More

  ಬಿಳಿ ನಾಗರಹಾವು ಪತ್ತೆ!; ನಿನ್ನೆ ಕೆಂಪು, ಇವತ್ತು ಬಿಳಿ ಹಾವು..ಬುಸ್​..ಬುಸ್ ನಾಗಪ್ಪ ಏನಪ್ಪಾ ನಿನ್ನ ಲೀಲೆ..

  ಬೆಂಗಳೂರು:  ಪ್ರಾಣಿ ಪ್ರಪಂಚಕ್ಕೆ ಸಂಬಂಧಿಸಿದ ದೃಶ್ಯಗಳು ನಮ್ಮನ್ನು ಸದಾ ಬೆರಗುಗೊಳಿಸುತ್ತವೆ. ಕೆಲವು ವಿಶೇಷ ಜೀವಿಗಳು ಕಾಣಿಸಿಕೊಂಡು ಎಲ್ಲರ ಗಮನ ಸೆಳೆಯುತ್ತವೆ. ಇತ್ತೀಚೆಗೆ ವೈಟ್ ಕಿಂಗ್ ಕೋಬ್ರಾಗೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಚರ್ಚೆಗೆ ಗ್ರಾಸವಾಗಿದೆ.

  ಹಾವುಗಳನ್ನು ಕಂಡರೆ ಹಲವರು ಹೆದರಿ ಓಡಿ ಹೋಗುತ್ತಾರೆ. ಯಾಕೆಂದರೆ.. ಹಾವು ವಿಷಕಾರಿ.. ಕಚ್ಚಿದರೆ.. ಮಾರಣಾಂತಿಕವಾಗುತ್ತದೆ. ಸಕಾಲದಲ್ಲಿ ಚಿಕಿತ್ಸೆ ದೊರೆಯದಿದ್ದರೆ ಪ್ರಾಣಹಾನಿಯಾಗುತ್ತದೆ.

  ಈ ರೀತಿಯ ಬಿಳಿ ನಾಗರಹಾವುಗಳು ಅಪರೂಪಕ್ಕೆ ಕಾಣಸಿಗುತ್ತವೆ. ಅವು ಹೆಚ್ಚಾಗಿ ಅರಣ್ಯ ಪ್ರದೇಶಗಳಲ್ಲಿ ಕಂಡುಬರುತ್ತವೆ.

  ಈ ಹಾವನ್ನು ಕಂಡರೆ ಹಲವರಿಗೆ ಭಯವಾಗುತ್ತದೆ. ಆದರೆ, ಈ ಹಾವನ್ನು ನೋಡಿದ ನಂತರ ಎಲ್ಲರೂ ಶಾಕ್ ಆಗಿದ್ದಾರೆ. ಸ್ನೇಕ್ ಫ್ರೆಂಡ್ ಎಂಬ ಬಳಕೆದಾರರು ಈ ಬಿಳಿ ನಾಗರಹಾವಿನ ವೀಡಿಯೊವನ್ನು ಹಂಚಿಕೊಂಡಾಗ, ನೂರಾರು ಜನರು ಅದನ್ನು ವೀಕ್ಷಿಸಿದರು ಮತ್ತು ಇದು ಅದ್ಭುತವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

  ಈ ವೀಡಿಯೋದಲ್ಲಿ ಹಾವಿನ ಬಳಿ ಹಾವು ಕಾಣಬಹುದು.. ಈ ಬಿಳಿ ಹಾವು ಯಾವುದೇ ಭಯವಿಲ್ಲದೆ ಮಲಗಿರುವುದು ಕಂಡು ಬಂದಿದೆ. ಇಂತಹ ಬಿಳಿ ನಾಗರಹಾವುಗಳು ಬಹಳ ಅಪರೂಪ ಎಂದು ಹೇಳಲಾಗುತ್ತದೆ.

   ಕೆಲವು ದಿನಗಳ ಹಿಂದೆ ಕೆಂಪುಬಣ್ಣದ ಹಾವಿನ ವಿಡಿಯೋ ವೈರಲ್​​ ಆಗಿತ್ತು.   ಹಾವಿನ ಬಣ್ಣ ಕೆಂಪು. ಇದು ಬಹಳ ಅಪರೂಪದ ಹಾವು. ಕೆಂಪು ಬಣ್ಣದ ಹಾವನ್ನು ರೆಡ್ ಸ್ಪಿಟಿಂಗ್ ಕೋಬ್ರಾ ಎಂದು ಕರೆಯಲಾಗುತ್ತದೆ. ಕೆಂಪು ಬಣ್ಣವನ್ನು ಹೊಂದಿರುವ ಈ ನಾಗರ ಹಾವು ಅಪರೂಪದ ಜಾತಿಯಾಗಿದೆ. ಇದು ಆಫ್ರಿಕಾದಲ್ಲಿ ಕಂಡುಬರುತ್ತದೆ. ಈಜಿಪ್ಟ್, ತಾಂಜಾನಿಯಾ, ಉಗಾಂಡಾ, ಸುಡಾನ್ ಮುಂತಾದ ಸ್ಥಳಗಳಲ್ಲಿ ಕಂಡುಬರುವ ಈ ಹಾವಿನ ವೈಜ್ಞಾನಿಕ ಹೆಸರು ನಜಾ ಪಲ್ಲಿಡಾ. ಈ ಹಾವುಗಳು ಅತ್ಯಂತ ವಿಷಕಾರಿ ಎಂದು ಹೇಳಲಾಗುತ್ತದೆ.

  ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿರುವ ಈ ವಿಡಿಯೋವನ್ನು ಇದುವರೆಗೆ ಲಕ್ಷ ಲಕ್ಷ ಮಂದಿ ವೀಕ್ಷಿಸಿದ್ದಾರೆ. ವಿಷಪೂರಿತ ನಾಗರಹಾವನ್ನು ನೋಡಿದ ಜನರು ಮತ್ತು ನೆಟಿಜನ್‌ಗಳು ಅಚ್ಚರಿಗೊಂಡಿದ್ದಾರೆ.

  ಗರ್ಭಿಣಿ ದೀಪಿಕಾಳ ಆರೈಕೆಗಾಗಿ ಇಂಥಾ ತ್ಯಾಗಕ್ಕೆ ಸಿದ್ಧರಾದ್ರಾ ರಣವೀರ್ ಸಿಂಗ್?

  ಕೆಂಪು ಬಣ್ಣದ ಬುಸ್​..ಬುಸ್ ನಾಗರಹಾವು; ಅಬ್ಬಬ್ಬಾ ನಾಗಪ್ಪ ಇದು ವಿಚಿತ್ರ ಎಂದ್ರು ನೆಟ್ಟಿಗರು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts