More

    ಚೆಪಾಕ್‌ನಲ್ಲಿ ಐಪಿಎಲ್-17ರ ಫೈನಲ್: ಹೈದರಾಬಾದ್‌ಗೆ ಆಸೀಸ್ ನಾಯಕರ ಲಕ್, ದುಬಾರಿ ಆಟಗಾರರ ಮುಖಾಮುಖಿ

    ಚೆನ್ನೈ: ಚೊಚ್ಚಲ ಬಾರಿ ಪ್ರಶಸ್ತಿ ಎತ್ತಿಹಿಡಿದ ಅಂಗಣ, ಅಂದಿನ ನಾಯಕನ ಮಾರ್ಗದರ್ಶನದಲ್ಲಿ 10 ವರ್ಷಗಳ ಬಳಿಕ ಮತ್ತೆ ಅದೇ ಅಂಗಣದಲ್ಲಿ ಚಾಂಪಿಯನ್ ಆಗುವ ಹಂಬಲದಲ್ಲಿರುವ ಕೋಲ್ಕತ ನೈಟ್‌ರೈಡರ್ಸ್‌ ತಂಡ ಐಪಿಎಲ್ 17ನೇ ಆವೃತ್ತಿಯಲ್ಲಿ ಭಾನುವಾರ ಚೆಪಾಕ್ ಅಂಗಣದಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಸವಾಲು ಎದುರಿಸಲಿದೆ.

    ಹೈದರಾಬಾದ್‌ಗೆ ಆಸೀಸ್ ನಾಯಕರ ಲಕ್ : 10 ವರ್ಷಗಳ ಹಿಂದೆ ಕೆಕೆಆರ್ ತಂಡದಲ್ಲಿದ್ದ ಪ್ಯಾಟ್ ಕಮ್ಮಿನ್ಸ್ ಖರೀದಿಗೆ ಈ ಹಿಂದೆ ್ರಾಂಚೈಸಿಗಳ ಒಲವು ಹೆಚ್ಚಿರಲಿಲ್ಲ. ಆದರೆ 2022-23ರ ಆಶಸ್ ಸರಣಿ, 2ನೇ ಆವೃತ್ತಿಯ ಟೆಸ್ಟ್ ವಿಶ್ವ ಚಾಂಪಿಯನ್‌ಷಿಪ್, 2023ರ ಏಕದಿನ ವಿಶ್ವಕಪ್‌ನಲ್ಲಿ ಆಸೀಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಬಳಿಕ ಪ್ರಸ್ತುತ ವಿಶ್ವದ ಅತ್ಯುತ್ತಮ ನಾಯಕ ಎಂಬ ಖ್ಯಾತಿ ಪಡೆದ ಕಮ್ಮಿನ್ಸ್ ಸೇರ್ಪಡೆಗೆ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿತು. ಕಮ್ಮಿನ್ಸ್‌ರನ್ನು ಖರೀದಿಸುವಲ್ಲಿ ಯಶಸ್ವಿಯಾದ ಹೈದರಾಬಾದ್ ಫ್ರಾಂಚೈಸಿ ಅವರನ್ನು ನಾಯಕನಾಗಿ ನೇಮಕ ಮಾಡಿತು.

    ಇದರ ಫಲವಾಗಿ ಕಳೆದ ಆವೃತ್ತಿಯಲ್ಲಿ 10ನೇ ಸ್ಥಾನದಲ್ಲಿದ್ದ ತಂಡ ಈ ಬಾರಿ ಪ್ರಶಸ್ತಿಗಾಗಿ ಹೋರಾಡಲಿದೆ. ಜತೆಗೆ ಟಿ20 ಲೀಗ್‌ನಲ್ಲಿ ಮೊದಲ ಬಾರಿ ನಾಯಕನಾಗಿ ತಂಡವನ್ನು ಫೈನಲ್‌ಗೇರಿಸಿದ ಸಾಧನೆಯೂ ಕಮ್ಮಿನ್ಸ್ ಅವರದಾಗಿದೆ.ಈ ಹಿಂದೆ ಸನ್‌ರೈಸರ್ಸ್‌ ಆಸೀಸ್ ಆಟಗಾರನ ನೇತೃತ್ವದಲ್ಲಿ ಮೊದಲ ಕಪ್ ಜಯಿಸಿತ್ತು. ಆದ್ದರಿಂದ ಈಗ ಮತ್ತೆ ಅದೇ ಲಿತಾಂಶ ಪುನರಾವರ್ತಿಸುವ ನಿರೀಕ್ಷೆ ಅಭಿಮಾನಿಗಳಾದ್ದಾಗಿದೆ. 2016ರಲ್ಲಿ ಡೇವಿಡ್ ವಾರ್ನರ್ ನಾಯಕತ್ವದಲ್ಲಿ ಸನ್‌ರೈಸರ್ಸ್‌ ಚಾಂಪಿಯನ್ ಆಗಿತ್ತು. ಇದಲ್ಲದೆ ಸನ್‌ರೈಸರ್ಸ್‌ಗಿಂತ ಮೊದಲು ಹೈದರಾಬಾದ್ ಪ್ರತಿನಿಧಿಸಿದ್ದ ಡೆಕ್ಕನ್ ಚಾರ್ಜಸ್ ್ರಾಂಚೈಸಿ ಸಹ ಆಸ್ಟ್ರೇಲಿಯಾದ ಮಾಜಿ ಆಟಗಾರ ಆ್ಯಡಂ ಗಿಲ್‌ಕ್ರಿಸ್ಟ್ ಸಾರಥ್ಯದಲ್ಲಿ ಪ್ರಶಸ್ತಿ ಜಯಿಸಿತ್ತು.

    ದುಬಾರಿ ಆಟಗಾರರ ಮುಖಾಮುಖಿ: ಐಪಿಎಲ್‌ನ ಮಿನಿ ಹರಾಜಿನಲ್ಲಿ ದುಬಾರಿ ಮೊತ್ತಕ್ಕೆ ಸೇಲಾಗಿರುವ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ (20.50 ಕೋಟಿ ರೂ), ವೇಗಿ ಮಿಚೆಲ್ ಸ್ಟಾರ್ಕ್ (24.75 ಕೋಟಿ ರೂ.) ಪ್ರಶಸ್ತಿ ಸುತ್ತಿನಲ್ಲಿ ಎದುರಾಗಲಿದ್ದಾರೆ. ಟೂರ್ನಿಯ ಬಹುಮಾನ ಮೊತ್ತಕ್ಕಿಂತಲೂ ಹೆಚ್ಚಿನ ಸಂಭಾವನೆ ಪಡೆಯುವ ಇಬ್ಬರು ಆಟಗಾರರ ಖರೀದಿಗೆ ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದ ್ರಾಂಚೈಸಿಗಳು ಪರಸ್ಪರ ಮುಖಾಮುಖಿಯಾಗುತ್ತಿರುವುದು ವಿಶೇಷವೆನಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts