More

    ಹೊಸ ತಂಡದ ಕುರಿತು ಮಾಹಿತಿ ಬಹಿರಂಗಪಡಿಸಿದ ಧೋನಿ; ಆದರೆ, ಮಾಹಿ ಕೊಟ್ಟ ಟ್ವಿಸ್ಟ್​ ನೀವು ಊಹಿಸಲು ಸಾಧ್ಯವಿಲ್ಲ

    ನವದೆಹಲಿ: ಟೀಮ್​​​ ಇಂಡಿಯಾದ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾಗಿದ್ದ ಮಹೇಂದ್ರ ಸಿಂಗ್​ ಧೋನಿ ಐಪಿಎಲ್​ನಲ್ಲಿ ಚೆನ್ನೈ ಸೂಪರ್​ಕಿಂಗ್ಸ್​ ತಂಡದ ಭಾಗವಾಗಿ ಅತ್ಯುತಮ ಪ್ರದರ್ಶನ ನೀಡಿದ್ದಾರೆ. ಇನ್ನೂ 17ನೇ ಆವೃತ್ತಿಯ ಐಪಿಎಲ್​ ಬಳಿಕ ಧೋನಿ ನಿವೃತ್ತಿಯಾಗುತ್ತಾರೆ ಎಂದು ಹೇಳಲಾಗಿದ್ದು, 18ನೇ ಆವೃತ್ತಿಯನ್ನು ಆಡುವುದಿಲ್ಲ ಎಂದು ಹೇಳಲಾಗಿದೆ. ಆದರೆ, ಇತ್ತೀಚಿನ ಅವರ ಪೋಸ್ಟ್​ ಒಂದು ಸಂಚಲನ ಮೂಡಿಸಿದ್ದು, ಪರೋಕ್ಷವಾಗಿ ರಿಟೈರ್ ಆಗ್ತಿರೋ ವಿಷಯವನ್ನು ಹಂಚಿಕೊಂಡ್ರಾ ಅನ್ನೋ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು.

    ಧೋನಿಗೆ 42 ವರ್ಷ ವಯಸ್ಸಾಗಿದ್ದರೂ, ಈ ವರ್ಷದ ಐಪಿಎಲ್ನಲ್ಲಿ ಅವರು ಚೆನ್ನೈ ಸೂಪರ್​ಕಿಂಗ್ಸ್​​ ಪರ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ಆಗಿ ಕಣಕ್ಕಿಳಿದಿದ್ದರು. ಇನ್ನೂ ನಿವೃತ್ತಿಯ ಬಗೆಗಿನ ಸುದ್ದಿಗಳ ನಡುವೆಯೇ ಧೋನಿ ಸಾಮಾಜಿಕ ಜಾಲತಾಣದಲ್ಲಿ ಹೊಸ ತಂಡವನ್ನು ಕಟ್ಟುವುದಾಗಿ ಪೋಸ್ಟ್​ ಮಾಡಿದ್ದರು. ಇತ್ತ ಈ ಪೋಸ್ಟ್​ ವೈರಲ್​ ಆಗಿದ್ದು, ಅಭಿಮಾನಿಗಳು ಧೋನಿಗೆ ಶುಭ ಹಾರೈಸಿದ್ದರು. ಇದೀಗ ಇದಕ್ಕೆ ಸ್ಪಷ್ಟನೆ ನೀಡಿರುವ ಮಾಹಿ ಎದ್ದಿರುವ ಉಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

    ಪ್ರಸಿದ್ಧ ಕಾರು ತಯಾರಕ ಕಂಪನಿ ಸಿಟ್ರೋನ್​ ಕಂಪನಿಗೆ ಧೋನಿ ರಾಯಭಾರಿಯಾಗಿ ನೇಮಕಗೊಂಡಿದ್ದು, ಧೋನಿ ಅಭಿಮಾನಿಗಳ ದೊಡ್ಡ ತಂಡವನ್ನು ಕಟ್ಟಲು ನಿರ್ಧರಿಸಿದ್ದು, ಅದಕ್ಕೆ ಸಿಟ್ರೋನ್​ ಟೀಮ್​ ಧೋನಿ ಎಂದು ಹೆಸರಿಟ್ಟಿರುವುದಾಗಿ ಘೋಷಿಸಿದ್ದಾರೆ. ಟೀಮ್​ ಇಂಡಿಯಾಗೆ ಅವಿರತ ಬೆಂಬಲ ಘೋಷಿಸುವುದೆ ನಮ್ಮ ಕೆಲಸ ಎಂದು ಧೋನಿ ಸುದ್ದಿಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದಾರೆ. ಇತ್ತ ಧೋನಿ ಹೇಳಿಕೆಗೆ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದು, ಮುಂದಿನ ಬಾರಿ ಐಪಿಎಲ್​ ಆಡಿ ಎಂದು ಕಮೆಂಟ್​ಗಳ ಮೂಲಕ ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts