More

    ಒಂದು ವೇಳೆ ಇದನ್ನು ಮಾಡಿದ್ದರೆ ಆರ್​ಸಿಬಿ ಟ್ರೋಫಿ ಗೆಲ್ಲಬಹುದಿತ್ತು; ಮತ್ತೊಮ್ಮೆ ಟೀಕಿಸಿ ಟ್ವೀಟ್​ ಮಾಡಿದ ರಾಯುಡು

    ಚೆನ್ನೈ: 17ನೇ ಆವೃತ್ತಿ ಶುರುವಾದಗೀನಿಂದಲೂ ರಾಯಲ್​ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿರುವ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ಇದೀಗ ಆರ್​ಸಿಬಿ ವಿರುದ್ಧ ಮತ್ತೊಮ್ಮೆ ತಮ್ಮ ಟೀಕಾಪ್ರಹಾರವನ್ನು ಮುಂದುವರೆಸಿದ್ದು, ಮ್ಯಾನೇಜ್​ಮೆಂಟ್​ ವಿರುದ್ಧ ಕಿಡಿಕಾರಿದ್ದಾರೆ.

    ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಅವರು, ಇಲ್ಲಿಯವರೆಗೂ ಎಷ್ಟು ಅದ್ಭುತ ಆಟಗಾರರನ್ನು ಕೈಬಿಡಲಾಗಿದೆ ಎಂಬುದನ್ನು ನೆನಪಿಸಿಕೊಳ್ಳಿ ಎಂದು ಪ್ರಶ್ನಿಸಿದ್ದಾರೆ.

    ಐಪಿಎಲ್​ ಶುರುವಾದಾಗಿನಿಂದಲೂ ತಮ್ಮ ತಂಡವನ್ನು ನಿರಂತರವಾಗಿ ಬೆಂಬಲಿಸುತ್ತ ಬಂದಿರುವ ಆರ್​ಸಿಬಿ ಅಭಿಮಾನಿಗಳನ್ನು ಕಂಡರೆ ನನಗೆ ನಿಜವಾಗಿಯೂ ಬೇಸರವಾಗುತ್ತದೆ. ನಾಯಕರು ಹಾಗೂ ಫ್ರಾಂಚೈಸಿ ಮಾಲೀಕರು ತಮ್ಮ ವೈಯಕ್ತಿಕ ಸಾಧನೆಯ ಬದಲು ತಂಡವನ್ನು ಸರಿಯಾಗಿ ಮುನ್ನಡೆಸಿದ್ದರೆ ಇಷ್ಟೊತ್ತಿಗಾಗಲೇ ಅನೇಕ ಪ್ರಶಸ್ತಿಗಳನ್ನು ಗೆಲ್ಲಬಹುದಿತ್ತು.

    ಹಾಗೆ ನೋಡುವುದಾದರೆ ಇಲ್ಲಿಯವರೆಗೂ ಎಷ್ಟು ಅದ್ಭುತ ಆಟಗಾರರನ್ನು ತಂಡದಿಂದ ಕೈಬಿಡಲಾಗಿದೆ ಎಂಬುದನ್ನು ನೆನಪಿಸಿಕೊಳ್ಳಿ. ತಂಡಗಳ ಆಸಕ್ತಿಗಳನ್ನು ಮೊದಲು ಇರಿಸುವ ಆಟಗಾರರಿಗೆ ಹೆಚ್ಚು ಪ್ರಾಮುಖ್ಯತೆ ನೀಡಿ. 2025ರಲ್ಲಿ ನಡೆಯುವ ಮೆಗಾ ಹರಾಜಿನಲ್ಲಿ ಉತ್ತಮ ಆಟಗಾರರನ್ನು ಖರೀದಿಸುವ ಮೂಲಕ ಹೊಸ ಅಧ್ಯಾಯವನ್ನು ಪ್ರಾರಂಭಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

    ಮೇ 22ರಂದು ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಎಲಿಮಿನೇಟರ್​ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಆರ್​ಸಿಬಿ 8 ವಿಕೆಟ್​ ನಷ್ಟಕ್ಕೆ 20 ಓವರ್​ಗಳಲ್ಲಿ 172 ಗಳಿಸಲು ಶಕ್ತವಾಯಿತು. 173 ರನ್​ಗಳ ಬೆನ್ನತ್ತಿದ್ದ ರಾಜಸ್ಥಾನ ರಾಯಲ್ಸ್​ ತಂಡವು 19 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 174 ರನ್​ ಗಳಿಸಿ ಗೆಲುವಿನ ನಗೆ ಬೀರುವ ಮೂಲಕ ಕ್ವಾಲಿಫೈಯರ್-2 ಪ್ರವೇಶಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts