ಸೋನುಸೂದ್ ವಾಟ್ಸ್​ಆ್ಯಪ್ ಖಾತೆ ಮರುಸ್ಥಾಪನೆ: 61 ಗಂಟೆಗಳಲ್ಲಿ ಓದದ ಸಂದೇಶಗಳೆಷ್ಟು ಗೊತ್ತಾ?

sonu sood
Published on

ಮುಂಬೈ: ನಟ ಸೋನು ಸೂದ್ ತಮ್ಮ ಮುಂಬರುವ ಚಿತ್ರ 'ಫತೇಹ್' ಬಿಡುಗಡೆಗೆ ತಯಾರಿ ನಡೆಸುತ್ತಿದ್ದಾರೆ. ಇದರ ನಡುವೆ 61 ಗಂಟೆ ನಿರ್ಬಂಧಿಸಿದ ನಂತರ ತಮ್ಮ ವಾಟ್ಸಾಪ್‌ಗೆ ಪ್ರವೇಶವನ್ನು ಮರಳಿ ಪಡೆದಿದ್ದಾರೆ.

ಸುಮಾರು 60 ಗಂಟೆಗಳ ಕಾಲ ತನ್ನ ಖಾತೆಯನ್ನು ಪ್ರವೇಶಿಸಲಾಗದೆ, ಸಾರ್ವಜನಿಕರೊಂದಿಗೆ ಸಂಪರ್ಕ ಸಾಧಿಸಲಾಗದೆ ಸಮಸ್ಯೆ ಎದುರಿಸಿದ ನಂತರ ಪ್ಲಾಟ್‌ಫಾರ್ಮ್‌ಗೆ ಮರಳಿದರು. ಭಾನುವಾರ ಸೋನು ತನ್ನ 27.7 ಮಿಲಿಯನ್ ಅನುಯಾಯಿಗಳನ್ನು ನವೀಕರಿಸಿದ್ದು, ತನ್ನ ಖಾತೆಯ ಸ್ಥಿತಿಯ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಅಂತಿಮವಾಗಿ ನನ್ನ ವಾಟ್ಸ್​ಆ್ಯಪ್​ಅನ್ನು ಹಿಂಪಡೆಯಲಾಗಿದೆ. 61 ಗಂಟೆಗಳಲ್ಲಿ 9,483 ಓದದಿರುವ ಸಂದೇಶಗಳು ಇದ್ದವು. ಧನ್ಯವಾದಗಳು ಎಂದು ಅವರು ಬರೆದಿದ್ದಾರೆ

ಸೋನು X (ಟ್ವಿಟರ್) ಗೆ ಹಿಂದಿರುಗಿದ ಬಳಿಕ ನನ್ನ ಸಂಖ್ಯೆ ಇದೇ ರೀತಿ ವ್ಯಾಟ್ಸ್​ಆ್ಯಪ್​ನಲ್ಲಿ ಹಲವು ಬಾರಿ ಕಾರ್ಯನಿರ್ವಹಿಸಿಲ್ಲ. ನಾನು ಇಂತಹ ಸಮಸ್ಯೆಯನ್ನು ಈ ಹಿಂದೆಯೂ ಎದುರಿಸಿದ್ದೇನೆ ಎಂದು 'ಎಕ್ಸ್​' ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಸೋನು ಅವರ ಚೊಚ್ಚಲ ನಿರ್ದೇಶನದ 'ಫತೇಹ್' ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಶಕ್ತಿ ಸಾಗರ್ ಪ್ರೊಡಕ್ಷನ್ಸ್ ಮತ್ತು ಜೀ ಸ್ಟುಡಿಯೋಸ್ ನಿರ್ಮಿಸಿದ ಈ ಚಲನಚಿತ್ರವು ಸೈಬರ್ ಅಪರಾಧದ ಹಿನ್ನೆಲೆ ಹೊಂದಿದೆ. ಹಾಲಿವುಡ್ ಸ್ಟಂಟ್​ತಜ್ಞ ಲೀ ವಿಟ್ಟೇಕರ್ ಮೇಲ್ವಿಚಾರಣೆಯಲ್ಲಿ ಕೆಲವು ಸಾಹಸ ದೃಶ್ಯಗಳು ಚಿತ್ರದಲ್ಲಿ ಇರಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net