More

    ಮೋಸ ಮಾಡಲು ಡೀಪ್‌ಫೇಕ್ ಚಿತ್ರ, ವೀಡಿಯೊ ಬಳಸಿಕೊಂಡು ನಕಲಿ ಸಂದರ್ಶನ: ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ಇನ್ಫೋಸಿಸ್​ ನಾರಾಯಣ ಮೂರ್ತಿ

    ಬೆಂಗಳೂರು: ಸ್ವಯಂಚಾಲಿತ ವ್ಯಾಪಾರದ ಅಪ್ಲಿಕೇಶನ್‌ಗಳನ್ನು (automated trading applications) ತಾವು ಅನುಮೋದಿಸುವ ಅಥವಾ ಅದರಲ್ಲಿ ಹೂಡಿಕೆ ಮಾಡುವ ಕುರಿತ ವರದಿಗಳನ್ನು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್ .ರಾಯಣ ಮೂರ್ತಿ ಗುರುವಾರ ನಿರಾಕರಿಸಿದ್ದಾರೆ. ಇಂತಹ ಸುದ್ದಿಗಳು ವಂಚನೆಯ ವೆಬ್‌ಸೈಟ್‌ಗಳಲ್ಲಿ ಕಾಣಿಸಿಕೊಂಡಿವೆ ಎಂದು ಅವರು ತಿಳಿಸಿದ್ದಾರೆ.

    “ಬಿಟಿಸಿ ಎಐ ಎವೆಕ್ಸ್, ಬ್ರಿಟಿಷ್ ಬಿಟ್‌ಕಾಯಿನ್ ಪ್ರಾಫಿಟ್​, ಬಿಟ್ ಲೈಟ್ ಸಿಂಕ್, ಇಮ್ಮೆಡಿಯೆಟ್​ ಮೊಮೆಂಟಮ್, ಕ್ಯಾಪಿಟಾಲಿಕ್ಸ್ ವೆಂಚರ್ಸ್ ಮುಂತಾದ ಹೆಸರಿನ ಸ್ವಯಂಚಾಲಿತ ಟ್ರೇಡಿಂಗ್ ಅಪ್ಲಿಕೇಶನ್‌ಗಳನ್ನು ಇತ್ತೀಚಿನ ತಿಂಗಳುಗಳಲ್ಲಿ ನಾನು ಅನುಮೋದಿಸಿದ್ದೇನೆ ಅಥವಾ ಹೂಡಿಕೆ ಮಾಡಿದ್ದೇನೆ ಎಂದು ಸೋಷಿಯಲ್​ ಮೀಡಿಯಾ ಆ್ಯಪ್​ಗಳು ಮತ್ತು ಇಂಟರ್ನೆಟ್‌ನಲ್ಲಿ ಲಭ್ಯವಿರುವ ವಿವಿಧ ವೆಬ್‌ಪುಟಗಳ ಮೂಲಕ ಹಲವಾರು ನಕಲಿ ಸುದ್ದಿಗಳನ್ನು ಪ್ರಚಾರ ಮಾಡಲಾಗಿದೆ. ಈ ಅಪ್ಲಿಕೇಶನ್‌ಗಳು ಅಥವಾ ವೆಬ್‌ಸೈಟ್‌ಗಳೊಂದಿಗಿನ ಯಾವುದೇ ಅನುಮೋದನೆ, ಸಂಬಂಧವನ್ನು ನಾನು ಸ್ಪಷ್ಟವಾಗಿ ನಿರಾಕರಿಸುತ್ತೇನೆ” ಎಂದು ನಾರಾಯಣ ಮೂರ್ತಿ ಅವರು ಎಕ್ಸ್‌ ಸೋಷಿಯಲ್​ ಮೀಡಿಯಾ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

    ಈ ಸುದ್ದಿಗಳು ಮೋಸದ ವೆಬ್‌ಸೈಟ್‌ಗಳಲ್ಲಿ ಕಾಣಿಸಿಕೊಂಡಿವೆ, ಇವು ಜನಪ್ರಿಯ ಪತ್ರಿಕೆ ವೆಬ್‌ಸೈಟ್‌ಗಳೆಂದು ಮರೆಮಾಚುತ್ತವೆ. ಇವುಗಳಲ್ಲಿ ಕೆಲವು ಡೀಪ್‌ಫೇಕ್ ಚಿತ್ರಗಳು ಮತ್ತು ವೀಡಿಯೊಗಳನ್ನು ಬಳಸಿಕೊಂಡು ನಕಲಿ ಸಂದರ್ಶನಗಳನ್ನು ಸಹ ಪ್ರಕಟಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

    “ಈ ದುರುದ್ದೇಶಪೂರಿತ ಸೈಟ್‌ಗಳ ವಿಷಯಗಳಿಗೆ ಮತ್ತು ಅವರು ನಿಮಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ಉತ್ಪನ್ನಗಳು ಅಥವಾ ಸೇವೆಗಳಿಗೆ ಬಲಿಯಾಗದಂತೆ ನಾನು ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತೇನೆ. ದಯವಿಟ್ಟು ಇಂತಹ ಯಾವುದೇ ಸಂಗತಿಗಳನ್ನು ಸಂಬಂಧಪಟ್ಟ ನಿಯಂತ್ರಣ ಅಧಿಕಾರಿಗಳಿಗೆ ವರದಿ ಮಾಡಿ” ಎಂದು ಮೂರ್ತಿ ಅವರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

    ಬಿಜೆಪಿ ಕಾರ್ಯಕರ್ತನ ಕೈತುಂಡರಿಸಿದ ವ್ಯಕ್ತಿ ಮನೆ ನೆಲಸಮ: ಮಧ್ಯಪ್ರದೇಶದಲ್ಲಿ ಶುರುವಾಯಿತು ಬುಲ್​ಡೋಜರ್​ ಕಲ್ಚರ್​

    ವಾರ್ಷಿಕವಾಗಿ ಶೇಕಡಾ 45ಕ್ಕೂ ಅಧಿಕ ಲಾಭ ತಂದುಕೊಟ್ಟ ಮ್ಯೂಚುವಲ್ ಫಂಡ್​ಗಳಿವು: ಶೇಕಡಾ 80 ಲಾಭ ನೀಡಿದ ಫಂಡ್​ ಯಾವುದು ಗೊತ್ತೆ?

    ಸಂಸತ್​ ಭದ್ರತಾ ಲೋಪ ಪರಿಶೀಲಿಸಿದ ಪ್ರಧಾನಿ; ತನಿಖೆಗೆ ಸಮಿತಿ ರಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts