More

    ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿಗೂ ಡೀಪ್‌ಫೇಕ್‌ ಕಾಟ; ವಯಸ್ಕರ ವೆಬ್‌ಸೈಟ್‌ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿದ ಕಿರಾತಕರು!

    ಇಟಲಿ: ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಡೀಪ್‌ಫೇಕ್‌ಗೆ ಗುರಿಯಾಗಿದ್ದಾರೆ. ಡೀಪ್‌ಫೇಕ್ ಪೋ#ರ್ನ್ ವಿಡಿಯೋಗಳನ್ನು ಸೃಷ್ಟಿಸಿ, ಆನ್‌ಲೈನ್‌ನಲ್ಲಿ ಪ್ರಸಾರ ಮಾಡಿದ ಆರೋಪದ ಮೇಲೆ ನಷ್ಟವನ್ನು ತುಂಬಿಕೊಡಲು ಆ ವ್ಯಕ್ತಿಯಿಂದ 100,000 ಯುರೋ ಅಥವಾ $109,345 (ಇದು ಭಾರತೀಯ ಕರೆನ್ಸಿಯಲ್ಲಿ ಅಂದಾಜು 90 ಲಕ್ಷ ರೂ) ವನ್ನು ಕೊಡಲು ಜಾರ್ಜಿಯಾ ಮೆಲೋನಿ ಒತ್ತಾಯಿಸುತ್ತಿದ್ದಾರೆ. 

    ವಯಸ್ಕ ಚಲನಚಿತ್ರ ತಾರೆಯ ಮುಖದ ಮೇಲೆ ಇಬ್ಬರು ವ್ಯಕ್ತಿಗಳು ಮೆಲೋನಿಯ ಮುಖವನ್ನು ಹಾಕಿದ್ದಾರೆ ಎಂದು ಹೇಳಲಾಗುತ್ತದೆ. ನಂತರ ಅದನ್ನು ಅಮೇರಿಕನ್ ವಯಸ್ಕರ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗಿದೆ. ಆರೋಪಿಗಳಲ್ಲಿ ತಂದೆ ಮತ್ತು ಮಗ ಸೇರಿದ್ದಾರೆ. ಮಗನ ವಯಸ್ಸು 40 ವರ್ಷ ಮತ್ತು ಅವನ ತಂದೆಯ ವಯಸ್ಸು 73 ವರ್ಷ. ಇಬ್ಬರೂ ಸೇರಿ ಮೆಲೋನಿಯ ಅವರ ಅಶ್ಲೀಲ ವಿಡಿಯೋ ಮಾಡಿದ್ದಾರೆ. ಮೆಲೋನಿ ಇಬ್ಬರೂ ಆರೋಪಿಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. 

    ವಿಡಿಯೋ ಅಪ್‌ಲೋಡ್ ಮಾಡಲು ಬಳಸಿದ ಸ್ಮಾರ್ಟ್‌ಫೋನ್ ಟ್ರ್ಯಾಕ್ ಮಾಡುವ ಮೂಲಕ ಆರೋಪಿಗಳನ್ನು ಹಿಡಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಡಿಯೋವನ್ನು ಇದುವರೆಗೆ ಲಕ್ಷಾಂತರ ಬಾರಿ ವೀಕ್ಷಿಸಲಾಗಿದೆ. 

    ಪರಿಹಾರದ ಮೊತ್ತವನ್ನು ಮೆಲೋನಿ ಪುರುಷ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಸಹಾಯ ಮಾಡಲು ಬಳಸುತ್ತಾರಂತೆ. ಪರಿಹಾರದ ಬೇಡಿಕೆಯು ಇಂತಹ ದೌರ್ಜನ್ಯಕ್ಕೆ ಒಳಗಾದ ಇತರ ಮಹಿಳೆಯರಿಗೆ ಸಂದೇಶವಾಗಿದೆ ಎಂದು ಮೆಲೋನಿ ಅವರ ವಕೀಲರಾದ ಮಾರಿಯಾ ಗಿಯುಲಿಯಾ ಮರೋಂಗಿಯು ಹೇಳಿದ್ದಾರೆ. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಧ್ವನಿ ಎತ್ತಲು ಭಯಪಡಬಾರದು ಎನ್ನುತ್ತಾರೆ ಮೆಲೋನಿ. 

    ಡೀಪ್‌ಫೇಕ್ ಎಂದರೇನು?
    ಡೀಪ್‌ಫೇಕ್ ಎಂಬ ಪದವು ಮೊದಲು 2017 ರ ಕೊನೆಯಲ್ಲಿ ಕಾಣಿಸಿಕೊಂಡಿತು. ರೆಡ್ಡಿಟ್‌ನಲ್ಲಿ ಅದೇ ಹೆಸರಿನ ಬಳಕೆದಾರರು ಓಪನ್ ಸೋರ್ಸ್ ಫೇಸ್ ಸ್ವಾಪಿಂಗ್ ತಂತ್ರಜ್ಞಾನದೊಂದಿಗೆ ಮಾಡಿದ ಪೋರ್ನ್ ವಿಡಿಯೋ ಹಂಚಿಕೊಳ್ಳಲು ವೇದಿಕೆಯನ್ನು ರಚಿಸಿದ್ದರು. ಡೀಪ್‌ಫೇಕ್ ಎಂದರೆ ಸುಳ್ಳು. ಕೃತಕ ಬುದ್ಧಿಮತ್ತೆಯ ಸಹಾಯದಿಂದ, ಅಂತಹ ಚಿತ್ರಗಳು ಅಥವಾ ಚಲನಚಿತ್ರಗಳನ್ನು ರಚಿಸಲಾಗುತ್ತದೆ. ಅದು ನಿಜವಲ್ಲ. ಆದರೆ ಇದು ನಿಜದಂತೆ ಕಾಣುತ್ತದೆ. ಇದು ಸಾರ್ವಜನಿಕ ನಂಬಿಕೆ ಮತ್ತು ಸತ್ಯಕ್ಕೆ ಧಕ್ಕೆಯಾಗಿದೆ. 

    ಇಂಟೆಲಿಜೆನ್ಸ್‌ನ ಶಕ್ತಿಯಿಂದ ಮಾಡಿದ ವಿಡಿಯೋಗಳು ಅತ್ಯಂತ ಕಳವಳಕಾರಿ ವಿಷಯ ಎಂದು ಡೀಪ್‌ಫೇಕ್ ವಿಡಿಯೋಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದರು. ಡೀಪ್‌ಫೇಕ್‌ಗಳು ತಪ್ಪು ಮಾಹಿತಿಯನ್ನು ಹರಡಲು, ಸಾರ್ವಜನಿಕ ಅಭಿಪ್ರಾಯವನ್ನು ವಿರೂಪಗೊಳಿಸಲು ಮತ್ತು ಖ್ಯಾತಿಗೆ ಹಾನಿ ಮಾಡಲು ಪ್ರಬಲ ಸಾಧನವಾಗಿದೆ.  ಡೀಪ್‌ಫೇಕ್‌ಗಳ ಬೆಳೆಯುತ್ತಿರುವ  ಬಗ್ಗೆ ಅನೇಕ ವಿಶ್ವ ನಾಯಕರು ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

    ‘ಓಲೆ ಓಲೆ….’ ಹಾಡಿಗೆ  ಸಖತ್ ಸ್ಟೆಪ್ಸ್ ಹಾಕಿದ ರಿಂಕು ಸಿಂಗ್; ವಿಡಿಯೋ ವೈರಲ್

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts