More

    ಎಸ್​ಆರ್​ಎಚ್​ ವಿರುದ್ಧ 36 ರನ್​ಗಳ ಸೋಲು; ರಾಜಸ್ಥಾನ ರಾಯಲ್ಸ್​​ ನಾಯಕ ಸಂಜು ಸ್ಯಾಮ್ಸನ್​ ಹೇಳಿದ್ದಿಷ್ಟು

    ಚೆನ್ನೈ: ಇಲ್ಲಿನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ 17ನೇ ಆವೃತ್ತಿಯ ಎರಡನೇ ಕ್ವಾಲಿಫೈಯರ್​ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ರಾಜಸ್ಥಾನ ರಾಯಲ್ಸ್​ 36 ರನ್​ಗಳ ಸೋಲು ಕಂಡಿದ್ದು, ಸೋಲಿನೊಂದಿಗೆ ತನ್ನ ಅಭಿಯಾನವನ್ನು ಮುಗಿಸಿದೆ. ಇತ್ತ ಸೋಲಿನ ಕುರಿತು ಮಾತನಾಡಿರುವ ರಾಜಸ್ಥಾನ ನಾಯಕ ಸಂಜು ಸ್ಯಾಮ್ಸನ್​ ಹಲವು ವಿಚಾರಗಳ ಕುರಿತು ಮಾಹಿತಿ ನೀಡಿದ್ದಾರೆ.

    ಪೋಸ್ಟ್​ ಮ್ಯಾಚ್​ ಪ್ರೆಸೆಂಟೇಷನ್​ನಲ್ಲಿ ಈ ಕುರಿತು ಮಾತನಾಡಿದ ಸಂಜು ಸ್ಯಾಮ್ಸನ್​, , ಇದೊಂದು ಮಹತ್ವದ ಪಂದ್ಯವಾಗಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ನಾವು ಬೌಲಿಂಗ್ ಮಾಡಿದ ರೀತಿ ನನಗೆ ನಿಜಕ್ಕೂ ಹೆಮ್ಮೆ ತಂದಿದೆ. ಆದರೆ ಬ್ಯಾಟಿಂಗ್​ನಲ್ಲಿ ನಾವು ಎಡವಿದೆವು. ಅದರಲ್ಲೂ ಸ್ಪಿನ್ ದಾಳಿ ವಿರುದ್ಧ ಮಧ್ಯಮ ಓವರ್​ಗಳಲ್ಲಿ ನಮ್ಮಲ್ಲಿ ಉತ್ತಮ ಆಯ್ಕೆಗಳ ಕೊರತೆ ಕಂಡುಬಂದಿತು. ಅಲ್ಲಿಯೇ ನಾವು ಪಂದ್ಯವನ್ನು ಸೋತೆವು.

    Sanju Samson

    ಇದನ್ನೂ ಓದಿ: ರಾಮೇಶ್ವರಂ ಕೆಫೆ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ; ಅವಧಿ ಮೀರಿದ ಆಹಾರ ಪದಾರ್ಥ, ನಿಯಮ ಉಲ್ಲಂಘನೆ ಪತ್ತೆ

    ದ್ವಿತೀಯ ಇನಿಂಗ್ಸ್​ ವೇಳೆ ಪಿಚ್ ಸ್ಪಿನ್ನರ್​ಗಳಿಗೆ ಸಹಕಾರಿಯಾಗಿತ್ತು. ಅದರಲ್ಲೂ ಸನ್​ರೈಸರ್ಸ್ ಹೈದರಾಬಾದ್ ಸ್ಪಿನ್ನರ್​ಗಳು ಈ ಟರ್ನಿಂಗ್​ಗಳನ್ನು ಪರಿಣಾಮಕಾರಿಯಾಗಿ ಬಳಸಲು ಪ್ರಾರಂಭಿಸಿದರು. ನಮ್ಮ ಬಲಗೈ ಬ್ಯಾಟ್ಸ್‌ಮನ್‌ಗಳ ವಿರುದ್ಧ ಮಧ್ಯಮ ಓವರ್‌ಗಳಲ್ಲಿ ಎಡಗೈ ಸ್ಪಿನ್ನರ್​ಗಳು ಉತ್ತಮ ದಾಳಿ ಸಂಘಟಿಸಿದರು. ನಮ್ಮ ಬ್ಯಾಟಿಂಗ್​ ಲೈನಪ್​ನಲ್ಲಿ ಎಡಗೈ ಬ್ಯಾಟರ್​ಗಳು ಇಲ್ಲದಿರುವುದು ಕೂಡ ನಮ್ಮ ಸೋಲಿಗೆ ಕಾರಣವಾಯಿತು. 

    ಮಧ್ಯಮ ಕ್ರಮಾಂಕದಲ್ಲಿ ಶಿಮ್ರೋನ್​ ಹೆಟ್ಮೆಯರ್​ ಹೊರತುಪಡಿಸಿ ಯಾರು ಎಡಗೈ ಬ್ಯಾಟ್ಸ್​ಮನ್​ಗಳಿಲ್ಲ. ಎಸ್​ಆರ್​ಹೆಚ್ ತಂಡದ ಎಡಗೈ ಸ್ಪಿನ್ನರ್​ಗಳು ಮಧ್ಯಮ ಓವರ್​ಗಳಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿ ಇಡೀ ಪಂದ್ಯದ ಗತಿಯನ್ನೇ ಬದಲಿಸಿ ಬಿಟ್ಟರು. ಇದುವೇ ನಮ್ಮ ಸೋಲಿಗೆ ಪ್ರಮುಖ ಕಾರಣವಾಯಿತು ಎಂದು ರಾಜಸ್ಥಾನ ರಾಯಲ್ಸ್​ ನಾಯಕ ಸಂಜು ಸ್ಯಾಮ್ಸನ್​ ಪೋಸ್ಟ್​ ಮ್ಯಾಚ್​ ಪ್ರೆಸೆಂಟೇಷನ್​ನಲ್ಲಿ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts