More

    ಐಪಿಎಲ್-17ರಲ್ಲಿ ಕೊಹ್ಲಿಗೆ ಆರೆಂಜ್ ಕ್ಯಾಪ್ ಫಿಕ್ಸ್ !: ಚಕ್ರವರ್ತಿಗೆ ಪರ್ಪಲ್ ಕ್ಯಾಪ್ ಚಾನ್ಸ್

    ಚೆನ್ನೈ: ಚೊಚ್ಚಲ ಬಾರಿ ಪ್ರಶಸ್ತಿ ಎತ್ತಿಹಿಡಿದ ಅಂಗಣ, ಅಂದಿನ ನಾಯಕನ ಮಾರ್ಗದರ್ಶನದಲ್ಲಿ 10 ವರ್ಷಗಳ ಬಳಿಕ ಮತ್ತೆ ಅದೇ ಅಂಗಣದಲ್ಲಿ ಚಾಂಪಿಯನ್ ಆಗುವ ಹಂಬಲದಲ್ಲಿರುವ ಕೋಲ್ಕತ ನೈಟ್‌ರೈಡರ್ಸ್‌ ತಂಡ ಐಪಿಎಲ್ 17ನೇ ಆವೃತ್ತಿಯಲ್ಲಿ ಭಾನುವಾರ ಚೆಪಾಕ್ ಅಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಸವಾಲು ಎದುರಿಸಲಿದೆ. ಕೆಕೆಆರ್ ಗೆದ್ದರೆ 3ನೇ ಬಾರಿ ಪ್ರಶಸ್ತಿ ಗೆದ್ದ ದಾಖಲೆ ಬರೆಯಲಿದ್ದು, ಸನ್‌ರೈಸರ್ಸ್‌ ಗೆದ್ದರೆ ಎಂಟು ವರ್ಷಗಳ ಬಳಿಕ 2ನೇ ಬಾರಿ ಪ್ರಶಸ್ತಿ ಜಯಿಸಿದ ಸಾಧನೆ ಮಾಡಲಿದೆ.

    ಕೊಹ್ಲಿಗೆ ಆರೆಂಜ್ ಕ್ಯಾಪ್ ಫಿಕ್ಸ್!: ಆರ್‌ಸಿಬಿಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಟೂರ್ನಿಯಲ್ಲಿ ಇದುವರೆಗೆ ಆಡಿದ 15 ಪಂದ್ಯಗಳಲ್ಲಿ 1 ಶತಕ, 5 ಅರ್ಧಶತಕಗಳ ಸಹಿತ 741 ರನ್ ಸಿಡಿಸಿದ್ದು, ಟೂರ್ನಿಯ ಗರಿಷ್ಠ ಸ್ಕೋರರ್ ಎನಿಸಿದ್ದು, ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಅಗ್ರಸ್ಥಾನ ಹೊಂದಿದ್ದಾರೆ. ಸಿಎಸ್‌ಕೆಯ ಋತುರಾಜ್ ಗಾಯಕ್ವಾಡ್ (583), ರಾಜಸ್ಥಾನದ ರಿಯಾನ್ ಪರಾಗ್ (573) ಹಾಗೂ ಸನ್‌ರೈಸರ್ಸ್‌ನ ಟ್ರಾವಿಸ್ ಹೆಡ್ (567) ಗರಿಷ್ಠ ರನ್‌ಸ್ಕೋರರ್‌ಗಳ ಪಟ್ಟಿಯಲ್ಲಿ ಕ್ರಮವಾಗಿ ಕ್ರಮವಾಗಿ 2, 3 ಮತ್ತು 4ನೇ ಸ್ಥಾನದಲ್ಲಿದ್ದಾರೆ. ಆದರೆ 2,3ನೇ ಸ್ಥಾನದಲ್ಲಿರುವ ಗಾಯಕ್ವಾಡ್, ಪರಾಗ್ ಅವರ ತಂಡಗಳು ಟೂರ್ನಿಯಿಂದ ಹೊರಬಿದ್ದಿವೆ. ಇದರಿಂದ ಕೊಹ್ಲಿ-ಟ್ರಾವಿಸ್ ಹೆಡ್ ನಡುವೆ ಪೈಪೋಟಿ ಇದ್ದು, ಇವರಿಬ್ಬರ ನಡುವೆ 174 ರನ್‌ಗಳ ಅಂತರವಿದೆ. ಕೊಹ್ಲಿ ಅವರನ್ನು ಹಿಂದಿಕ್ಕುವುದು ಹೆಡ್‌ಗೆ ಕಷ್ಟವೆನಿಸಿದರೂ, ಅಸಾಧ್ಯವೇನಲ್ಲ.

    ಚಕ್ರವರ್ತಿಗೆ ಪರ್ಪಲ್ ಕ್ಯಾಪ್ ಚಾನ್ಸ್
    ಟೂರ್ನಿಯ ಗರಿಷ್ಠ ವಿಕೆಟ್ ಪಡೆಯುವ ಬೌಲರ್ ನೀಡಲಾಗುವ ಪರ್ಪಲ್ ಕ್ಯಾಪ್ ಸದ್ಯ ಅಗ್ರಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್‌ನ ಹರ್ಷಲ್ ಪಟೇಲ್ (24) ಬಳಿಯಿದೆ. ಮುಂಬೈ ಇಂಡಿಯನ್ಸ್‌ನ ಜಸ್‌ಪ್ರೀತ್ ಬುಮ್ರಾ (20), ಕೆಕೆಆರ್‌ನ ವರುಣ್ ಚಕ್ರವರ್ತಿ (20) ಹಾಗೂ ಸನ್‌ರೈಸರ್ಸ್‌ನ ಟಿ.ನಟರಾಜನ್ (19) ನಂತರದಲ್ಲಿದ್ದಾರೆ. ಆದರೆ ತವರಿನ ಅಂಗಣದಲ್ಲಿ ಆಡಲಿರುವ ವರುಣ್ ಚಕ್ರವರ್ತಿ ಹಾಗೂ ನಟರಾಜನ್ ನಡುವೆ ಚಕ್ರವರ್ತಿ ೇವರಿಟ್.
    ಹರ್ಷಲ್ ಪಟೇಲ್ ಅವರನ್ನು ಹಿಂದಿಕ್ಕಲು ಚಕ್ರವರ್ತಿಗೆ 5 ವಿಕೆಟ್‌ಗಳ ಅವಶ್ಯವಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts