More

    ಆರ್​ಸಿಬಿಯಲ್ಲಿ ವಿರಾಟ್​ಗಿಂತ ಇವರೇ ದೊಡ್ಡವರು; ನಿವೃತ್ತಿಯ ಬಳಿಕ ಹೊಸ ವಿಚಾರ ರಿವೀಲ್​ ಮಾಡಿದ ಡಿಕೆ

    ಬೆಂಗಳೂರು: ವಿಶ್ವದ ಮಿಲಿಯನ್​ ಡಾಲರ್​ ಟೂರ್ನಿಗಳಲ್ಲಿ ಒಂದಾದ ಐಪೆಇಲ್​ ಮುಕ್ತಾಯದ ಹಂತಕ್ಕೆ ಬಂದಿದ್ದು, ವಿಶ್ವದ ಶ್ರೀಮಂತ ಕ್ರಿಕೆಟ್​ ಟೂರ್ನಿಗೆ ಮೇ 26ರಂದು ವರ್ಣರಂಜಿತ ತೆರೆ ಬೀಳಲಿದೆ. 17ನೇ ಆವೃತ್ತಿಯ ಐಪಿಎಲ್​ನಲ್ಲಿ ಹೊಸ ಅಧ್ಯಾಯವನ್ನು ಸತತ ಸೋಲುಗಳಿಂದ ಶುರು ಮಾಡಿ ಭರ್ಜರಿ ಕಮ್​ಬ್ಯಾಕ್​ ಮಾಡಿದ ಆರ್​ಸಿಬಿ ತಂಡವು ಅಭಿಮಾನಿಗಳನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ.

    ಇನ್ನೂ ಆರ್​ಸಿಬಿ ತಂಢದ ಆಟಗಾರ ದಿನೇಶ್​ ಕಾರ್ತಿಕ್​ ನಿವೃತ್ತಿ ಘೋಷಿಸಿದ್ದು, ಫಿನಿಶರ್​ ಆಗಿ ಹೆಚ್ಚು ಖ್ಯಾತಿ ಪಡೆದಿದ್ದರು. ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದ ದಿನೇಶ್​ ನಿವೃತ್ತಿಯ ಬಳಿಕ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದು, ಆರ್​ಸಿಬಿ ಅಭಿಮಾನಿಗಳನ್ನು ಹಾಡಿಹೊಗಳಿದ್ದಾರೆ.

    ಇದನ್ನೂ ಓದಿ: ಅಯೋಧ್ಯೆಯಲ್ಲಿ ಭೀಕರ ರಸ್ತೆ ಅಪಘಾತ; ಕಲಬುರಗಿ ಮೂಲದ ಮೂವರು ಭಕ್ತರು ಸಾವು

    ಆರ್​ಸಿಬಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ದಿನೇಶ್​ ಕಾರ್ತಿಕ್, ಆರ್​ಸಿಬಿ ತಂಡವು ಅಸಾಧಾರಣವಾಗಿದ್ದು, ಆರ್​ಸಿಬಿ ಎಂದರೆ ನನ್ನ ಪ್ರಕಾರ ಅದು ಅಭಿಮಾನಿಗಳು ಎಂದು ಹೇಳುತ್ತೇನೆ. ನಾನು ಆರ್​ಸಿಬಿ ಬಗ್ಗೆ ಯೋಚಿಸಿದಾಗ ಮೊದಲಿಗೆ ನನ್ನ ತಲೆಗೆ ಬರುವುದು ಅಭಿಮಾನಿಗಳು. ಅಭಿಮಾನಿಗಳು ಆರ್​ಸಿಬಿಯ ದೊಡ್ಡ ಭಾಗವಾಗಿದ್ದು, ವಿರಾಟ್​ ಕೊಹ್ಲಿಗಿಂತ ಇವರೇ ದೊಡ್ಡವರು. 2022ರಲ್ಲಿ ನಡೆದ ಟಿ-20 ವಿಶ್ವಕಪ್​ನಲ್ಲಿ ನಾನು ಆಡಿದ್ದೇನೆ ಎಂದರೆ ಅದಕ್ಕೆ ಕಾರಣ ಆರ್​ಸಿಬಿ ಅಭಿಮಾನಿಗಳು ಎಂದು ಹೇಳಲು ಬಯಸುತ್ತೇನೆ.

    ನಾನು ಕೆಲ ವರ್ಷಗಳ ಕಾಲ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಆಡದಿದ್ದಾಗ. ನಾನು ಪುನರಾಗಮನ ಮಾಡುವಲ್ಲಿ ಆರ್​ಸಿಬಿ ಅಭಿಮಾನಿಗಳು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಆರ್​ಸಿಬಿ ಅಭಿಮಾನಿಗಳಿಗೆ ವಿಶೇಷ ಸ್ಥಾನವಿದ್ದು, ಅವರು ನೀಢಿರುವ ಬೆಂಬಲ ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ದಿನೇಶ್​ ಕಾರ್ತಿಕ್​ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts