕುಮಾರ್, ಧನಂಜಯ್ ಜೊತೆಗೆ ಐಶ್ವರ್ಯಾ ರಾಜೇಶ್, ರಂಗಾಯಣ ರಘು, ಯೋಗರಾಜ್ ಭಟ್, ಚೈತ್ರಾ ಆಚಾರ, ದಿಗಂತ್​ ಮೊದಲಾದವರು ನಟಿಸುತ್ತಿದ್ದಾರೆ. ಇದೀಗ ಈ ಚಿತ್ರದ ಸೆಟ್​ಗೆ ಶಿವಣ್ಣ ಎಂಟ್ರಿ ಕೊಟ್ಟಿದ್ದು, ಅದ್ದೂರಿ ಸ್ವಾಗತ ಸಿಕ್ಕಿದೆ.

    ಇದನ್ನೂ ಓದಿ: ಅಯೋಧ್ಯೆಯಲ್ಲಿ ಭೀಕರ ರಸ್ತೆ ಅಪಘಾತ; ಕಲಬುರಗಿ ಮೂಲದ ಮೂವರು ಭಕ್ತರು ಸಾವು

    ಉತ್ತರಕಾಂಡ ಸೆಟ್​ಗೆ ಶಿವಣ್ಣ ಎಂಟ್ರಿ ಕೊಡುತ್ತಿದ್ದಂತೆ ಚಿತ್ರತಂಡ ತಮಟೆ ವಾದ್ಯಗಳನ್ನು ಬಾರಿಸಿ ಅವರ ಮುಖವಾಡಗಳನ್ನು ಧರಿಸಿ ಹಾರ ಹಾಕಿ ಸ್ವಾಗತ ಕೋರಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ. ಇದಲ್ಲದೆ ಚಿತ್ರದಲ್ಲಿ ಹಿರಿಯ ನಟಿ ಉಮಾಶ್ರೀ ನಟಿಸುತ್ತಿದ್ದು, ಇತ್ತೀಚಿಗೆ ಚಿತ್ರತಂಡ ಅವರ ಪೋಸ್ಟರ್​ ರಿವೀಲ್​ ಮಾಡಿತ್ತು.

    ನಿರ್ಮಾಪಕರಾದ ಕಾರ್ತಿಕ್​ ಗೌಡ, ಯೋಗಿ ಜಿ. ರಾಜ್​ ಹಾಗೂ ನಟ ಡಾಲಿ ಧನಂಜಯ್ ಅವರು ‘ರತ್ನನ್ ಪ್ರಪಂಚ’ ಹಾಗೂ ‘ಗುರುದೇವ ಹೊಯ್ಸಳ’ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಈಗ ಇವರ ಕಾಂಬಿನೇಷನ್​ನಲ್ಲಿ ‘ಉತ್ತರಕಾಂಡ’ ಸಿನಿಮಾ ಮೂಡಿಬರುತ್ತಿದೆ. ರೋಹಿತ್​ ಪದಕಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಚರಣ್ ರಾಜ್ ಅವರ ಸಂಗೀತ ಸಂಯೋಜನೆ, ಸ್ವಾಮಿ ಅವರ ಛಾಯಾಗ್ರಹಣ, ದೀಪು ಎಸ್. ಕುಮಾರ್ ಸಂಕಲನ ಇದೆ. ಈಗಾಗಲೇ ಟೈಟಲ್​ ಹಾಗೂ ಮೇಕಿಂಗ್​ ಮೂಲಕ ಸಾಕಷ್ಟು ಗಮನ ಸೆಳೆದಿರುವ ಚಿತ್ರ ಬಿಡುಗಡೆಯನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts