More

    3ನೇ ಮಗು ಹುಟ್ಟಿದ್ದಕ್ಕೆ ಇಬ್ಬರು ಬಿಜೆಪಿ ಕಾರ್ಪೊರೇಟರ್‌ಗಳು ಅನರ್ಹ

    ಅಹಮದಾಬಾದ್: ಗುಜರಾತ್‌ನ ಅಮೇಲಿ ಜಿಲ್ಲೆಯ ದಾಮ್‌ನಗರ ನಗರಪಾಲಿಕೆಯ ಇಬ್ಬರು ಬಿಜೆಪಿ ಸದಸ್ಯರು 3ನೇ ಮಗು ಜನಿಸಿದ್ದಕ್ಕೆ ತಮ್ಮ ಸದಸ್ಯತ್ವ ಕಳೆದುಕೊಂಡಿದ್ದಾರೆ. ಅಮ್ರೇಲಿ ನಗರಸಭೆ ಕಾರ್ಪೋರೇಟರ್​ಗಳಾದ ಖೀಮಾ ಕಸೋಟಿಯಾ ಮತ್ತು ಮೇಘನಾ ಬೋಖಾ ಅನರ್ಹಗೊಂಡ ಬಿಜೆಪಿ ಸದಸ್ಯರು.

    2005-06 ರಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ 1963ರ ಮುನ್ಸಿಪಲ್ ಕಾಯಿದೆಗೆ ತಿದ್ದುಪಡಿ ಮಾಡಿ, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ ಯಾವುದೇ ವ್ಯಕ್ತಿ ಪಂಚಾಯತ್, ಪುರಸಭೆಗಳು ಮತ್ತು ಮುನ್ಸಿಪಲ್ ಕಾರ್ಪೊರೇಶನ್‌ ಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಿದ್ದರು. ಬಳಿಕ ಇನ್ನೊಂದು ತಿದ್ದುಪಡಿ ತಂದು ಅಧಿಕಾರಾವಧಿಯಲ್ಲಿ 3ನೇ ಮಗು ಜನಿಸಿದರೆ ಇವರು ಅನರ್ಹರಾಗಲಿದ್ದಾರೆ ಎಂಬ ಎಂಬ ನಿಯಮ ಸೇರಿಸಿದ್ದರು.

    ಇತ್ತೀಚೆಗೆ ವಜ್ರ ವ್ಯಾಪಾರಿಯೊಬ್ಬರು ಈ ಇಬ್ಬರೂ ಸದಸ್ಯರಿಗೆ ಮೂರನೇ ಮಗುವಾಗಿದೆ ಎಂದು ದೂರು ನೀಡಿದ್ದರು. ಈ ಪ್ರಕಾರ ಈಗ ಈ ಇಬ್ಬರ 3ನೇ ಮಗು ಜನಿಸಿದ ಮಾಹಿತಿ ಅಮೇಲಿ ಜಿಲ್ಲಾಧಿಕಾರಿಗೆ ದೊರಕಿದೆ. ಹೀಗಾಗಿ ಇಬ್ಬರನ್ನೂ ಅನರ್ಹ ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.ಈ ನಡುವೆ, ತಾವು ಸ್ಪರ್ಧಿಸುವಾಗ ತಮಗೆ 2 ಮಕ್ಕಳಿದ್ದವು. 3ನೇ ಮಗು ತಮ್ಮ ಆಯ್ಕೆ ನಂತರ ಆಗಿದೆ ಎಂದು ಈ ಇಬ್ಬರು ವಾದಿಸಿದರೂ ಅವರ ವಾದ ತಳ್ಳಿ ಹಾಕಿದ ಜಿಲ್ಲಾಧಿಕಾರಿ, ನಿಯಮಾನುಸಾರ, ಅಧಿಕಾರಾವಧಿಯಲ್ಲಿ 3ನೇ ಮಗು ಜನಿಸಿದರೂ ಅನರ್ಹರಾಗುತ್ತಾರೆ ಎಂದು ಹೇಳಿ ಇಬ್ಬರ ಸದಸ್ಯತ್ವವನ್ನೂ ರದ್ದು ಮಾಡಿದ್ದಾರೆ. ಇಬ್ಬರು ಅನರ್ಹರಾದರೂ ನಗರಪಾಲಿಕೆ ಬಿಜೆಪಿ ಆಡಳಿತದಲ್ಲಿಯೇ ಇರುವಷ್ಟು ಬಹುಮತ ಬಿಜೆಪಿಗೆ ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts