More

    ‘ಓಲೆ ಓಲೆ….’ ಹಾಡಿಗೆ  ಸಖತ್ ಸ್ಟೆಪ್ಸ್ ಹಾಕಿದ ರಿಂಕು ಸಿಂಗ್; ವಿಡಿಯೋ ವೈರಲ್

    ನವದೆಹಲಿ: ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಈ ಸೀಸನ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆಟ ಆರಂಭಿಸಲಿದೆ. ಎರಡೂ ತಂಡಗಳು ಮಾರ್ಚ್ 23 ರಂದು ಮುಖಾಮುಖಿಯಾಗಲಿವೆ. ಇದಕ್ಕೂ ಮೊದಲು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ಹೆಚ್ಚು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ ಆಟಗಾರ ರಿಂಕು ಸಿಂಗ್ ತಮ್ಮ ಕೋಚ್ ಚಂದ್ರಕಾಂತ್ ಪಂಡಿತ್ ಅವರೊಂದಿಗೆ ಸಖತ್ ಆಗಿ ಸ್ಟೆಪ್ಸ್ ಹಾಕುತ್ತಿದ್ದಾರೆ. ಹೌದು, ರಿಂಕು ಸಿಂಗ್ ಮತ್ತು ಚಂದ್ರಕಾಂತ್ ಪಂಡಿತ್ ‘ಓಲೆ ಓಲೆ’ ಹಾಡಿಗೆ ನೃತ್ಯ ಮಾಡುತ್ತಿದ್ದಾರೆ.

    ಕೋಲ್ಕತ್ತಾ ನೈಟ್ ರೈಡರ್ಸ್ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಿಂದ ವಿಡಿಯೋ ಹಂಚಿಕೊಂಡಿದೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಇವರಿಬ್ಬರ ಡ್ಯಾನ್ಸ್‌ ಅನ್ನು ಅಭಿಮಾನಿಗಳು ತುಂಬಾ ಇಷ್ಟಪಡ್ತಿದ್ದಾರೆ.  ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ.

    ರಿಂಕು ಸಿಂಗ್ ಅವರ ಐಪಿಎಲ್ ವೃತ್ತಿಜೀವನವನ್ನು ಗಮನಿಸಿದರೆ, ಅವರು ಇದುವರೆಗೆ 31 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 142.16 ಸ್ಟ್ರೈಕ್ ರೇಟ್ ಮತ್ತು 36.25 ಸರಾಸರಿಯಲ್ಲಿ 725 ರನ್ ಗಳಿಸಿದ್ದಾರೆ.  4 ಬಾರಿ ಐವತ್ತು ರನ್ ಗಡಿ ದಾಟಿದ್ದಾರೆ.  ಐಪಿಎಲ್‌ನಲ್ಲಿ ರಿಂಕು ಸಿಂಗ್ ಅವರ ಅತ್ಯುತ್ತಮ ಸ್ಕೋರ್ 67 ರನ್. 

    ಇದಲ್ಲದೇ ರಿಂಕು ಸಿಂಗ್ 2 ಏಕದಿನ ಹಾಗೂ 15 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಭಾರತದ ಪರ T20 ಪಂದ್ಯಗಳಲ್ಲಿ, ರಿಂಕು ಸಿಂಗ್ 176.24 ಸ್ಟ್ರೈಕ್ ರೇಟ್ ಮತ್ತು 89 ರ ಸರಾಸರಿಯಲ್ಲಿ 365 ರನ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ರಿಂಕು ಸಿಂಗ್ ಅವರ ಗರಿಷ್ಠ ಸ್ಕೋರ್ 69 ರನ್.  ಇಲ್ಲಿ ಎರಡು ಬಾರಿ ರಿಂಕು ಸಿಂಗ್ ಐವತ್ತು ರನ್‌ಗಳ ಗಡಿ ದಾಟಿದ್ದಾರೆ. 

    ಚುನಾವಣೆ ವೇಳೆ ವಶಪಡಿಸಿಕೊಂಡ ಮದ್ಯ, ಹಣ ಎಲ್ಲಿಗೆ ಹೋಗುತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts